ತಲಘಟ್ಟಪುರದ ಆತ್ಮಾನಂದ ಆಶ್ರಮದಲ್ಲಿ ಪತ್ತೆಯಾದ ಬಾಲಕಿ ಕಲ್ಯಾಣ ಸಮಿತಿ ವಶಕ್ಕೆ

ಬೆಂಗಳೂರು, ಜ. 11: ಅಮ್ಮನನ್ನು ಮನೆಯಲ್ಲಿ ಕೂಡಿ ಹಾಕಿ ನಾಪತ್ತೆಯಾಗಿದ್ದ ಬಾಲಕಿಯ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಮನೆ ತೊರೆದು ಖಾವಿದಾರಿಯ ಆಶ್ರಮದಲ್ಲಿ ಯುವತಿ ಪತ್ತೆಯಾಗಿದ್ದಾಳೆ.

ತಲಘಟ್ಟಪುರ ಸಮೀಪ ನೆಲೆಸಿರುವ ಆತ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಆಶ್ರಮದಲ್ಲಿ ಕಾಣೆಯಾಗಿದ್ದ ಹದಿನಾರು ವರ್ಷದ ಬಾಲಕಿ ಪತ್ತೆಯಾಗಿದ್ದು, ನಾನು ಸ್ವಯಂ ಪ್ರೇರಿತವಾಗಿ ಆಶ್ರಮಕ್ಕೆ ಬಂದಿರುವುದಾಗಿ ತಲಘಟ್ಟಪುರ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾರೆ.

ಆ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ. ಆ ನಂತರ ಆ ಬಾಲಕಿಯನ್ನು ಅವರ ತಂದೆ ಕರೆದುಕೊಂಡು ಹೋಗಿದ್ದಾರೆ.

ಸ್ವಾಮೀಜಿ ಮೋಡಿ:

ಕಳೆದ ಮೂರು ವರ್ಷದಿಂದ ಕಾಣೆಯಾಗಿದ್ದ ಬಾಲಕಿಯ ತಂದೆ ತಾಯಿ ಇದೇ ಆಶ್ರಮಕ್ಕೆ ಹೋಗುತ್ತಿದ್ದರು. ಸ್ವಾಮೀಜಿಗೆ ಪೂಜೆ ಸಲ್ಲಿಸುತ್ತಿದ್ದರು. ಈ ವೇಳೆ ಸ್ವಾಮೀಜಿ ಪೂಜೆಗೆ ಆಕರ್ಷಿತಳಾಗಿದ್ದಾಳೆ. ಜ. 1 ರಂದು ತುರಹಳ್ಳಿ ಮನೆ ಬಿಟ್ಟು ಬಾಲಕಿ ಕಾಣೆಯಾಗಿದ್ದಳು. ಹೋಗುವ ಮುನ್ನ ತನ್ನ ಮಾವ ಮತ್ತು ಅಮ್ಮ ಮನೆಯಲ್ಲಿರುವಾಗ ಬಾಗಿಲು ಹಾಕಿಕೊಂಡು ನಾಪತ್ತೆಯಾಗಿದ್ದಳು.

Bengaluru: 16 Year old girl went to Atmanand Saraswati Swamiji Ashram rescued

ಬಾಲಕಿ ನಾಪತ್ತೆ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಬಾಲಕಿಯ ಮಾವ ದೂರು ನೀಡಿದ್ದರು. ಮಗುವನ್ನು ಆತ್ಮಾನಂದ ಸ್ವಾಮೀಜಿ ಕರೆದೊಯ್ದಿದ್ದಾರೆ. ಕಿಡ್ನಾಪ್ ಮಾಡಿರುವ ಸಾಧ್ಯತೆಯಿದೆ ಎಂದು ಆರೋಪಿಸಿದ್ದರು. ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದ ತಲಘಟ್ಟಪುರ ಪೊಲೀಸರು ನಾಪತ್ತೆಯಾಗಿದ್ದ ಬಾಲಕಿಯನ್ನು ಆಶ್ರಮದಲ್ಲಿ ಪತ್ತೆ ಮಾಡಿದ್ದಾರೆ.

ಆಕೆಯನ್ನು ವಿಚಾರಣೆ ನಡೆಸಿದಾಗ ನಾನೇ ಸ್ವಯಂ ಪ್ರೇರಿತವಾಗಿ ಆಶ್ರಮಕ್ಕೆ ಬಂದಿದ್ದೇನೆ. ನನ್ನನ್ನು ತನ್ನ ಮಾವನೊಂದಿಗೆ ಮದುವೆಯಾಗುವಂತೆ ತನ್ನ ತಾಯಿ ಒತ್ತಾಯಿಸುತ್ತಿದ್ದರು. ನನ್ನ ಮಾವ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಮನೆ ಬಿಟ್ಟು ಬಂದಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾಳೆ. ಮಗುವಿನ ಹೇಳಿಕೆ ಪಡದು ಆಕೆಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದೇವೆ. ಅಲ್ಲಿಂದ ಕಾನೂನು ಪ್ರಕ್ರಿಯೆ ಮುಗಿಸಿ ಪೋಷಕರು ಕರೆದೊಯ್ಯಲಿದ್ದಾರೆ ಎಂದು ತಲಘಟ್ಟಪುರ ಪೊಲೀಸರು ತಿಳಿಸಿದ್ದಾರೆ.

ಚಿಕ್ಕ ವಯಸ್ಸಿನಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರುವಂತಹ ಶಕ್ತಿಗಳಿಂದ ದೂರ ಇರಿಸಬೇಕು. ಪೂಜೆ ಮಾಡುವ ಸ್ವಾಮೀಜಿ ನಡೆ ಬಗ್ಗೆ ಅಕರ್ಷಿತಳಾಗಿ ಅಲ್ಲಿಗೆ ಹೋಗಿರಬೇಕು. ಪೋಷಕರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅವರ ಭಾವನೆಗಳಿಗೆ ಸ್ಪಂದಿಸಬೇಕು. ಮಕ್ಕಳಿಗೆ ಮನೆಯಲ್ಲಿ ಉತ್ತಮ ವಾತಾವರಣ ಇರಬೇಕು. ಇಲ್ಲಿದ್ದರೆ ಇಂತಹ ಅವಘಡಗಳು ಸಂಭವಿಸುತ್ತವೆ. ಇದಕ್ಕೆ ಪೋಷಕರು ಅವಕಾಶ ಮಾಡಿಕೊಡಬಾರದು. ಮಕ್ಕಳ ಆಸೆ ಆಕಾಂಕ್ಷೆಗಳ ಬಗ್ಗೆ ಪೋಷಕರು ಅರಿತುಕೊಳ್ಳಬೇಕು. ಅವರ ಭಾವನೆಗಳಿಗೆ ಸ್ಪಂದಿಸಬೇಕು ಎಂದು ಮನೋವೈದ್ಯ ಶಿವಲಿಂಗಪ್ಪ ಅವರು ಒನ್‌ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಬಾಲಕ ಸಾವು:

ನೀರು ಶುದ್ಧೀಕರಣ ಘಟಕದಲ್ಲಿ ಮುಳುಗಿ ಹದಿನಾಲ್ಕು ವರ್ಷದ ಬಾಲಕ ಸಾವನನಪ್ಪಿರುವ ಘಟನೆ ಬಾಣಸವಾಡಿಯಲ್ಲಿ ನಡೆದಿದೆ.

Recommended Video

      Ross Taylor ಕಡೇ ಪಂದ್ಯದ ಕಡೇ ಎಸೆತದಲ್ಲಿ ಮಾಡಿದ Magic | Oneindia Kannada

      ಗ್ಲಾವಿನ್ ಮೃತಪಟ್ಟ ಬಾಲಕ. ನಾಗಯ್ಯನಪಾಳ್ಯದಲ್ಲಿರುವ ರೈಲ್ವೇ ಇಲಾಖೆಗೆ ಸೇರಿದ ನೀರಿನ ಶುದ್ಧೀಕರಣ ಘಟಕದಲ್ಲಿ ಈ ಅವಘಡ ಸಂಭವಿಸಿದೆ. ಭಾನುವಾರ ಸಂಜೆ ತನ್ನ ಸ್ನೇಹಿತರೊಂದಿಗೆ ಆಟ ಆಡಲು ಹೋದ ಗ್ಲಾವಿನ್ ನೀರಿನ ಫ್ಲಾಂಟ್ ಬಳಿ ಹೋಗಿದ್ದಾನೆ. ಆಟ ಆಡುವ ವೇಳೆ ಪ್ಲಾಂಟ್ ಗೆ ಬಿದ್ದು ಮೃತಪಟ್ಟಿದ್ದು, ಬಾಣಸವಾಡಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+