• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಿಯು ವಿದ್ಯಾರ್ಥಿಗಳ ಭಯ ಕೊರೊನಾವೋ? ಅಥವಾ ಇಂಗ್ಲೀ‍ಷೋ?

|

ಬೆಂಗಳೂರು, ಜೂನ್ 19: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಅಂತೂ ಇಂಗ್ಲೀಷ್ ಪರೀಕ್ಷೆ ಮುಗಿಸಿದ್ದಾರೆ. ಆದರೆ, 27022 ವಿದ್ಯಾರ್ಥಿಗಳು ಈ ಬಾರಿಗೆ ಪರೀಕ್ಷೆ ಬರೆದಿಲ್ಲ. ಈ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡು ಗೈರಾಗಿದ್ದಾರೆ.

   ಕೊರೋನಾ ಸೋಂಕಿತರಲ್ಲಿ ಕೆಲವರಿಗೆ ಹಾರ್ಟ್ ಅಟ್ಯಾಕ್ ಆಗ್ತಿರೋದು ಯಾಕೆ? | Oneindia Kannada

   ಕೊರೊನಾ ನಡುವೆ ಪರೀಕ್ಷೆ ನಡೆದಿದ್ದು, ಕೊರೊನಾ ಭೀತಿಯಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆದಿಲ್ಲವೇ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ. ಆದರೆ, ಕಳೆದ ವರ್ಷದ ಸಂಖ್ಯೆ ನೋಡಿದರೆ, ಎಲ್ಲರಿಗೂ ಈ ಯೋಚನೆ ತಪ್ಪು ಎನಿಸುತ್ತದೆ. ಈ ವರ್ಷ ಕೊರೊನಾ ನಡುವೆ 27,022 ಮಕ್ಕಳು ಪರೀಕ್ಷೆ ಬರೆದಿಲ್ಲ. ಆದರೆ, ಕಳೆದ ವರ್ಷ 36,642 ಮಕ್ಕಳು ಇಂಗ್ಲೀಷ್ ಪರೀಕ್ಷೆಗೆ ಹಾಜರಾಗಿಲ್ಲ.

   ಈ ಬಾರಿಗಿಂತ ಕಳೆದ ವರ್ಷವೇ ಇಂಗ್ಲೀಷ್ ಪರೀಕ್ಷೆಗೆ ಗೈರಾದವರ ಸಂಖ್ಯೆ ಹೆಚ್ಚು

   ಈ ವರ್ಷ ಕೊರೊನಾ ಭಯದಿಂದ ವಿದ್ಯಾರ್ಥಿಗಳು ಇಂಗ್ಲೀಷ್ ಪರೀಕ್ಷೆಗೆ ಗೈರಾಗಿದ್ದಾರೆ ಎಂದುಕೊಳ್ಳಬಹುದು. ಆದರೆ, ಕಳೆದ ವರ್ಷ ಯಾಕೆ ವಿದ್ಯಾರ್ಥಿಗಳು ಇಂಗ್ಲೀಷ್ ಪರೀಕ್ಷೆ ಬರೆದಿಲ್ಲ ಎನ್ನುವ ಅನುಮಾನ ಮೂಡುತ್ತದೆ.

   ಭಯ ಕೊರೊನಾವೋ, ಇಂಗ್ಲೀ‍ಷೋ?

   ಭಯ ಕೊರೊನಾವೋ, ಇಂಗ್ಲೀ‍ಷೋ?

   ಅಂಕಿ ಸಂಖ್ಯೆ ನೋಡಿದರೆ, ವಿದ್ಯಾರ್ಥಿಗಳಿಗೆ ಭಯ ಇರುವುದು ಕೊರೊನಾ ಮೇಲೆಯೇ..? ಅಥವಾ ಇಂಗ್ಲೀಷ್ ಮೇಲೆಯೇ..? ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ. ಈ ವರ್ಷ ಕೊರೊನಾದಿಂದ ಅನೇಕರು ಪರೀಕ್ಷೆ ಬರೆದಿಲ್ಲ ಎಂದುಕೊಂಡರೂ, ಕಳೆದ ಬಾರಿಯ ಸಂಖ್ಯೆ ಇದಕ್ಕಿಂತ ಹೆಚ್ಚಿದೆ. ಹೀಗಾಗಿ, ವಿದ್ಯಾರ್ಥಿಗಳ ಭಯ ಕೊರೊನಾಗಿಂತ ಇಂಗ್ಲೀಷ್‌ ಮೇಲೆ ಇದೆ ಅನಿಸುತ್ತದೆ.

   ಕನ್ನಡ ಮಾಧ್ಯಮದವರಿಗೆ ಇಂಗ್ಲೀಷ್ ಕಷ್ಟ

   ಕನ್ನಡ ಮಾಧ್ಯಮದವರಿಗೆ ಇಂಗ್ಲೀಷ್ ಕಷ್ಟ

   ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕಷ್ಟ. ಇದು ಎಲ್ಲರಿಗೆ ಅನ್ವಯ ಆಗದಿದ್ದರೂ, ಬಹುತೇಕರಿಗೆ ಈ ಸಮಸ್ಯೆ ಇರುತ್ತದೆ. ಗ್ರಾಮೀಣ ಪ್ರದೇಶದ ಎಷ್ಟೋ ವಿದ್ಯಾರ್ಥಿಗಳು ಎಲ್ಲ ವಿಷಯ ಪಾಸ್‌ ಆದರೂ, ಒಳ್ಳೆಯ ಅಂಕ ಪಡೆದರೂ, ಇಂಗ್ಲೀಷ್‌ನಲ್ಲಿ ಫೇಲ್‌ ಆದ ಉದಾಹರಣೆ ಹಲವಿದೆ. ಇಂಗ್ಲೀಷ್‌ನಲ್ಲಿ ಫೇಲ್ ಆಗಬಹುದು ಎನ್ನುವ ಭಯದಲ್ಲಿಯೇ ಅನೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗುತ್ತಾರೆ.

   ರಾಜ್ಯದ 27 ಸಾವಿರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು

   ಅಂಕಿ ಸಂಖ್ಯೆಗಳ ವಿವರ

   ಅಂಕಿ ಸಂಖ್ಯೆಗಳ ವಿವರ

   ಈ ವರ್ಷಕ್ಕಿಂತ ಕಳೆದ ಬಾರಿ ಪರೀಕ್ಷೆ ಬರೆಯದ ವಿದ್ಯಾರ್ಥಿಗಳು ಹೆಚ್ಚಿದ್ದಾರೆ. ಈ ವರ್ಷ 27022 ವಿದ್ಯಾರ್ಥಿಗಳು ಇಂಗ್ಲೀಷ್ ಪರೀಕ್ಷೆ ಬರೆದಿಲ್ಲ. ಆದರೆ, ಕಳೆದ ವರ್ಷ 36,642 ವಿದ್ಯಾರ್ಥಿಗಳು ಇಂಗ್ಲೀಷ್ ಪರೀಕ್ಷೆ ಗೈರಾಗಿದ್ದರು. ಕಳೆದ ವರ್ಷ 6,71,635 ವಿದ್ಯಾರ್ಥಿಗಳ ಪೈಕಿ 6,34,993 ವಿದ್ಯಾರ್ಥಿಗಳು ಪರೀಕ್ಷೆಗೆ ಬಂದಿದ್ದರು. ಹೀಗಾಗಿ ಈ ವರ್ಷ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಶೇಕಡ ಪ್ರಮಾಣಕ್ಕೆ 2% ಹೆಚ್ಚಿದೆ.

   ಕಲಬುರಗಿ ಮಕ್ಕಳು ಹೆಚ್ಚು ಗೈರು

   ಕಲಬುರಗಿ ಮಕ್ಕಳು ಹೆಚ್ಚು ಗೈರು

   ಕಲಬುರಗಿಯಲ್ಲಿಯೇ ಹೆಚ್ಚು ವಿದ್ಯಾರ್ಥಿಗಳು ಇಂಗ್ಲೀಷ್ ಪರೀಕ್ಷೆಗೆ ಗೈರಾಗಿದ್ದಾರೆ. ಕಲಬುರಗಿ 1750, ಬೆಂಗಳೂರು ದಕ್ಷಿಣ 1675, ಬೆಂಗಳೂರು ಉತ್ತರ 1646, ತುಮಕೂರು 1457, ಮೈಸೂರು 1401, ಬಿಜಾಪುರ 1476, ಚಿಕ್ಕೋಡಿ 1359, ರಾಯಚೂರು 1347, ದಾವಣಗೆರೆ 1292, ಬಳ್ಳಾರಿ 1261, ಬೆಳಗಾವಿ 1044, ಚಿತ್ರದುರ್ಗ 1040 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದು, ಈ ಜಿಲ್ಲೆಗಳ ಸಂಖ್ಯೆ ಹೆಚ್ಚಿದೆ.

   English summary
   Karnataka 2nd PU English Exam: Compared to last year, this year very less people attended exam. Thus the question of whether the students fear is Coronavirus or English. Read on
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X