16 ಮಂದಿ ಸಿಬ್ಬಂದಿಗೆ ಕೊರೊನಾ ಸೋಂಕು: ಬೆಂಗಳೂರಿನ ಪಬ್ ಬಂದ್

ಬೆಂಗಳೂರು, ಮಾರ್ಚ್ 29: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದೆ.

ಹಾಗೆಯೇ ನಗರದ ಪಬ್ ಒಂದರಲ್ಲಿ 16 ಮಂದಿಗೆ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಕಾರಣ ತಾತ್ಕಾಲಿಕವಾಗಿ ಪಬ್ ಬಂದ್ ಮಾಡಲಾಗಿದೆ.

ನಗರದಲ್ಲಿ ಈವರೆಗೆ ಐದಕ್ಕಿಂತ ಹೆಚ್ಚಿನ ಕಂಡು ಬಂದಿರುವ 29 ಕ್ಲಸ್ಟರ್‌ಗಳನ್ನು ಗುರುತಿಸಲಾಗಿದೆ. ಈ ಪೈಕಿ ದಾಸರಹಳ್ಳಿ ವಲಯದಲ್ಲಿ 9, ಯಲಹಂಕ ವಲಯದಲ್ಲಿ 8, ಪೂರ್ವ ವಲಯದಲ್ಲಿ 7, ಪಶ್ಚಿಮ ವಲಯದಲ್ಲಿ 3 ಹಾಗೂ ದಕ್ಷಿಣ ವಲಯದಲ್ಲಿ 2 ಕ್ಲಸ್ಟರ್‌ಗಳನ್ನು ಗುರುತಸಿಲಾಗಿದೆ.

16 Staffers Get COVID-19 Bengaluru Pub Temporarily Shut

ನಗರದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆಯು ಹಜ್ ಭವನದಲ್ಲಿ 200 ಹಾಸಿಗೆ ಸಾಮರ್ಥ್ಯದ ಕೋವಿಡ್ ಆರೈಕೆ ಕೇಂದ್ರ ಆರಂಭಿಸಿದೆ. ಭಾನುವಾರ ಈ ಕೇಂದ್ರದಲ್ಲಿ 22 ಪುರುಷರು ಹಾಗೂ 8 ಮಹಿಳೆಯರು ಸೇರಿ ಒಟ್ಟು 30 ಸೋಂಕಿತರು ದಾಖಲಾಗಿದ್ದಾರೆ.

ನಗರದ ನ್ಯೂ ಬಿಇಎಲ್ ರಸ್ತೆಯ ಪಬ್ ಒಂದರ 87 ಸಿಬ್ಬಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 16 ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಆ ಸ್ಥಳವನ್ನು ಕೊರೊನಾ ಕ್ಲಸ್ಟರ್ ಎಂದು ಗುರುತಿಸಲಾಗಿದೆ.

ನಗರದಲ್ಲಿ ಭಾನುವಾರ ವರದಿಯಾದ 2004 ಪ್ರಕರಗಳಲ್ಲಿ 10 ವರ್ಷದೊಳಗಿನ 48 ಮಕ್ಕಳಿಗೆ ಸೋಂಕು ದೃಢಪಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+