ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಟಿ-ಕೋಟಿ ಹಣ ಸುರಿದರೂ ಮುಚ್ಚದ ಬೆಂಗಳೂರಿನ ರಸ್ತೆ ಗುಂಡಿಗಳು

|
Google Oneindia Kannada News

ಬೆಂಗಳೂರು, ನವೆಂಬರ್ 21 : ಬೆಂಗಳೂರು ನಗರದಲ್ಲಿರುವ ರಸ್ತೆ ಗುಂಡಿಗಳಿಗೆ ರಾಜ್ಯ ಸರ್ಕಾರ ಕೋಟಿಗಟ್ಟಲೇ ಹಣ ಸುರಿದಿದೆ. ಆದರೂ ಇನ್ನು ಸಹ ಪಾತ್ ಹೋಲ್‌ಗಳ ಕರ್ಮಕಾಂಡ ನಿಂತಿಲ್ಲ.

ರಸ್ತೆಗುಂಡಿ ಮುಚ್ಚದ ಬಿಬಿಎಂಪಿ ಮೂವರು ಇಂಜಿನಿಯರ್ ಅಮಾನತುರಸ್ತೆಗುಂಡಿ ಮುಚ್ಚದ ಬಿಬಿಎಂಪಿ ಮೂವರು ಇಂಜಿನಿಯರ್ ಅಮಾನತು

ಈಗಾಗಲೇ ಹಲವು ಜೀವಗಳನ್ನು ಬಲಿ ಪಡೆದಿರುವ ನಗರದ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಡೆಡ್ ಲೈನ್ ಗಳನ್ನು ಕೊಟ್ಟರೂ ಸಹ ಕೆಲ ಏರಿಯಾಗಳಲ್ಲಿ ಇನ್ನೂ ಬಾಯಿ ತೆರೆದುಕೊಂಡಿವೆ. ಇದಕ್ಕೆ ನಿದರ್ಶನವೆಂಬಂತೆ ನಗರದ ಹೆಣ್ಣೂರು ಮುಖ್ಯ ರಸ್ತೆಯಲ್ಲಿ ಸೋಮವಾರ ರಾತ್ರಿ ಬೈಕ್ ವೊಂದು ರಸ್ತೆ ಗುಂಡಿಗೆ ಬಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

2 men injured & admitted to hospital after motorcycle hit a pothole in Hennur

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಈ ರಸ್ತೆ ಗುಂಡಿಗಳನ್ನು ಮುಚ್ಚಲು ಡೆಡ್ ಲೈನ್ ನೀಡಿದ್ದರು. ಆದರೆ, ಮತ್ತೆ ಗುಂಡಿಗೆ ಬಿದ್ದಿರುವ ಪ್ರಕರಣ ಬೆಳಕಿಗೆ ಬಂದಿರುವುದರಿಂದ ಯಾರ ಡೆಡ್ ಲೈನ್ ಸಹ ಕೆಲಸ ಮಾಡಿಲ್ಲ ಎನ್ನುವುದು ಕಂಡು ಬಂದಿದೆ.

ರಸ್ತೆ ಗುಂಡಿಗಾಗಿಯೇ ಈಗಾಗಲೇ ಬಿಬಿಎಂಪಿಯ ಮೂವರು ಇಂಜಿನಿಯರ್ ಗಳು ಅಮಾನತುಗೊಂಡಿದ್ದಾರೆ. ಆದರೂ ಕೂಡ ಸಂಬಂಧಿಸಿದ ಅಧಿಕಾರಿಗಳಿಗೆ ಭಯವಿಲ್ಲ.

English summary
2 men injured & admitted to hospital after motorcycle hit a pothole in Hennur area, last night. After the accident, the pothole has been filled by Bruhat Bengaluru Mahanagara Palike (BBMP).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X