New Khata: ಹೊಸ ಖಾತಾ ಮಾಡಿಸಿಕೊಳ್ಳಲು ಬೇಕಾಗುವ 4 ಪ್ರಮುಖ ದಾಖಲೆಗಳು, ವೆಚ್ಚ ವಿವರ

ಬೆಂಗಳೂರಿನಲ್ಲಿ ಆಸ್ತಿ ಇದ್ದರೂ ಯಾವುದೇ ಖಾತಾ ಮಾಡಿಸಿಕೊಳ್ಳದೆ ಇರುವವರಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಗುಡ್‌ನ್ಯೂಸ್‌ ಕೊಟ್ಟಿದೆ. ಬೆಂಗಳೂರಿನಲ್ಲಿ ಯಾವುದೇ ಖಾತಾ ಹೊಂದಿಲ್ಲದ ಆಸ್ತಿಗಳ ಸಂಖ್ಯೆ ಅಂದಾಜು 5 ಲಕ್ಷಕ್ಕೂ ಹೆಚ್ಚು ಇದೆ ಎಂದು ಬಿಬಿಎಂಪಿ ಅಂದಾಜಿಸಿದೆ. ಈ ರೀತಿ ಖಾತಾ ಇಲ್ಲದೆ ಇರುವವರಿಗೆ ಇ - ಖಾತಾ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಅಲ್ಲದೆ ಖಾತಾ ವ್ಯಾಪ್ತಿಯಿಂದ ಲಕ್ಷಾಂತರ ಆಸ್ತಿಗಳು ಹೊರಗೆ ಉಳಿದಿರುವುದರಿಂದ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ. ಯಾಕೆಂದರೆ ಯಾವುದೇ ಖಾತಾ ಇಲ್ಲದೆ ಇರುವವರು ಆಸ್ತಿ ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಿದ್ದು ಅದನ್ನು ತಪ್ಪಿಸುವುದಕ್ಕೆ ಸರ್ಕಾರ ಮುಂದಾಗಿದೆ. ಹಾಗಾದರೆ ಹೊಸ ಖಾತಾ ಮಾಡಿಸಿಕೊಳ್ಳುವುದು ಹೇಗೆ, ಹೊಸ ಖಾತಾ ಮಾಡಿಸಿಕೊಳ್ಳಲು ಬೇಕಾಗುವ ಪ್ರಮುಖ ದಾಖಲೆಗಳೇನು ಹಾಗೂ ಇದಕ್ಕೆ ತಗುಲುವ ವೆಚ್ಚವೇನು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

4 Important Documents Required to Open New Khata Cost Details

ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ಇದ್ದರೂ ಇಲ್ಲಿಯ ವರೆಗೆ ಯಾವುದೇ ಖಾತಾ ಮಾಡಿಸಿಕೊಳ್ಳದೆ ಇರುವವರಿಗೆ ಬಿಬಿಎಂಪಿ ಕೊನೆಗೂ ಗುಡ್‌ನ್ಯೂಸ್‌ ಕೊಟ್ಟಿದೆ. ಬೆಂಗಳೂರಲ್ಲಿ ಲಕ್ಷಾಂತರ ಆಸ್ತಿಗಳಿಗೆ ಇಲ್ಲಿಯವರೆಗೆ ಯಾವುದೇ ಖಾತಾಗಳನ್ನು ಮಾಡಿಸಿಲ್ಲ. ಈ ರೀತಿ ಖಾತಾಗಳನ್ನು ಮಾಡಿಸಿಕೊಳ್ಳದೆಯೇ ಸಬ್ ರಿಜಿಸ್ಟರ್‌ ಕಚೇರಿಗಳಲ್ಲಿ ವಹಿವಾಟು ನಡೆಸಿಕೊಂಡು ಬರಲಾಗಿದೆ.

ಈಗ ಈ ರೀತಿ ಆಸ್ತಿ ವ್ಯಾಪ್ತಿಯಿಂದ ಹೊರಗಿರುವ ಆಸ್ತಿಗಳಿಗೆ ಖಾತಾ ಮಾಡಿಸಿಕೊಳ್ಳಲು ಬಿಬಿಎಂಪಿ ಅವಕಾಶ ಕೊಟ್ಟಿದೆ. ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಆಸಿಗಳಿಗೆ ಖಾತಾ ಇಲ್ಲದಿದ್ದರೆ ಹಾಗೂ ಅದಕ್ಕೆ ಕೈಬರಹ ಖಾತಾ ಸಹ ಇಲ್ಲದಿದ್ದರೆ ಹೊಸ ಆಯ್ಕೆ ಸಹಾಯವಾಗಲಿದೆ.

ಹೊಸ ಖಾತಾ ಮಾಡಿಸಲು ವೆಚ್ಚವೆಷ್ಟು: ಇನ್ನು ಬೆಂಗಳೂರಿನ ಆಸ್ತಿದಾರರು ಯಾವುದೇ ಖಾತಾ ಇಲ್ಲದಿದ್ದರೆ ಅವರು ಆನ್‌ಲೈನ್‌ನ ಮೂಲಕ ಖಾತಾ ಮಾಡಿಸಿಕೊಳ್ಳುವುದಕ್ಕೆ ನೂತನ ವೆಬ್‌ಸೈಟ್‌ ಪರಿಚಯಿಸಿದೆ. ಇನ್ನು ನೀವು ಬಿಬಿಎಂಪಿಯಲ್ಲಿ ಖಾತೆ ಮಾಡಿಸಿಕೊಳ್ಳದೆ ಇದ್ದರೆ.

ಆನ್‌ಲೈನ್‌ನ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಇದಕ್ಕಾತಿ ಬಿಬಿಎಂಪಿಯು ಅಧಿಕೃತ ವೆಬ್‌ಸೈಟ್‌ @ https://bbmp.karnataka.gov.in/newkhata ಪರಿಚಯಿಸಿದೆ. ಇನ್ನು ನೀವು ಹೊಸ ಖಾತಾ ಮಾಡಿಸಿಕೊಳ್ಳಲು ಯಾವುದೇ ಶುಲ್ಕ ಪಾವತಿ ಮಾಡುವ ಬಗ್ಗೆ ಹೇಳಿಲ್ಲ. ಇದು ಸಂಪೂರ್ಣ ಉಚಿತವಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

ಹೊಸ ಖಾತಾಗೆ ಸಲ್ಲಿಸಬೇಕಾದ ಪ್ರಮುಖ ದಾಖಲೆಗಳು

* ಆಸ್ತಿದಾರರ ಆಧಾರ್ ಸಂಖ್ಯೆ

* ನಿಮ್ಮ ಮಾರಾಟ/ನೋಂದಣಿ ಪತ್ರದ ಸಂಖ್ಯೆ

* ಆಸ್ತಿ ಫೋಟೋ

* ಮಾರಾಟ / ನೋಂದಣಿ ಪತ್ರಕ್ಕೆ ಕನಿಷ್ಠ ಒಂದು ದಿನ ಮೊದಲು ಆಸ್ತಿಯ ಋಣಭಾರ ಪ್ರಮಾಣಪತ್ರ ದಿನಾಂಕ: 31-10-2024 ರವರೆಗೆ ಇಲ್ಲವೇ ನಂತರದವರೆಗೆ ಇರುವುದು. ಈ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

ಹೊಸ ಖಾತಾ ಯಾಕೆ ಮಾಡಿಸಿಕೊಳ್ಳಬೇಕು: ಇನ್ನು ಹೊಸ ಖಾತಾ ಇಲ್ಲಿಯ ವರೆಗೆ ಯಾರ ಬಳಿ ಯಾವುದೇ ಖಾತಾ ಇಲ್ಲವೋ ಅವರಿಗೆ ಮಾತ್ರ ಅನ್ವಯಿಸಲಿದೆ. ಇನ್ನು ಈಗಾಗಲೇ ನಿಮ್ಮ ಬಳಿ ಖಾತಾ ಇದ್ದರೆ ನೀವು ಹೊಸ ಖಾತಾ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅಲ್ಲದೆ ಖಾತಾ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.

ಇ- ಖಾತಾ ಮಾಡಿಸಿಕೊಳ್ಳುವುದಕ್ಕೂ ಇದು ಸಹಕಾರಿಯಾಗಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ ಆಸ್ತಿಗಳಿಗೆ ಖಾತಾ ಇರುವುದು ಕಡ್ಡಾಯವಾಗುತ್ತಿದೆ. ಈಗಾಗಲೇ ಎಲ್ಲಾ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರುವುದಾಗಿ ಬಿಬಿಎಂಪಿ ಹೇಳಿದೆ. ಹೀಗಾಗಿ ಖಾತಾ ಇಲ್ಲದೆ ಇರುವವರು ಖಾತಾ ಮಾಡಿಸಿಕೊಳ್ಳುವುದು ಅವಶ್ಯವಾಗಿದೆ.

ಹೊಸ ಖಾತಾ ಮಾಡಿಸಿಕೊಳ್ಳುವವರಿಗೆ ಬಿಬಿಎಂಪಿ ಗುಡ್‌ನ್ಯೂಸ್‌ ಕೊಟ್ಟಿದೆ. ಯಾವುದೇ ಖಾತಾ ಇಲ್ಲದೆ ಇರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+