ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಶೇ.19ರಷ್ಟು ಗರ್ಭಿಣಿಯರಿಗೆ ಮಧುಮೇಹ:ಸಮೀಕ್ಷೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 12: ಬೆಂಗಳೂರಲ್ಲಿ ಶೇ.19ರಷ್ಟು ಗರ್ಭಿಣಿಯರು ಮಧುಮೇಹದಿಂದ ಬಳಲುತ್ತಿದ್ದಾರೆ ಎಂಬ ಆತಂಕಕಾರಿ ವಿಷಯ ಸಮೀಕ್ಷೆ ಮೂಲಕ ಬಹಿರಂಗಗೊಂಡಿದೆ.

ಪಬ್ಲಿಕ್ ಹೆಲ್ತ್ ಫೌಂಡೇಶನ್ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ತಿಳಿದುಬಂದಿದೆ. ಫೌಂಡೇಶನ್ ಮೂರು ಸರ್ಕಾರಿ ಆಸ್ಪತ್ರೆಯ ಅಂಕಿ ಅಂಶವನ್ನು ಪಡೆದಿದೆ.

ಅದರಲ್ಲಿ 3,301 ಗರ್ಭಿಣಿಯರು ದಾಖಲಾಗಿದ್ದಾರೆ ಅದರಲ್ಲಿ ಶೇ.81.2ರಷ್ಟು ಮಹಿಳೆಯರು ಆರೋಗ್ಯವಾಗಿದ್ದರೆ ಇನ್ನುಳಿದ 18.8 ರಷ್ಟು ಗರ್ಭಿಣಿಯರು ಗೆಸ್ಟೇಷನಲ್ ಮಧುಮೇಹದಿಂದ ಬಳಲುತ್ತಿದ್ದಾರೆ. ಗರ್ಭಿಣಿಯರು ಎಷ್ಟೇ ಎಚ್ಚರಿಕೆಯಿಂದಿದ್ದರೂ ಸಾಕಾಗುತ್ತಿಲ್ಲ, ಒಂದೆಡೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ ಇದೀಗ ಮಧುಮೇಹವೂ ಸೇರಿಕೊಂಡಿದೆ.

ಗರ್ಭಿಣಿಯರಲ್ಲಿ ಹೆಚ್ಚುತ್ತಿರುವ ಹೃದಯಾಘಾತ, ಏನು ಹೇಳತ್ತೆ ಅಧ್ಯಯನ?ಗರ್ಭಿಣಿಯರಲ್ಲಿ ಹೆಚ್ಚುತ್ತಿರುವ ಹೃದಯಾಘಾತ, ಏನು ಹೇಳತ್ತೆ ಅಧ್ಯಯನ?

ಆರು ಮಂದಿಯಲ್ಲಿ ಒಬ್ಬರು ಈ ಮಧುಮೇಹದಿಂದ ಬಳಲುತ್ತಿದ್ದಾರೆ. ಈ ಕುರಿತು ಪಬ್ಲಿಕ್ ಹೆಲ್ತ್ ಫೌಂಡೇಶನ್ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. 24-36 ವಾರದೊಳಗಿನ ಗರ್ಭಿಣಿಯರಿಗೆ ತಿಂಡಿ ತಿನ್ನುವ ಮುನ್ನ 75 ಗ್ರಾಂನಷ್ಟು ಗ್ಲೂಕೋಸ್ ನೀಡುವುದುರಿಂದ ಮಧುಮೇಹ ಇದೆಯೋ ಅಥವಾ ಆರೋಗ್ಯವಾಗಿದ್ದಾರೆಯೇ ಎನ್ನುವುದು ತಿಳಿಯುತ್ತದೆ. ಬೆಂಗಳೂರಲ್ಲಿ ಶೇ.4.4 ರಷ್ಟು ಗರ್ಭಿಣಿಯರಲ್ಲಿ ಜಿಡಿಎಂ ಮಧುಮೇಹ ವಿರುವುದು ಪತ್ತೆಯಾಗಿದೆ.

19 percent pregnant women suffer from diabetes in Bengaluru

ಗರ್ಭಿಣಿಯರು ಚೆಕ್‌ಅಪ್‌ಗೆಂದು ಬಂದಾಗಲೇ ಸ್ಕ್ಯಾನಿಂಗ್ ಸಂದರ್ಭದಲ್ಲಿ ಶುಗರ್ ಟೆಸ್ಟ್‌ ಕೂಡ ಮಾಡಿಸುವುದು ಒಳಿತು ಎಂದು ವೈದ್ಯರು ಸಲಹೆ ನೀಡಿದ್ದಾರೆ.

English summary
Around 19 percent pregnant women are afflicted with diabetes, according to an ongoing study by the Public Health Foundation of India (PHFI) Bengaluru chapter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X