ಬೆಂಗಳೂರಿನ 126 ವಾರ್ಡ್ ನಲ್ಲಿ ಸೋಂಕು 3168 ಕಂಟೈನ್ಮೆಂಟ್ ಜೋನ್

ಬೆಂಗಳೂರು, ಜುಲೈ 13: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ ರೂಂ ಬುಲೆಟಿನ್ ಪ್ರಕಾರ, ಬೆಂಗಳೂರಿನ 198 ವಾರ್ಡ್ ನಲ್ಲಿ ಸಕ್ರಿಯ 3168 ಕಂಟೈನ್ಮೆಂಟ್ ಜೋನ್ ಗಳಿವೆ. ಮೇ 30ರಲ್ಲಿ 63 ಕಂಟೈನ್ಮೆಂಟ್ ಜೋನ್, ಜೂನ್ 30ರಂದು 487 ಜೋನ್ ಹೊಂದಿದ್ದ ಬೆಂಗಳೂರು ಸದ್ಯ 4076 ಕಂಟೈನ್ಮೆಂಟ್ ಜೋನ್ ಗಳನ್ನು ಹೊಂದಿವೆ. ಈ ಪೈಕಿ 3168 ಸಕ್ರಿಯವಾಗಿರುವ ಪ್ರಕರಣ ಹೊಂದಿರುವ ಜೋನ್ ಗಳಾಗಿವೆ.

ಬೆಂಗಳೂರಿನಲ್ಲಿ ಕೊವಿಡ್ 19 ವಾರ್ ರೂಮ್ ಉಸ್ತುವಾರಿ ವಹಿಸಿಕೊಂಡಿರುವ ಅಧಿಕಾರಿ ಹೆಪ್ಸಿಬಾ ಕೊರ್ಲಪಟಿ ಅವರು ಮಾತನಾಡಿ, ಬೆಂಗಳೂರು ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ವಲಯಗಳಲ್ಲಿ ಅಧಿಕ ಪ್ರಮಾಣದಲ್ಲಿ ಸೋಂಕಿತರು ಕಂಡು ಬಂದಿದ್ದಾರೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಶಾಂತಲಾ ನಗರದಲ್ಲಿ ಅತ್ಯಧಿಕ 31 ಪ್ರಕರಣಗಳು ಕಾಣಿಸಿಕೊಂಡಿವೆ ನಂತರದ ಸ್ಥಾನದಲ್ಲಿ ಸುಧಾಮನಗರ(30), ಚಾಮರಾಜಪೇಟೆ(28) ಹಾಗೂ ಜಯನಗರ (26) ಮುಂತಾದ ಬಡಾವಣೆಗಳಿವೆ.

ಆರೋಗ್ಯ ಇಲಾಖೆ ನಗರದ ಜನರಿಗೆ ಮನವಿಯೊಂದನ್ನು ಮಾಡಿದೆ. ಕೋವಿಡ್ - 19 ಸೇರಿದಂತೆ ಎಲ್ಲಾ ಆರೋಗ್ಯ ತುರ್ತು ಸಂದರ್ಭದಲ್ಲಿ 108 ಸಂಖ್ಯೆಗೆ ಕರೆ ಮಾಡಿ ಅಂಬ್ಯುಲೆನ್ಸ್ ಆಗಮಿಸಲಿದೆ ಎಂದು ಹೇಳಿದೆ.

18,387 ಕೊವಿಡ್ 19 ಪ್ರಕರಣಗಳು ದಾಖಲು

18,387 ಕೊವಿಡ್ 19 ಪ್ರಕರಣಗಳು ದಾಖಲು

ಒಟ್ಟಾರೆ, 18,387 ಕೊವಿಡ್ 19 ಪ್ರಕರಣಗಳು ದಾಖಲಾಗಿದ್ದು, 274 ಮಂದಿ ಮೃತಪಟ್ಟಿದ್ದಾರೆ. 4045 ಮಂದಿ ಗುಣಮುಖರಾಗಿದ್ದಾರೆ. ಕರ್ನಾಟಕದಲ್ಲಿ 38,843 ಕೇಸ್ ಗಳಿದ್ದು, 6388 ಸಕ್ರಿಯ ಪ್ರಕರಣಗಳಿದ್ದು, 22,746 ಸಕ್ರಿಯ ಪ್ರಕರಣಗಳಿದ್ದು, 532 ಮಂದಿ ಐಸಿಯುನಲ್ಲಿದ್ದಾರೆ. 15, 409 ಮಂದಿ ಗುಣಮುಖರಾಗಿದ್ದು, 684 ಮಂದಿ ಮೃತರಾಗಿದ್ದಾರೆ. ಜುಲೈ 14 ರಿಂದ 22 ಜುಲೈ ತನಕ ಲಾಕ್ಡೌನ್ ಘೋಷಿಸಲಾಗಿದೆ.

ಈ ವಾರ್ಡ್ ವಾಸಿಗಳೇ ಎಚ್ಚರ:

ಈ ವಾರ್ಡ್ ವಾಸಿಗಳೇ ಎಚ್ಚರ:

8 ವಲಯಗಳ ಪೈಕಿ 7ರಲ್ಲಿ 50ಕ್ಕೂ ಅಧಿಕ ಪ್ರಕರಣಗಳು ಕಂಡು ಬಂದಿವೆ. ದಕ್ಷಿಣ ವಲಯದಲ್ಲಿ ಅತ್ಯಧಿಕ ಸಕ್ರಿಯ ಪ್ರಕರಣಗಳಿದ್ದರೆ, ನಂತರದ ಸ್ಥಾನದಲ್ಲಿ ಪೂರ್ವ, ಪಶ್ಚಿಮ, ಬೊಮ್ಮನಹಳ್ಳಿ, ಮಹದೇವಪುರ, ರಾಜರಾಜೇಶ್ವರಿನಗರ, ಯಲಹಂಕ ವಲಯಗಳಿವೆ.
ದಕ್ಷಿಣ ವಲಯ: ಜೆಪಿ ನಗರ, ಬಿಟಿಎಂ ಲೇಔಟ್, ಜಯನಗರ, ಹನುಮಂತ ನಗರ, ಬಸವನಗುಡಿ, ವಿದ್ಯಾಪೀಠ, ಕುಮಾರಸ್ವಾಮಿ ಲೇಔಟ್, ವಿ.ವಿ ಪುರಂ, ಕಾಟನ್ ಪೇಟೆ.

ಪಶ್ಚಿಮ ವಲಯ ಹಾಗೂ ಪೂರ್ವ ವಲಯ

ಪಶ್ಚಿಮ ವಲಯ ಹಾಗೂ ಪೂರ್ವ ವಲಯ

ಪಶ್ಚಿಮ ವಲಯ: ಕೆಆರ್ ಮಾರುಕಟ್ಟೆ, ನಂದಿನಿ ಲೇ ಔಟ್, ಪಾದರಾಯನಪುರ, ಮಲ್ಲೇಶ್ವರ, ಚಾಮರಾಜಪೇಟೆ, ಮಾರೇನಹಳ್ಳಿ, ಚಿಕ್ಕಪೇಟೆ, ರಾಜಾಜಿನಗರ.

ಪೂರ್ವ ವಲಯ: ದೊಮ್ಮಲೂರು, ಶಾಂತಿ ನಗರ, ಶಾಂತಲಾ ನಗರ, ವಸಂತನಗರ, ಬಾಣಸವಾಡಿ, ಹಲಸೂರು, ಶಿವಾಜಿನಗರ.
ಮಿಕ್ಕ ನಾಲ್ಕು ವಲಯಗಳು

ಮಿಕ್ಕ ನಾಲ್ಕು ವಲಯಗಳು

ಮಹದೇವಪುರ: ಎಚ್ಎಎಲ್ ವಿಮಾನ ನಿಲ್ಡಾಣ, ಬೆಳ್ಳಂದೂರು, ಹೊರಮಾವು.
ಬೊಮ್ಮನಹಳ್ಳಿ: ಬೇಗೂರು, ಯಲಚೇನಹಳ್ಳಿ, ಅಂಜನಾಪುರ, ವಸಂತಪುರ
ಆರ್ ಆರ್ ನಗರ; ಕೆಂಗೇರಿ, ರಾಜರಾಜೇಶ್ವರಿ ನಗರ, ಕೊಟ್ಟಿಗೆಪಾಳ್ಯ, ಉಳ್ಳಾಲ,
ಯಲಹಂಕ ವಲಯ: ಕೆಂಪೇಗೌಡ ವಾರ್ಡ್, ಥಣಿಸಂದ್ರ, ವಿದ್ಯಾರಣ್ಯಪುರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+