• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಫೇಕ್ ಫೇಕ್ 169 ಕಂಪನಿ, 25K ಟೆಕ್ಕಿಸ್

By Mahesh
|

ಬೆಂಗಳೂರು, ಅ.30: ಅನಧಿಕೃತ ಶಾಲೆಗಳ ಪಟ್ಟಿ ಹೊರ ಬೀಳುತ್ತಿದ್ದಂತೆ ಬೆಂಗಳೂರಿನ ಪೊಲೀಸರು ಅನಧಿಕೃತ ಜಾಬ್ ಸೆಂಬರ್, ಸಾಫ್ಟ್ ವೇರ್ ಕಂಪನಿಗಳು, ಫೇಕ್ ಟೆಕ್ಕಿಗಳ ಜಾತಕ ಬಿಚ್ಚಿಟ್ಟಿದ್ದಾರೆ. ಎಲ್ಲವೂ ವೆಬ್ ತಾಣದಲ್ಲಿ ಪ್ರಕಟಿಸಲಾಗಿದೆ.

ಶಿವಾಜಿನಗರದ ರೈಡ್ ಬಗ್ಗೆ ಓದಿರಬಹುದು ಇದಕ್ಕೂ ಮುನ್ನ ನಗರದ ಏಳು ಕಡೆಗಳಲ್ಲಿ ಸಿಸಿಬಿ ಪೊಲೀಸರು ಬಲೆ ಬೀಸಿ ಭಾರಿ ಖದೀಮರನ್ನು ಕೆಡವಿದ್ದಾರೆ. ಒಟ್ಟಾರೆ 169 ಫೇಕ್ ಸಾಫ್ಟ್ ವೇರ್ ಕಂಪನಿಗಳನ್ನು ಪಟ್ಟಿ ಮಾಡಿದ್ದಾರೆ.

ಫೇಕ್ ಕಂಪನಿಗಳ ಪೈಕಿ 162 ಬೆಂಗಳೂರು ಮೂಲದ ಕಂಪನಿಗಳಾದರೆ, ಚೆನ್ನೈ ಹಾಗೂ ಹೈದರಾಬಾದ್ ಮೂಲದ ತಲಾ 3 ಕಂಪನಿ ಹಾಗೂ ಪುಣೆ ಮೂಲದ ಒಂದು ಕಂಪನಿ ಪಟ್ಟಿಯಲ್ಲಿದೆ. ಫೇಕ್ ಟೆಕ್ಕಿಗಳ ವಿಷಯಕ್ಕೆ ಬಂದರೆ, ಈ ಮೇಲ್ಕಂಡ ನಕಲಿ ಸಾಫ್ಟ್ ವೇರ್ ಕಂಪನಿಗಳಿಂದ ನಕಲಿ ಅನುಭವ ಪತ್ರ, ಪ್ರಾಜೆಕ್ಟ್, ತರಬೇತಿ ಹೊಂದಿದ ಪತ್ರ ಎಲ್ಲವೂ ಇಂತಿಷ್ಟು ದುಡ್ಡಿಗೆ ಎಂದು ಮಾರಾಟವಾಗಿದೆ.

ಸೆಪ್ಟೆಂಬರ್ ನಿಂದ ಅಕ್ಟೋಬರ್ ಕೊನೆ ತನಕ ನಡೆಸಲಾಗಿರುವ ದಾಳಿಯ ನಂತರ 26 ಫೇಕ್ ಕಂಪನಿ ಒಡೆಯರನ್ನು ಜೈಲಿನಲ್ಲಿ ಪೊಲೀಸರು ಕುಳ್ಳರಿಸಿದ್ದಾರೆ. ಅದರೆ, ಇವರು ಸುಮಾರು 25,000 ಪದವೀಧರರಿಗೆ ಉನ್ನತ ತರಬೇತಿ ಪಡೆದ ಟೆಕ್ಕಿಗಳು ಎಂದು ಟ್ಯಾಗ್ ಹಾಕಿ ಕಳಿಸಿದ್ದಾರೆ. ಈ 25K ಟೆಕ್ಕಿಗಳು ಎಲ್ಲೆಲ್ಲಿ ಕೆಲಸ ಮಾಡುತ್ತಿದ್ದಾರೋ ಯಾವ ಯಾವ ಕಂಪನಿ ಕ್ಯಾಂಟೀನ್ ನಲ್ಲಿ ನಿಂಬೆ ರಸ ಹೀರುತ್ತಿದ್ದಾರೋ ಶಿವನೇ ಬಲ್ಲ.

ಬೆಂಗಳೂರು, ಹೈದರಾಬಾದ್, ಚೆನ್ನೈ ಹಾಗೂ ಪುಣೆ ನಗರಗಳಲ್ಲಿ ಈ ರೀತಿ ನಕಲಿ ಪ್ರಮಾಣ ಪತ್ರ ನೀಡುವ ದೊಡ್ಡ ಜಾಲವೇ ಇದೆ ಇದರಿಂದ ಪ್ರತಿಭಾವಂತರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ. ಜೊತೆಗೆ ನಕಲಿ ಸರ್ಟಿಫಿಕೇಟ್ ಪಡೆದ ಟೆಕ್ಕಿ ಒಂದಲ್ಲ ತಾನು ಸೇರಿದ ಕಂಪನಿಗೂ ಹೊರೆಯಾಗಿ ಒಂದು ದಿನ ಹೊರ ಬೀಳುವುದು ಗ್ಯಾರಂಟಿ.

ಉದ್ಯೋಗ ಕೊಡಿಸುವ ಖಾಸಗಿ ಕಂಪನಿಗಳ ಕದ ತಟ್ಟುವ ಮುನ್ನ ಬೆಂಗಳೂರು ಪೊಲೀಸರ ವೆಬ್ ತಾಣದಲ್ಲಿರುವ ಪಟ್ಟಿಯನ್ನು ಒಮ್ಮೆ ಕ್ಲಿಕ್ ಮಾಡಿ ಪರೀಕ್ಷಿಸಿಕೊಳ್ಳಿ. ಒಳ್ಳೆ HR ಕಂಪನಿಗಳು ಹಾಗೂ ನಕಲಿ ಟೆಕ್ಕಿಗಳನ್ನು ಸೃಷ್ಟಿಸುವ ಇಂಥ ಕಂಪನಿಗಳನ್ನು ಪ್ರತ್ಯೇಕಿಸಲು ಪೂರ್ಣ ಪಟ್ಟಿಯನ್ನು ವೆಬ್ ಸೈಟ್ ನಲ್ಲಿ ನೀಡಲಾಗಿದೆ ಎಂದು ಡಿಸಿಪಿ ಕ್ರೈಂ ಅಭಿಷೇಕ್ ಗೋಯಲ್ ಹೇಳಿದ್ದಾರೆ.

ದಾಳಿಗೊಳಪಟ್ಟ ಕಂಪನಿಗಳು

* ಬಿಟಿಎಂ ಲೇಔಟ್ ನ ಪ್ರಾಜೆನಿಕ್ ಕಂಪನಿ

* Cionixt India Pvt Ltd

* Infer software solutions

* Raks Technologies

* ಜಯನಗರದ Tarangi Infomatics consultany services

* ಜೆಪಿ ನಗರದ Solvent Software India Private Limited

* Relational Data Silutions(17 ಫೇಕ್ ಕಂಪನಿ) ಪೂರ್ಣ ಪಟ್ಟಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ಎಲ್ಲವೂ ಫೇಕ್ ಮಯವಾಗುತ್ತಿದೆ. ಡಿಗ್ರಿ ಸರ್ಟಿಫಿಕೇಟ್, ವಿವಿ ನೇಮಕಾತಿ, ಬಿಪಿಎಲ್ ಕಾರ್ಡ್, ಆಧಾರ್, ರೇಷನ್ ಕಾರ್ಡ್ ಎಲ್ಲವೂ ನಕಲಿಯಾಗುತ್ತಿದೆ.ಇಂಥ ಸಂದರ್ಭದಲ್ಲಿ ಉದ್ಯೋಗ ಕೊಡಿಸುವ ಸಂಸ್ಥೆಗಳ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಡಿಸಿಪಿ ಗೋಯಲ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Central Crime Branch (CCB) recent sleuths have made public the names of 162 Bengaluru based companies along with three Chennai based, three Hyderabad based and one Pune based company (totally 169 companies) in whose names’ fake certificates for job experience, project experience, and training were issued
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more