'ರೆಡ್‌' ಕೆಟಗರಿಯಲ್ಲಿವೆ ಬೆಂಗಳೂರಿನ 168.21 ಕಿ.ಮೀ ರಸ್ತೆಗಳು

ಬೆಂಗಳೂರು, ಡಿಸೆಂಬರ್ 17: ಕಳೆದ ಐದು ವರ್ಷಗಳಿಂದ ರಾಜ್ಯ ಸರ್ಕಾರವು ಬೆಂಗಳೂರಿನ ರಸ್ತೆಗಳ ನಿರ್ವಹಣೆಗಾಗಿ 20,060 ರೂ.ವೆಚ್ಚ ಮಾಡಿದೆ.

ಇನ್ನೊಂದೆಡೆ, ಬಿಬಿಎಂಪಿಯು ಶೀಘ್ರ ಕೋಟ್ಯಂತರ ರೂ. ವೆಚ್ಚದ 168.21 ಕಿ.ಮೀ ಉದ್ದದ ರಸ್ತೆಯನ್ನು ರಿಪೇರಿ ಮಾಡಲು ಪಟ್ಟಿ ತಯಾರಿಸಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಸರ್ಕಾರದಿಂದ ಕೋಟ್ಯಂತರ ರೂ ಹಣ ಖರ್ಚು ಮಾಡಿದರೂ ಕೂಡ ಬೆಂಗಳೂರಿನಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲು ಬಿಬಿಎಂಪಿಗೆ ಸಾಧ್ಯವಾಗಿಲ್ಲ. ಬಿಬಿಎಂಪಿಯು ಹದಗೆಟ್ಟಿರುವ ರಸ್ತೆಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಆ ಪಟ್ಟಿಯನ್ನು ನೋಡಿದರೆ 20,060 ಕೋಟಿ ರೂ ಸಮರ್ಪಕವಾಗಿ ಬಳಕೆಯಾಗಿಲ್ಲ ಎನ್ನುವುದು ಎದ್ದು ತೋರುತ್ತದೆ. ಈಗ ಸಧ್ಯಕ್ಕೆ 1261.36 ಕಿ.ಮೀ ರಸ್ತೆಯನ್ನು ನವೀಕರಣ ಮಾಡುವ ಕುರಿತು ಬಿಬಿಎಂಪಿ ಧ್ವನಿ ಎತ್ತಿದೆ.

bengaluru-s-168-21-km-roads-are-unmotorable

ಈ ಪಟ್ಟಿಯು ಬೆಂಗಳೂರಿನ ರಸ್ತೆಗಳ ಪರಿಸ್ಥಿತಿ ಹೇಗಿದೆ ಎಂಬುದನ್ನು ಒತ್ತಿ ಹೇಳುತ್ತಿದೆ. 168.21 ಕಿ.ಮೀ ರಸ್ತೆ ವಾಹನಗಳು ಸಂಚರಿಸಲು ಯೋಗ್ಯವಾಗಿಲ್ಲ. ಅದರಲ್ಲೂ ದ್ವಿಚಕ್ರವಾಹ ಸವಾರರಿಗಂತೂ ದೊಡ್ಡ ತಲೆನೋವಾಗಿದೆ. ಈ ರಸ್ತೆಗಳು ರೆಡ್ಡ ಕೆಟಗರಿಯಲ್ಲಿ ಬರಲಿವೆ.

ಇನ್ನು 272.92 ಕಿ.ಮೀ ರಸ್ತೆಗಳನ್ನು ಯೆಲ್ಲೋ ಕೆಟಗರಿಗೆ ಸೇರಿಸಲಾಗಿದೆ. ಹಾಗೂ 99.49 ಕಿ.ಮೀ ವ್ಯಾಪ್ತಿಯ ರಸ್ತೆಯನ್ನು ಗ್ರೀನ್ ಕೆಟಗರಿಗೆ ಸೇರಿಸಲಾಗಿದೆ.

ಯೆಲ್ಲೋ ಹಾಗೂ ಗ್ರೀನ್ ಕೆಟಗರಿಯ ರಸ್ತೆಗಳಲ್ಲಿ ದ್ವಿಚಕ್ರ ಸವಾರರು ಆರಾಮಾಗಿ ಸಂಚರಿಸಬಹುದಾಗಿದೆ. ಆದರೆ ರೆಡ್ ಕೆಟಗರಿಯ ರಸ್ತೆಗಳಲ್ಲಿ ನೂರಾರು ಹೊಂಡಗಳಿದ್ದು, ದ್ವಿಚಕ್ರ ವಾಹನ ಸವಾರರಿಗೆ ಕಷ್ಟವಾಗುವಂತಹ ಸ್ಥಿತಿಯಲ್ಲಿದೆ.

ಗ್ರೀನ್ ಕೆಟಗರಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಹೆಚ್ಚು ಹಣ ಬೇಕಿಲ್ಲ, ಆದರೆ ಯೆಲ್ಲೋ ಹಾಗೂ ರೆಡ್ ಕೆಟಗರಿ ರಸ್ತೆಗಳನ್ನು ಪುನರ್ ನಿರ್ಮಿಸಲು ಹೆಚ್ಚು ವೆಚ್ಚವಾಗಲಿದೆ.

ಬೆಂಗಳೂರು ನಗರದ ಮುಖ್ಯ ರಸ್ತೆಯೊಂದರಲ್ಲಿ ಗುರುವಾರ ಬೃಹತ್ ಸಿಂಕ್‌ಹೋಲ್ ಕಾಣಿಸಿಕೊಂಡಿದ್ದು, ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಬೆಂಗಳೂರಿನ ಹೃದಯ ಭಾಗದಲ್ಲಿರುವ ಜೆಸಿ ರಸ್ತೆಯ ಮಧ್ಯದಲ್ಲಿರುವ ಬೃಹತ್ ಹೊಂಡದ ಹಲವಾರು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ.

ಪೌರ ಸಂಸ್ಥೆಯ ಕಾರ್ಮಿಕರು ರಸ್ತೆಯ ಒಂದು ಭಾಗವನ್ನು ಸುತ್ತುವರಿದು ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವಾಗ ಆಳವಾದ ಸಿಂಕ್‌ಹೋಲ್‌ನಲ್ಲಿ ವ್ಯಕ್ತಿಯೊಬ್ಬ ನಿಂತಿರುವುದನ್ನು ಕೆಲವು ಫೋಟೋಗಳು ತೋರಿಸಿವೆ.

ಈ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಇಂಜಿನಿಯರ್ (ರಸ್ತೆ ಮತ್ತು ಮೂಲಸೌಕರ್ಯ) ಬಿ.ಎಸ್. ಪ್ರಹ್ಲಾದ್ ಖಾಸಗಿ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿ, ಬುಧವಾರ ರಾತ್ರಿಯೇ ಸಿಂಕ್‌ಹೋಲ್ ಉಂಟಾಗಿದ್ದು, ಪ್ರಾಥಮಿಕ ವರದಿಯ ಪ್ರಕಾರ ಅಲ್ಲಿ ಒಂದು ಹಳೆಯ ಬಾವಿ ಇದ್ದಿರಬಹುದು ಮತ್ತು ಅದು ಈಗ ಕುಸಿದಿದೆ"

ಕಳೆದ ಸೆಪ್ಟೆಂಬರ್‌ನಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಎಲ್) ಸುರಂಗ ಕೊರೆಯುವ ಕಾರ್ಯಾಚರಣೆಯಿಂದಾಗಿ ಬೆಂಗಳೂರಿನ ಟ್ಯಾನರಿ ರಸ್ತೆಯ ಬಳಿ ಮತ್ತೊಂದು ದೊಡ್ಡ ಸಿಂಕ್‌ಹೋಲ್ ತೆರೆದಿತ್ತು.

ಈ ಹಿಂದೆಯೂ ಅಲ್ಲಿ ಬಾವಿ ಇತ್ತು ಎಂದು ಅಧಿಕಾರಿಗಳು ಹೇಳಿದ್ದರು. ಅಂತಹ ಹಳೆಯ ಬಾವಿಗಳಿಂದ ರಸ್ತೆಯಲ್ಲಿ ಗುಂಡಿ ಬೀಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯ ಇಂಜಿನಿಯರ್ ಬಿ.ಎಸ್. ಪ್ರಹ್ಲಾದ್, "ಆತಂಕಪಡುವ ಅಗತ್ಯವಿಲ್ಲ. ಇದು ವರ್ಷಕ್ಕೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ವಿವಿಧ ಕಾರಣಗಳಿಗಾಗಿ ಸಂಭವಿಸಬಹುದು," ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+