• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Big Breaking: ರಾಜ್ಯದಲ್ಲಿಂದು 196 ಕೊರೊನಾ ಪ್ರಕರಣ ಪತ್ತೆ

|

ಬೆಂಗಳೂರು, ಮೇ 23: ಕರ್ನಾಟಕ ರಾಜ್ಯದಲ್ಲಿಂದು ಹೊಸದಾಗಿ 196 ಕೊರೊನಾ ವೈರಸ್‌ ಕೇಸ್‌ಗಳು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1939ಕ್ಕೆ ಏರಿಕೆಯಾಗಿದೆ.
ಯಾದಗಿರಿಯಲ್ಲಿ 72 ಮಂದಿಗೆ, ಮಂಡ್ಯದಲ್ಲಿ 28 ಜನರಿಗೆ, ರಾಯಚೂರಿನಲ್ಲಿ 38 ಜನರಿಗೆ, ಚಿಕ್ಕಬಳ್ಳಾಪುರದಲ್ಲಿ 20 ಮಂದಿ ಸೇರಿದಂತೆ 196 ಜನರಿಗೆ ಕೊರೊನಾ ವೈರಸ್ ವಕ್ಕರಿಸಿದೆ.

   ತರಕಾರಿಯಿಂದಲು ಹಬ್ಬುತ್ತಿದೆ ಕೊರೋನಾ ಮಹಾಮಾರಿ!! ಎಚ್ಚರ!! | Oneindia Kannada

   ಇಂದು ವರದಿಯಾದ 196 ಪ್ರಕರಣಗಳ 184 ಕೇಸ್‌ಗಳಿಗೆ ಮಹಾರಾಷ್ಟ್ರ ರಾಜ್ಯದ ನಂಟು ಹೊಂದಿದೆ. ಇಂದಿನ ಒಟ್ಟು ಪ್ರಕರಣಗಳಲ್ಲಿ 37 ಮಕ್ಕಳು ಒಳಗೊಂಡಿದ್ದಾರೆ. ನಾಲ್ಕು ತಿಂಗಳ ಮಗುವಿಗೆ ಕೊರೊನಾ ಸೋಂಕು ತಗುಲಿದೆ.

   24 ಗಂಟೆಯಲ್ಲಿ 6654 ಕೊರೊನಾ ಕೇಸ್ ಪತ್ತೆ, 137 ಸಾವು24 ಗಂಟೆಯಲ್ಲಿ 6654 ಕೊರೊನಾ ಕೇಸ್ ಪತ್ತೆ, 137 ಸಾವು

   ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆಯವರೆಗಿನ ವರದಿಯಾಗಿದ್ದು, ಬೆಂಗಳೂರು ನಗರ 4, ಚಿಕ್ಕಬಳ್ಳಾಪುರ 20, ಯಾದಗಿರಿ 72, ಮಂಡ್ಯ 20, ಗದಗ 15, ದಾವಣೆಗೆರೆ 2, ರಾಯಚೂರು 39, ಹಾಸನ 4, ದಕ್ಷಿಣ ಕನ್ನಡ 3, ಕಲಬುರಗಿ 1, ಉತ್ತರ ಕನ್ನಡ 2, ಉಡುಪಿ 1, ಕೋಲಾರ 2, ಧಾರವಾಡ 1, ಬೆಳಗಾವಿಯಲ್ಲಿ 1 ಕೇಸ್ ದಾಖಲಾಗಿದೆ.

   ರಾಜ್ಯದಲ್ಲಿ ಇದುವರೆಗೂ 598 ಜನರು ಸೋಂಕಿನಿಂದ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 1297 ಪ್ರಕರಣಗಳು ಸಕ್ರಿಯವಾಗಿದೆ. ಒಟ್ಟು 41 ಜನರು ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ.

   English summary
   196 new COVID19 positive cases have been reported in Karnataka from 5 pm yesterday till 12 noon today. taking the total number of positive cases to 1939.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X