ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನಕದಾಸರನ್ನು ನೀವೀಗ 15 ಭಾಷೆಗಳಲ್ಲಿ ಓದಬಹುದು

By Mahesh
|
Google Oneindia Kannada News

ಬೆಂಗಳೂರು, ಜುಲೈ 3 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರೀಯ ಸಂತ ಕವಿ ಕನಕದಾಸರನ್ನು ಕುರಿತ 23 ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದ್ದಾರೆ.

ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಕರ್ನಾಟಕ ತುಳು, ಕೊಂಕಣಿ, ಬ್ಯಾರಿ ಮತ್ತು ಉರ್ದು ಅಕಾಡೆಮಿ, ಇವುಗಳ ಸಹಯೋಗದಲ್ಲಿ ಭಾನುವಾರ ದಂದು ನೃಪತುಂಗ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಈ ಕೃತಿಗಳನ್ನು ಲೋಕಾರ್ಪಣೆ ಮಾಡಿದರು.[Exclusive : ಮೊಬೈಲಿನಲ್ಲೇ ಓದಿ ದಾಸ ವರೇಣ್ಯರ ಸಾಹಿತ್ಯ]

23 books on Kanakadasa released by CM Siddaramaiah

ಡಾ ಕೆ.ಎಸ್. ಸುಮಿತ್ರ ರವರ ಕನಕದಾಸರ ಕಾವ್ಯಮತ್ತು ಸಂಗೀತ, ಡಾ. ಸುರೇಶ ನಾಗಲಮಡಿಕೆ ಅವರ ಜನಪದ ಲೋಕದೃಷ್ಟಿಯ ಮೂಲಕ ಕನಕದಾಸ ಸಾಹಿತ್ಯ ಅಧ್ಯಯನ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಅವರ ಕನಕ ವದೂಟಿ, ಪ್ರೊ ಎಚ್. ಸಿದ್ದಲಿಂಗಯ್ಯ ಅವರ ಕನಕಕಾವ್ಯ ಸಂಪುಟ, ಕಾ ತ ಚಿಕ್ಕಣ್ಣ ಅವರ ಸಂಪಾದನೆ ಕನಕ ಓದು, ಡಾ ಚಂದ್ರಶೇಖರ ಮಠಪತಿ ಅವರ ಬಯಲು ಆಲಯದೊಳಗೊ, ಹೆಚ್.ದಂಡಪ್ಪ ಸಂಪಾದನೆಯ ಕನಕಲೋಕ, ಜೋಳದರಾಶಿ ದೊಡ್ಡನಗೌಡ ಅವರ ಕನಕದಾಸರು ನಾಟಕ, ಲೋಕಾರ್ಪಣೆಗೊಂಡವು.[ಕನಕದಾಸರು ಅಂದು ಮಾಡಿದ ಪವಾಡ ಏನು?]
'ಸಂತ ಕನಕದಾಸರು' ಪುಸ್ತಕವು 15 ಭಾಷೆಗಳಿಗೆ ಅನುವಾದಗೊಂಡಿದೆ:
* ಹಿಂದಿಗೆ - ಡಾ|| ಎಚ್.ಎಂ.ಕುಮಾರಸ್ವಾಮಿ,
* ಇಂಗ್ಲೀಷ್ : ಡಾ. ಡಿ.ಎ.ಶಂಕರ್,
* ತಮಿಳಿಗೆ : ಡಾ.ಸಂಕರಿ,
* ತೆಲುಗಿಗೆ - ಡಾ ಜಿ.ಸದಾನಂದ ಶಾಸ್ತ್ರಿ,
* ಮಲೆಯಾಳಂಗೆ- ಸುಧಾಕರ್ ರಮನ್ ತಾಲಿ,
* ಮರಾಠಿಗೆ - ಡಾ ಗೋಪಾಲಮಹಾಮುನಿ,
* ಕೊಡವಕ್ಕೆ - ಡಾ ಎಂ.ಪಿ. ರೇಖಾ, [ಕನಕ ಭಕ್ತರಿಗಾಗಿ ತೆರೆದಿದೆ 'ಕನಕ ಕಿಂಡಿ' ವೆಬ್ಬಾಗಿಲು]

23 books on Kanakadasa released by CM Siddaramaiah

* ಅಸ್ಸಾಮಿಗೆ - ಭಗೀರಥಿಬಾಯಿ ಕದಂ,
* ಬಂಗಾಲಿಗೆ - ಡಾ ಮೀರಾ ಚಕ್ರವರ್ತಿ,
* ಪಂಜಾಬಿಗೆ - ಡಾ ಮಧು ಧದನ್,
* ತುಳುಗೆ - ಅತ್ರಾಡಿ ಅಮೃತಾ ಶೆಟ್ಟಿ,
* ಬ್ಯಾರಿಗೆ - ಬಿ.ಎಂ.ಹನೀಫ್, ಉರ್ದುಗೆ - ಮಹೇರ್ ಮನ್ಸೂರ್,
* ಸಂಸ್ಕೃತಕ್ಕೆ - ಜಾಹ್ನವಿ,
* ಕೊಂಕಣಿಗೆ - ಡಾ ಗೀತಾ ಶೆಣೈ ಅನುವಾದಿಸಿದ್ದಾರೆ.

ಹಿರಿಯ ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ : ವಾಗ್ಮಿಗಳು, ಸಂತರು ಹಾಗೂ ಕವಿಗಳೂ ಆಗಿದ್ದ ಕನಕದಾಸರು ಇಂದಿನ ಸಮಾಜಕ್ಕೆ ಸಹ ಪ್ರಸ್ತುತವೆನಿಸಿದ್ದಾರೆ. 300ಕ್ಕೂ ಹೆಚ್ಚಿನ ಕೀರ್ತನೆಗಳನ್ನು ರಚಿಸಿರುವ ಇವರು ವರ್ಣ, ಜಾತಿ, ಬೇಧವನ್ನು ಮೆಟ್ಟಿ ನಿಂತವರು. ಅವರ ಕೀರ್ತನೆಗಳಲ್ಲಿ ನೋವಿನ ಭಾವ ವ್ಯಕ್ತವಾಗಿದೆ.[ದೈವಬಲವಿದ್ದರೆ ಶ್ರೀಕೃಷ್ಣನನ್ನು ನಿಮ್ಮ ಕಡೆ ತಿರುಗಿಸಿ ಶ್ರೀಗಳೇ]

23 books on Kanakadasa released by CM Siddaramaiah

ತಲ್ಲಣಿಸಿದರು ಕಂಡ್ಯ, ಬಾಗಿಲನು ತೆರೆದು, ದೀನ ನಾನು ಸಮಸ್ತ ಲೋಕಕ್ಕೆ ದಾನಿ ನೀನು, ಮುಂತಾದವುಗಳು ಅವರ ಭಕ್ತಿ, ಭಾವಗಳಿಗೆ ಉದಾಹರಣೆಗಳಾಗಿವೆ. ಚಿಕ್ಕಮಗಳೂರು ಗಣೇಶ್ ಅವರ ಸಂತಕವಿ ಕನಕದಾಸ ಪುಸ್ತಕ 15 ಭಾಷೆಗಳಿಗೆ ಅನುವಾದಗೊಂಡಿದ್ದು, ಈ ಕೃತಿಯ ಅನುವಾದ ಕನಕದಾಸರನ್ನು ರಾಷ್ಟ್ರದ ಜನರಿಗೆ ಪರಿಚಯಿಸಲು ಸಾಧ್ಯವಾಗಿದೆ. ಶಾಂತಿದೂತರಾಗಿದ್ದ ಕನಕದಾಸರು ವಾಸ್ತವಿಕ ನೆಲೆಯಲ್ಲಿ ಕೃತಿಯನ್ನು ರಚಿಸಿದ್ದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ : ಜಿಲ್ಲೆಗೊಂದರಂತೆ ಒಂದು ಪುಸ್ತಕ ಮಾರಾಟ ಮೇಳ ಮಳಿಗೆಗಳನ್ನು ಪ್ರಾಧಿಕಾರದಿಂದ ಹೊರತರಬೇಕು, ಅಲೆಮಾರಿ ಸಂಸ್ಕೃತಿಯ ಜನರ ಪರಿಚಯಾತ್ಮಕ ಪುಸ್ತಕ ತರಬೇಕು, ಪದವಿ ಕಾಲೇಜುಗಳಲ್ಲಿ ಪುಸ್ತಕ ಪ್ರೇಮ ಹೆಚ್ಚಿಸಬೇಕು, ಅಲ್ಲದೇ ಯುವಜನರಿಗೆ ಮೌಲ್ಯಾಧಾರಿತ ಶಿಕ್ಷಣದ ಜೊತೆಗೆ ಇತರೆ ಸಾಹಿತ್ಯಕ ಪುಸ್ತಕಗಳ ಓದಿಗೆ ಸಹ ಪ್ರೋತ್ಸಾಹಿಸಬೇಕು ಎಂದರಲ್ಲದೆ ಜಾತಿಯನ್ನು ಮೆಟ್ಟಿನಿಂತ ಕನಕದಾಸರನ್ನು ಭಾರತದ ಎಲ್ಲಾ ಭಾಷೆಗಳಲ್ಲೂ ಪರಿಚಯಿಸುವ ಕಾರ್ಯ ಇಂದು ನೆರವೇರಿದೆ ಎಂದು ಅವರು ತಿಳಿಸಿದರು.

23 books on Kanakadasa released by CM Siddaramaiah

ಮಾಜಿ ಸಚಿವ ಹೆಚ್.ಎಂ. ರೇವಣ್ಣ : ಯಾವುದೇ ವಿಶ್ವವಿದ್ಯಾನಿಲಯ ಮಾಡದಂತಹ ಕೆಲಸವನ್ನು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮಾಡಿದೆ. ಕನಕದಾಸರು ರಚಿಸಿರುವ ನಾಲ್ಕು ಕೃತಿಗಳು ಇಂದಿಗೂ ಸಹ ಅಧ್ಯಯನಕ್ಕೆ ಸೂಕ್ತವಾಗಿವೆ ಎಂದರು.

ಕಾರ್ಯಕ್ರಮಕ್ಕೆ ಮುನ್ನ ಡಾ ಜಯದೇವಿ ಜಂಗಮಶೆಟ್ಟು ಮತ್ತು ತಂಡದವರಿಂದ ಕನಕ ಕೀರ್ತನೆ ಗಾಯನ ಜನರನ್ನು ರಂಜಿಸಿತು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವರಾದ ಆರ್. ರೋಷನ್ ಬೇಗ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಕೆ.ಎ. ದಯಾನಂದ್, ಸಂಸ್ಕೃತ ವಿದ್ಯಾನಿಲಯದ ಉಪಕುಲಪತಿಗಳಾದ ಪದ್ಮಾಶೇಖರ್, ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯ ಅಧಿಕಾರಿಗಳಾದ ಕಾ ತ ಚಿಕ್ಕಣ್ಣ ಅವರುಗಳು ಉಪಸ್ಥಿತರಿದ್ದರು.

English summary
The 16th-century social reformer poet, philosopher, musician and composer Kanakadasa's 23 books released on Jly 3 by CM Siddaramaiah. Kanakadasa, who has left behind 1,700 pages of his literary work, was born as Thimmappa Nayaka and belonged to a chieftain family of Kaginele village in Byadgi taluk of Haveri
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X