ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ ರೈಲುಗಳ 2 ಟ್ರಿಪ್​​​ ರದ್ದುಗೊಳಿದ ಚುನಾವಣಾ ಆಯೋಗ

ಬೆಂಗಳೂರು ಏಪ್ರಿಲ್ 17: ರಾಜ್ಯದಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗಿರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಚುನಾವಣೆ ಆಯೋಗ ರಾಜ್ಯ ಸರ್ಕಾರಕ್ಕೆ ಬಿಗ್ ಶಾಕ್ ಕೊಟ್ಟಿದೆ.

2023ರ ಏಪ್ರಿಲ್‌ನಲ್ಲಿ ಯಾತ್ರಾರ್ಥಿಗಳಿಗಾಗಿ ಬೆಂಗಳೂರು ಮತ್ತು ವಾರಣಾಸಿ ನಡುವೆ ಭಾರತ್ ಗೌರವ್ ಕಾಶಿ ದರ್ಶನ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದ ರಾಜ್ಯ ಸರ್ಕಾರದ ಉತ್ಸಾಹಕ್ಕೆ ಬ್ರೇಕ್ ಹಾಕಿದೆ.

ರಾಜ್ಯದಲ್ಲಿ ನೀತಿ ಸಂಹಿತೆ (ಎಂಸಿಸಿ) ಜಾರಿಯಲ್ಲಿರುವುದರಿಂದ ಚುನಾವಣಾ ಆಯೋಗ (ಇಸಿಐ) ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ ರೈಲುಗಳ 2 ಟ್ರಿಪ್​​​ ರದ್ದುಗೊಳಿಸಿದೆ. ಇದರಿಂದಾಗಿ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ.

2 trips of Karnataka-Bharat Gaurav Kashi Darshan trains have been canceled by the Election Commission

ನೀತಿ ಸಂಹಿತೆ ಪ್ರಕಾರ, ಸರ್ಕಾರ ಹೊಸ ಯೋಜನೆ ಘೋಷಿಸುವಂತಿಲ್ಲ, ಹೊಸ ಕಾರ್ಯಕ್ರಮಗಳ ಅನುಷ್ಠಾನ ಮಾಡುವಂತಿಲ್ಲ, ಹೊಸ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಮಾಡುವಂತಿಲ್ಲ, ಹೊಸ ಯೋಜನೆಗೆ ಹಣ ಕೂಡ ನೀಡುವಂತಿಲ್ಲ. ಹೀಗಾಗಿ ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ ರೈಲು ರಾಜ್ಯ ಸರ್ಕಾರದ ಯೋಜನೆಯಾಗಿರುವುದರಿಂದ ಇದನ್ನು ರದ್ದುಗೊಳಿಸಲಾಗಿದೆ.

ಏಪ್ರಿಲ್ 14 ಮತ್ತು ಏಪ್ರಿಲ್ 28 ರಂದು ಕರ್ನಾಟಕದ ಯಾತ್ರಾರ್ಥಿಗಳಿಗಾಗಿ ವಾರಣಾಸಿ-ಅಯೋಧ್ಯೆ-ಪ್ರಯಾಗರಾಜ್‌ಗೆ ವಿಶೇಷ ರೈಲುಗಳನ್ನು ನಡೆಸಲು ಯೋಜಿಸಲಾಗಿತ್ತು. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆಯು ಮಾರ್ಚ್ 25 ರಿಂದು IRCTC ಪೋರ್ಟಲ್‌ನಲ್ಲಿ ಆನ್‌ಲೈನ್ ಬುಕಿಂಗ್ ಅನ್ನು ಪ್ರಾರಂಭಿಸಿದೆ.

2 trips of Karnataka-Bharat Gaurav Kashi Darshan trains have been canceled by the Election Commission

ಈ ನಡುವೆ ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕವನ್ನು ಪ್ರಕಟಿಸಲಾಯಿತು. ಇದರೊಂದಿಗೆ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಕೂಡ ಜಾರಿಯಾಗಿದೆ. ಆದರೆ ಈಗಾಗಲೇ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದರಿಂದ ರೈಲುಗಳು ಸಂಚರಿಸುವ ಸಾಧ್ಯತೆ ಇತ್ತು. ಹೀಗಾಗಿ ರಾಜ್ಯ ಸರ್ಕಾರ ರೈಲುಗಳನ್ನು ನಿರ್ವಹಿಸಲು ಅನುಮತಿ ಕೋರಿ ECI ಅನ್ನು ಸಂಪರ್ಕಿಸಿತು.

ಸರ್ಕಾರದ ಮನವಿಯನ್ನು ಪರಿಶೀಲಿಸಿದ ಇಸಿಐ ರೈಲುಗಳ ಕಾರ್ಯಾಚರಣೆಗೆ ಅನುಮತಿ ನಿರಾಕರಿಸಿದೆ. ಏಪ್ರಿಲ್ ತಿಂಗಳಲ್ಲಿ ನಿಗದಿತ ಟ್ರಿಪ್‌ಗಳಿಗೆ ಬುಕಿಂಗ್ ಅನ್ನು ತಕ್ಷಣವೇ ನಿಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇಲಾಖೆಯ ಅಧಿಕೃತ ಪ್ರಕಟಣೆಯ ಪ್ರಕಾರ, ಏಪ್ರಿಲ್‌ನಲ್ಲಿ ಕಾರ್ಯನಿರ್ವಹಿಸಬೇಕಿದ್ದ ಎರಡೂ ಪ್ರವಾಸಗಳನ್ನು ರದ್ದುಗೊಳಿಸಲಾಗಿದೆ.

"ಮಾದರಿ ನೀತಿ ಸಂಹಿತೆಯನ್ನು ಉಲ್ಲೇಖಿಸಿ ECI ಯ ನಿರ್ದೇಶನಗಳನ್ನು ಅನುಸರಿಸಿ, ಏಪ್ರಿಲ್ ತಿಂಗಳಲ್ಲಿ ನಿಗದಿಪಡಿಸಲಾದ ಎರಡೂ ರೈಲು ಪ್ರಯಾಣಗಳನ್ನು ರದ್ದುಗೊಳಿಸಲಾಗಿದೆ" ಎಂದು ಪ್ರಕಟಣೆ ತಿಳಿಸಿದೆ. ಆದರೆ, ಯಾತ್ರಾರ್ಥಿಗಳಿಗೆ ಬುಕ್ಕಿಂಗ್‌ಗಳನ್ನು ಮರುಪಾವತಿ ಮಾಡಲಾಗುತ್ತದೆಯೇ ಅಥವಾ ಮುಂದಿನ ತಿಂಗಳ ಪ್ರಯಾಣದೊಂದಿಗೆ ಅದನ್ನು ಸರಿಹೊಂದಿಸಲಾಗುತ್ತದೆಯೇ ಎಂಬುದನ್ನು ಇಲಾಖೆ ಸ್ಪಷ್ಟಪಡಿಸಿಲ್ಲ.

ನೀತಿ ಸಂಹಿತೆ ಪ್ರಕಾರ ಏನು ಮಾಡುವಂತಿಲ್ಲ?

ಸರ್ಕಾರ ಹೊಸ ಯೋಜನೆ ಘೋಷಿಸುವಂತಿಲ್ಲ

ಹೊಸ ಕಾರ್ಯಕ್ರಮಗಳ ಅನುಷ್ಠಾನ ಮಾಡುವಂತಿಲ್ಲ

ಹೊಸ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಮಾಡುವಂತಿಲ್ಲ

ಹೊಸ ಯೋಜನೆಗೆ ಹಣ ನೀಡುವಂತಿಲ್ಲ

ಹೊಸ ಟೆಂಡರ್ ಕರೆಯುವಂತಿಲ್ಲ

ಈಗಾಗಲೇ ಕರೆದಿದ್ದ ಟೆಂಡರ್ ಫೈನಲ್ ಮಾಡುವಂತಿಲ್ಲ

ಸಚಿವರು, ಶಾಸಕರು ಸರ್ಕಾರಿ ವಾಹನ ಬಳಸುವಂತಿಲ್ಲ

ಅಧಿಕಾರಿಗಳ ಜೊತೆ ಸಚಿವರು, ಶಾಸಕರು ಸಭೆ ನಡೆಸುವಂತಿಲ್ಲ

ರಾಜಕೀಯ ನಾಯಕರು ಸರ್ಕಾರಿ ವಸತಿ ಗೃಹ ಬಳಸುವಂತಿಲ್ಲ

ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಮಾತ್ರ ಧ್ವನಿವರ್ಧಕ ಬಳಕೆ

ಮಂದಿರ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಮಾಡುವಂತಿಲ್ಲ

ಧರ್ಮ - ಜಾತಿ ವಿಷಯಾಧಾರಿತವಾಗಿ ಮತ ಕೇಳುವಂತಿಲ್ಲ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+