ಬೆಂಗಳೂರಿನ ಈ ಭಾಗದಲ್ಲಿ ₹2,500 ಕೋಟಿ ವೆಚ್ಚದ ಅತಿ ದೊಡ್ಡ ರೈಲ್ವೆ ಟರ್ಮಿನಲ್ ನಿರ್ಮಾಣ, ಉದ್ದೇಶ ಏನು?-ಮಾಹಿತಿ, ವಿವರ
ಬೆಂಗಳೂರು, ಮಾರ್ಚ್, 27: ಬೆಂಗಳೂರು ರೈಲ್ವೆ ವಿಭಾಗವು ನಗರದಾದ್ಯಂತ ಪ್ರಮುಖ ರೈಲು ನಿಲ್ದಾಣಗಳಲ್ಲಿ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಉತ್ತಮ ಯೋಜನೆಯೊಂದನ್ನು ಜಾರಿಗೊಳಿಸಲು ಮುಂದಾಗಿದೆ. ಹಾಗಾದರೆ ಆ ಯೋಜನೆ ಯಾವುದು ಹಾಗೂ ಯಾವೆಲ್ಲ ಮಾರ್ಗಗಳಲ್ಲಿ ಇದು ಜಾರಿಯಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಇತ್ತೀಚಿನ ವರದಿಗಳ ಪ್ರಕಾರ, ದೇವನಹಳ್ಳಿಯಲ್ಲಿ ನಿರ್ವಹಣಾ ಸೌಲಭ್ಯಗಳನ್ನು ಹೊಂದಿರುವ ಅತ್ಯಾಧುನಿಕ ದೊಡ್ಡ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತದೆ. ಇದಕ್ಕೆ ಸುಮಾರು 2,500 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಇದರ ಕಾರ್ಯಸಾಧ್ಯತಾ ಅಧ್ಯಯನ ಬಹುತೇಕ ಪೂರ್ಣಗೊಂಡಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಟರ್ಮಿನಲ್ ಅನ್ನು 200 ಹೆಕ್ಟೇರ್‌ನಲ್ಲಿ ನಿರ್ಮಿಸಲು ಮುಂದಾಗಿದ್ದು, ಭೂಮಿ ಹುಡುಕಾಟದ ಕುರಿತು ಕಾರ್ಯನಿರ್ವಹಿಸುತ್ತಿದ್ದೇವೆ. ಇದು ಕನಿಷ್ಠ 10 ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿರುತ್ತದೆ. ಒಮ್ಮೆ ಇದು ನಿರ್ಮಾಣವಾದರೆ, ಇದು ಕೆಎಸ್‌ಆರ್ ಬೆಂಗಳೂರು, ಯಶವಂತಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣಗಳಲ್ಲಿ ದಟ್ಟಣೆಯನ್ನು ತಗ್ಗಿಸುತ್ತದೆ.
"ನಾವು ಅಸ್ತಿತ್ವದಲ್ಲಿರುವ ದೇವನಹಳ್ಳಿ ನಿಲ್ದಾಣದಿಂದ 4 ಅಥವಾ 5 ಕಿಮೀ ದೂರದಲ್ಲಿರುವ ಭೂಮಿಯನ್ನು ನೋಡುತ್ತಿದ್ದೇವೆ. ಭಾರಿ ವೆಚ್ಚ ಆಗಿರುವ ಕಾರಣ ಯೋಜನೆಗೆ ರೈಲ್ವೆ ಮಂಡಳಿ ಮತ್ತು ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಪಡೆಯಬೇಕಿದೆ," ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, ಬೆಂಗಳೂರಿಗೆ ವಿಶಾಲವಾದ 287 ಕಿಲೋ ಮೀಟರ್ ವೃತ್ತಾಕಾರದ ರೈಲ್ವೆ ಯೋಜನೆಗೆ ಟರ್ಮಿನಲ್‌ನ ಏಕೀಕರಣವು ಅದ್ಭುತವಾದ ಭಾಗವಾಗಿದೆ. ಸದ್ಯ ಇದೀಗ ಎರಡೂ ಯೋಜನೆಗಳ ಕಾರ್ಯಸಾಧ್ಯತೆಯ ಅಧ್ಯಯನಗಳು ನಡೆಯುತ್ತಿವೆ. "ಆದಾಗ್ಯೂ, ಟರ್ಮಿನಲ್ ನಿರ್ಮಾಣವು ಯೋಜನೆ ವಿಳಂಬವಾಗುವುದಿಲ್ಲ," ಎಂದು ಹೇಳಿದರು. ಇನ್ನು ಹತ್ತಿರದ ಇತರ ರೈಲು ನಿಲ್ದಾಣಗಳಿಂದ ಬೈಪಾಸ್ ರೈಲು ಮಾರ್ಗಗಳ ಮೂಲಕ ಟರ್ಮಿನಲ್ ಅನ್ನು ಸಂಪರ್ಕಿಸಲು ಯೋಜನೆ ನಡೆಯುತ್ತಿದೆ.
ವೃತ್ತಾಕಾರದ ರೈಲ್ವೆ ಯೋಜನೆಯು ಸ್ಥಳೀಯ ರೈಲು ಸೇವೆಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಅಸ್ತಿತ್ವದಲ್ಲಿರುವ ರೈಲು ನಿಲ್ದಾಣಗಳಲ್ಲಿ ದಟ್ಟಣೆಯನ್ನು ನಿವಾರಿಸುತ್ತದೆ. ಈ ಯೋಜನೆಯಿಂದ ಬೆಂಗಳೂರು ಉಪನಗರ ರೈಲು ಯೋಜನೆ (BSRP) ನಮ್ಮ ಮೆಟ್ರೊದೊಂದಿಗೆ ಸಂಯೋಜಿಸುತ್ತದೆ. ಇದು ಪೂರ್ಣಗೊಂಡ ನಂತರ, ಉದ್ದೇಶಿತ ದೇವನಹಳ್ಳಿ ಟರ್ಮಿನಲ್‌ಗೆ ತಡೆರಹಿತ ರೈಲು ಸಂಚಾರವನ್ನು ನಿರೀಕ್ಷಿಸಲಾಗಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಘೋಷಿಸಿದ ವೃತ್ತಾಕಾರದ ರೈಲ್ವೆ ಯೋಜನೆಯು ನಿಡವಂಡ, ದೊಡ್ಡಬಳ್ಳಾಪುರ, ದೇವನಹಳ್ಳಿ, ಮಾಲೂರು, ಹೀಲಲಿಗೆ ಮತ್ತು ಸೋಲೂರನ್ನು ನಿಡವಂಡದಲ್ಲಿ ಕೊನೆಗೊಳ್ಳುವ ವೃತ್ತದೊಂದಿಗೆ ಸಂಪರ್ಕಿಸುವ ಮೂಲಕ ನಗರದ ದಟ್ಟಣೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. "ವೃತ್ತಾಕಾರದ ಯೋಜನೆಯು ಜಾರಿಯಲ್ಲಿರುವಾಗ, ಇಲ್ಲಿಗೆ ರೈಲುಗಳನ್ನು ಸ್ಥಳಾಂತರಿಸುವುದು ತುಂಬಾ ಸುಲಭ. ಪ್ರಸ್ತುತ ಯೋಜನೆಯ ಕಾರ್ಯಸಾಧ್ಯತೆಯ ಅಧ್ಯಯನ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications