ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸಮಾಗಮ

ಏಮ್ಸ್ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 21 ರಾಷ್ಟ್ರಗಳ ವಿದ್ಯಾರ್ಥಿಗಳು ಒಂದೆಡೆ ಸೇರಿ ಜಾಗತಿಕ ಸಾಮರಸ್ಯದ ಸಂದೇಶ ಸಾರಿದ್ದಾರೆ.

By Sachhidananda Acharya
|
Google Oneindia Kannada News

ಬೆಂಗಳೂರು, ಮಾರ್ಚ್ 30: ಏಮ್ಸ್ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 21 ರಾಷ್ಟ್ರಗಳ ವಿದ್ಯಾರ್ಥಿಗಳು ಒಂದೆಡೆ ಸೇರಿ ಜಾಗತಿಕ ಸಾಮರಸ್ಯದ ಸಂದೇಶ ಸಾರಿದ್ದಾರೆ.

'ವಿವಿಧತೆಯಲ್ಲಿ ಏಕತೆ' ಎಂಬ ಆಶಯದಲ್ಲಿ ನಗರದಲ್ಲಿ ಮಂಗಳವಾರ ಈ ಪ್ಯಾನ್‍ಗೇ(PANGAEA) ಸಾಂಸ್ಕೃತಿಕ ಸಮಾಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.[ಪರಿಚಯ: ಪಂಡಿತ್ ತರುಣ್ ಭಟ್ಟಾಚಾರ್ಯ, ವಿದುಷಿ ಬೀನಾ]

21 countries Cultural cocktail in Bengaluru

ಪ್ಯಾನ್‍ಗೇ(PANGAEA)ಯ ಸಾಂಸ್ಕೃತಿಕ ಉತ್ಸವ ವಿವಿಧ ಕಾಲೇಜುಗಳ ಬ್ಯಾಂಡ್‍ಗಳು ಮೆರವಣಿಗೆ ನಡೆಸುವುದರಿಂದ ಪ್ರಾರಂಭಗೊಂಡಿತು. ವಿದ್ಯಾರ್ಥಿಗಳು ಈ ವರ್ಣರಂಜಿತ ಮೆರವಣಿಗೆಯಲ್ಲಿ ತಮ್ಮ ರಾಷ್ಟ್ರಧ್ವಜಗಳನ್ನು ಹಿಡಿದಿದ್ದರು. ನಂತರ ಬಹುರಾಷ್ಟ್ರೀಯ ವಿದ್ಯಾರ್ಥಿಗಳ ತಂಡಗಳು ಜಾನಪದ ನೃತ್ಯ, ಗೀತೆಗಳ ಗಾಯನ, ಸಂಗೀತ ವಾದ್ಯಗಳ ವಾದನ, ಹಾಸ್ಯಪ್ರಸಂಗಗಳು, ಕವಿತೆ ಓದುವಿಕೆ, ಮಾರ್ಷಲ್ ಆರ್ಟ್ಸ್ ಪ್ರದರ್ಶನ ಇತ್ಯಾದಿಗಳನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯವಾಗಿ ವಿವಿಧ ರಾಷ್ಟ್ರಗಳ ವಿದ್ಯಾರ್ಥಿಗಳ ಫ್ಯಾಷನ್ ಶೋ ಗಮನಸೆಳೆಯಿತು. ವಿವಿಧ ದೇಶಗಳ ವಿದ್ಯಾರ್ಥಿಗಳು ತಮ್ಮ ದೇಶದ ದಿರಿಸುಗಳನ್ನು ತೊಟ್ಟು ಜನರ ಮನಸೂರೆಗೊಂಡರು.[22 ವರ್ಷ ನೀರಿನ ಬಿಲ್ ಕಟ್ಟದ ಬೆಂಗಳೂರು ವಿಜ್ಞಾನಿಯ ಕಥೆ!]

ಈ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ವಿಶ್ವಸಂಸ್ಥೆಯ ಗೀತೆಗಳನ್ನು ಹಾಡಿದರು. ಶ್ರೇಷ್ಠ ನೃತ್ಯ, ಶ್ರೇಷ್ಠ ಗಾಯನ ಮತ್ತು ಶ್ರೇಷ್ಠ ಪ್ರದರ್ಶನಕ್ಕೆ ಬಹುಮಾನಗಳನ್ನು ನೀಡಲಾಯಿತು.

21 countries Cultural cocktail in Bengaluru

ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಐಸಿಸಿಆರ್ ಬೆಂಗಳೂರಿನ ಪ್ರಾದೇಶಿಕ ನಿರ್ದೇಶಕ ಶ್ರೀ ವೇಣುಗೋಪಾಲ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಐವರಿ ಕೋಸ್ಟ್ ರಾಯಭಾರಿ ಶ್ರೀ ನವೀನ್ ಶಾ ಗೌರವ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

English summary
It was not one or two but students from 21 countries had descended at one place to promote global harmony on Tuesday. The theme was Unity in Diversity and the programme seemed to stretch what could be considered as a global fashion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X