ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಪೋಟ: ಸ್ಪೋಟಕ ಪೂರೈಸಿದ್ದ ಆರೋಪಿಗೆ ಜಾಮೀನಿಲ್ಲ

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು. ಜೂ.12: ಹನ್ನೊಂದು ವರ್ಷಗಳ ಹಿಂದೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಬಳಿ ನಡೆದಿದ್ದ ಬಾಂಬ್‌ ಸ್ಫೋಟದ ಪ್ರಕರಣದಲ್ಲಿ ಸ್ಪೋಟಕ ಪೂರೈಕೆ ಮಾಡಿದ್ದ ಆರೋಪ ಎದುರಿಸುತ್ತಿರುವ 21ನೇ ಆರೋಪಿಯ ಜಾಮೀನು ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

69ನೇ ಹೆಚ್ಚುವರಿ ನಗರ ಸಿವಿಲ್‌ ಮತ್ತು ಸತ್ರ ಹಾಗೂ ರಾಷ್ಟ್ರೀಯ ತನಿಖಾ ದಳದ ಪ್ರಕರಣಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ. ಗಂಗಾಧರ ಅವರು ತಮಿಳುನಾಡಿನ ತಿರುನಲ್ವೇಲಿಯ ಪದುಕುಡಿಯ ಡೇನಿಯಲ್‌ ಪ್ರಕಾಶ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾ ಮಾಡಿದ್ದಾರೆ.

ಎರಡೂ ಕಡೆ ವಾದ-ಪ್ರತಿವಾದ ಆಲಿಸಿದ ಬಳಿಕ ಆರೋಪಿಯು ತನ್ನ ನ್ಯಾಯಿಕ ವ್ಯಾಪ್ತಿಯಿಂದ ಹೊರಗಿರುವ ತಮಿಳುನಾಡಿನ ಕಾಯಂ ನಿವಾಸಿ ಎಂಬುದನ್ನು ಪರಿಗಣಿಸಿ ಡೇನಿಯಲ್‌ ಪ್ರಕಾಶ್‌ ಜಾಮೀನು ಅರ್ಜಿ ವಜಾಗೊಳಿಸಿತು.

2013 Blast Near BJP office: NIA court denied bail to Prime Accused

ಅರ್ಜಿದಾರರ ಪರ ವಕೀಲರು, ಬಂಧನದ ಸಂದರ್ಭದಲ್ಲಿ ತಾನು ಪಂಚಾಯಿತಿಯೊಂದರ ಉಪಾಧ್ಯಕ್ಷನಾಗಿದ್ದು, ಬಿಜೆಪಿಯ ಮಿತ್ರ ಪಕ್ಷ ಎಐಎಡಿಎಂಕೆ ಸದಸ್ಯನಾಗಿದ್ದು, ಬಿಜೆಪಿಯ ವಿರುದ್ಧ ದ್ವೇಷವಿಲ್ಲ. ಕ್ರೈಸ್ತ ಧರ್ಮದ ಅನುಯಾಯಿಯಾದ ತಾನು ಚರ್ಚ್‌ನ ಸಕ್ರಿಯ ಸದಸ್ಯನಾಗಿದ್ದು, ಯಾವುದೇ ಕಾರಣಕ್ಕೂ ಉಗ್ರ ಸಂಘಟನೆಯಾದ ಅಲ್‌ ಉಮ್ಮಾ ಸದಸ್ಯನಲ್ಲ. ವಿಚಾರಣೆ ಈಗಷ್ಟೇ ಆರಂಭವಾಗಿದ್ದು, ಪ್ರಾಸಿಕ್ಯೂಷನ್‌ ಬಳಿ 200 ಸಾಕ್ಷ್ಯಗಳಿವೆ. ಸದ್ಯಕ್ಕೆ ವಿಚಾರಣೆ ಪೂರ್ಣಗೊಳ್ಳುವ ಲಕ್ಷಣಗಳಿಲ್ಲ. ಹಾಗಾಗಿ ಜಾಮೀನು ನೀಡಬೇಕೆಂದು ಕೋರಿದರು.

ಅದಕ್ಕೆ ಆಕ್ಷೇಪ ಎತ್ತಿದ ಪ್ರಾಸಿಕ್ಯೂಷನ್‌ ಪರ ವಕೀಲರು, ಆರೋಪಿಯನ್ನು ಬಿಡುಗಡೆ ಮಾಡಿದರೆ ಸಾಕ್ಷಿಗಳನ್ನು ಬೆದರಿಸುವ, ಪರಾರಿಯಾಗುವ ಸಾಧ್ಯತೆ ಇದೆ. ಆರೋಪಿಯ ವಿರುದ್ಧ ಸ್ಫೋಟಕ ಪೂರೈಸಿಸಿರುವ ಇಂತಹದ್ದೇ ಪ್ರಕರಣವೊಂದು ತಮಿಳುನಾಡಿನ ಕೋರ್ಟ್ ನಲ್ಲಿ ಬಾಕಿ ಇದೆ ಎಂದರು.

2013 Blast Near BJP office: NIA court denied bail to Prime Accused

ಪ್ರಕರಣದ ವಿವರ: ತಮಿಳುನಾಡು ಸರ್ಕಾರವು ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಅಡಿ ಅಲ್‌ ಉಮ್ಮಾ ಸಂಘಟನೆಯನ್ನು ನಿಷೇಧಿಸಿತ್ತು, ಅದರ ಸದಸ್ಯರಾದ ಆರೋಪಿಗಳು ದೇಶದ ನಾನಾ ಕಡೆ ಬಾಂಬ್‌ ಸ್ಫೋಟ ನಡೆಸುವ ಸಂಚು ರೂಪಿಸಿದ್ದರು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಕಾರಣ ಸೇಡು ತೀರಿಸಿಕೊಳ್ಳಲು 2012 ಮತ್ತು 2013ರಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಆರೋಪಿಗಳು ಹಲವು ಸಭೆ ನಡೆಸಿದ್ದರು. ಅದರ ಭಾಗವಾಗಿ 2013ರ ಏಪ್ರಿಲ್‌ 17 ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯ ಬಳಿ ಬಾಂಬ್‌ ಸ್ಫೋಟಿಸಿದ್ದರು.

ಘಟನೆಯಲ್ಲಿ 12 ಕೆಎಸ್‌ಆರ್‌ಪಿ ಪೊಲೀಸ್‌ ಸಿಬ್ಬಂದಿ ಮತ್ತು 6 ನಾಗರಿಕರು ಗಾಯಗೊಂಡಿದ್ದರು. ಆದರೆ ಯಾರೊಬ್ಬರೂ ಸಾವನ್ನಪ್ಪಿರಲಿಲ್ಲ. ಬಾಂಬ್‌ ಸ್ಫೋಟ ಪ್ರಕರಣದಲ್ಲಿ 16ನೇ ಆರೋಪಿಗೆ 21ನೇ ಆರೋಪಿಯಾದ ಡೇನಿಯಲ್‌ ಪ್ರಕಾಶ್‌ ಸ್ಫೋಟಕಗಳನ್ನು ಪೂರೈಸಿದ ಆರೋಪವಿದೆ. ಆತನ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 307, 332, 333, 435, ಶಸ್ತ್ರಾಸ್ತ್ರ ಕಾಯಿದೆ 1908ರ ಸೆಕ್ಷನ್‌ಗಳಾದ 3 ಮತ್ತು 5, ಸಾರ್ವಜನಿಕ ಆಸ್ತಿಗೆ ಹಾನಿ ಕಾಯಿದೆ ಸೆಕ್ಷನ್‌ 4 ಅಡಿ ಆರೋಪ ನಿಗದಿ ಮಾಡಲಾಗಿದೆ.

English summary
NIA court denied bail to Prime accused in a 2013 bomb blast near BJP office in Malleswaram, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X