ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ 4 ವರ್ಷದ ಮಗುವಿಗೆ ಕೊರೊನಾ, ಒಂದೇ ದಿನ 30 ಕೇಸ್

|
Google Oneindia Kannada News

ಬೆಂಗಳೂರು, ಏಪ್ರಿಲ್ 30: ಕರ್ನಾಟಕದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುತ್ತಿದೆ ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೆ ರಾಜ್ಯಕ್ಕೆ ಆತಂಕ ಹೆಚ್ಚಾಗಿದೆ. ಇಂದು ಒಂದೇ ದಿನ ರಾಜ್ಯದಲ್ಲಿ 30 ಹೊಸ ಪ್ರಕರಣಗಳು ದಾಖಲಾಗಿದೆ.

ನಿನ್ನೆ ಸಂಜೆಯಿಂದ ಇಂದು ಮಧ್ಯಾಹ್ನದವರೆಗೂ ಬಂದಿದ್ದ ವರದಿಯಲ್ಲಿ 22 ಕೇಸ್‌ಗಳು ದೃಢವಾಗಿತ್ತು. ಮಧ್ಯಾಹ್ನದಿಂದ ಸಂಜೆ 5 ಗಂಟೆವರೆಗಿನ ವರದಿಯಲ್ಲಿ ಮತ್ತೆ 8 ಕೇಸ್‌ಗಳು ಖಚಿತವಾಗಿದೆ.

ರಾಜ್ಯದಲ್ಲಿ ಮತ್ತೆ 22 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆರಾಜ್ಯದಲ್ಲಿ ಮತ್ತೆ 22 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆ

ಈ ಮೂಲಕ ಒಂದೇ ದಿನ ರಾಜ್ಯದಲ್ಲಿ 30 ಸೋಂಕಿತರು ವರದಿಯಾಗಿದ್ದು, ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 565ಕ್ಕೆ ಏರಿಕೆಯಾಗಿದೆ. ಮುಂದೆ ಓದಿ...

ನಾಲ್ಕು ವರ್ಷದ ಮಗುವಿಗೆ ಸೋಂಕು

ನಾಲ್ಕು ವರ್ಷದ ಮಗುವಿಗೆ ಸೋಂಕು

ಸಂಜೆ ಬಿಡುಗಡೆಯಾದ ವರದಿಯಲ್ಲಿ ಏಳು ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಒಂದು ಕೇಸ್ ಕಲಬುರಗಿಯಲ್ಲಿ ದಾಖಲಾಗಿದೆ. ಬೆಂಗಳೂರಿನ ಏಳು ವ್ಯಕ್ತಿಗಳ ಪೈಕಿ ನಾಲ್ಕು ವರ್ಷದ ಹೆಣ್ಣು ಮಗುವಿಗೆ ಕೊರೊನಾ ಸೋಂಕು ತಗುಲಿದೆ. ಈ ಹಿಂದಿನ 292ನೇ ರೋಗಿಯ ಸಂಪರ್ಕದಲ್ಲಿದ್ದ ಕಾರಣ ಐದು ಜನರಿಗೆ (ನಾಲ್ಕು ವರ್ಷದ ಮಗು ಸೇರಿ) ಸೋಂಕು ಅಂಟಿಕೊಂಡಿದೆ.

ಬೆಂಗಳೂರಿಗೆ ಮತ್ತೆ ಆಘಾತ

ಬೆಂಗಳೂರಿಗೆ ಮತ್ತೆ ಆಘಾತ

281ನೇ ರೋಗಿ ಸಂಪರ್ಕದಿಂದ ಒಬ್ಬ ವ್ಯಕ್ತಿಗೆ ಸೋಂಕು ತಗುಲಿದೆ. ಮತ್ತು 64 ವರ್ಷದ ವೃದ್ದನಿಗೂ ಸೋಂಕು ತಗುಲಿದ್ದು, ಈ ವ್ಯಕ್ತಿಯ ಪ್ರಯಾಣದ ವಿವರ ಲಭ್ಯವಾಗಿಲ್ಲ. ಕಳೆದ ಎರಡ್ಮೂರು ದಿನದಿಂದ ಸಿಲಿಕಾನ್‌ ಸಿಟಿಯಲ್ಲಿ ಕೊವಿಡ್‌ ಕೇಸ್‌ಗಳ ಸಂಖ್ಯೆ ಕಡಿಮೆ ಇದ್ದ ಕಾರಣ, ಬೆಂಗಳೂರಿಗೂ ಲಾಕ್‌ಡೌನ್‌ ವಿನಾಯಿತಿ ಸಿಗುವ ನಿರೀಕ್ಷೆ ಇತ್ತು. ಆದರೆ, ಇಂದಿನ ವರದಿ ಆ ನಿರೀಕ್ಷೆಯನ್ನು ಹುಸಿಗೊಳಿಸಬಹುದು.

20 ದಿನದ ಹಸುಗೂಸಿಗೆ ವಕ್ಕರಿಸಿದ ಕೊರೊನಾ ವೈರಸ್20 ದಿನದ ಹಸುಗೂಸಿಗೆ ವಕ್ಕರಿಸಿದ ಕೊರೊನಾ ವೈರಸ್

ಟಾಪ್ ಐದು ಜಿಲ್ಲೆಗಳು

ಟಾಪ್ ಐದು ಜಿಲ್ಲೆಗಳು

ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತರನ್ನು ಹೊಂದಿರುವ ಜಿಲ್ಲೆಗಳ ಪೈಕಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಒಟ್ಟು 141 ಸೋಂಕಿತರು ವರದಿಯಾಗಿದ್ದಾರೆ. ಮೈಸೂರಿನಲ್ಲಿ 88 ಜನರಿಗೆ ಕೊರೊನಾ ಅಂಟಿಕೊಂಡಿದೆ. ಬೆಳಗಾವಿಯಲ್ಲಿ 67 ಜನರಿಗೆ, ವಿಜಯಪುರದಲ್ಲಿ 43 ಹಾಗೂ ಕಲಬುರಗಿಯಲ್ಲಿ 53 ಜನರಿಗೆ ಕೊವಿಡ್ ಸೋಂಕು ತಗುಲಿದೆ.

ಲಾಕ್‌ಡೌನ್ ಸಡಿಲಿಕೆ ಬಗ್ಗೆ ಆತಂಕ

ಲಾಕ್‌ಡೌನ್ ಸಡಿಲಿಕೆ ಬಗ್ಗೆ ಆತಂಕ

ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂಬ ಕಾರಣದಿಂದ ಗ್ರೀನ್ ಜೋನ್‌ಗಳಲ್ಲಿ ಲಾಕ್‌ಡೌನ್‌ ಮಾಡಲು ರಾಜ್ಯ ಸರ್ಕಾರ ಆದೇಶಿಸಿದೆ. ಕಳೆದ ಎರಡ್ಮೂರು ದಿನದಿಂದ ಬೆಂಗಳೂರಿನಲ್ಲಿ ಕಡಿಮೆ ಪ್ರಕರಣಗಳು ವರದಿಯಾಗಿದ್ದರಿಂದ ಮೇ 3ರ ಬಳಿಕ ಸಿಲಿಕಾನ್‌ ಸಿಟಿಗೂ ಸಡಿಲಿಕೆ ಸಿಗಬಹುದು ಎಂದು ಹೇಳಲಾಗುತ್ತಿತ್ತು. ಆದರೆ, ರಾಜ್ಯದಲ್ಲಿಂದು 30 ಸೋಂಕಿತರು ವರದಿಯಾಗಿರುವುದರಿಂದ ಮುಂದಿನ ದಿನಗಳು ಸವಾಲಾಗಲಿದೆ.

English summary
Total 30 COVID 19 Cases Reported Today In Karnataka, includes 4 Year old baby girl at bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X