ಬೆಂಗಳೂರು: ಶಾಲಾ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು
ಬೆಂಗಳೂರು, ಜೂನ್ 8: ಶಾಲಾ ಹಾಸ್ಟೆಲ್ ನಲ್ಲಿ ಬಾಲಕಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಹೊರ ವಲಯದ ಸರ್ಜಾಪುರದಲ್ಲಿ ಗುರುವಾರ ನಡೆದಿದೆ.
ವೈಶಾಲಿ(13) ಮೃತ ವಿದ್ಯಾರ್ಥಿನಿ, ವಿದ್ಯಾರ್ಥಿನಿ ಅತ್ತಿಬೆಲೆಯಲ್ಲಿರುವ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು, ಸರ್ಜಾಪುರದಲ್ಲಿರುವ ಹಾಸ್ಟೆಲ್‌ಗೆ ಹೋಗಿದ್ದಾಳೆ ನಂತರ ಬೆಳಗ್ಗೆ ಆಕೆಯ ಶವ ಪತ್ತೆಯಾಗಿದೆ. ಸಾವಿಗೆ ಕಾರಣ ಏನು ಎಂದು ಇದುವರೆಗೂ ತಿಳಿದುಬಂದಿಲ್ಲ.
ವಿದ್ಯಾರ್ಥಿನಿ 5 ನೇ ತರಗತಿಯಲ್ಲಿ ಓದುತ್ತಿದ್ದಳು ಎನ್ನಲಾಗಿದೆ. .ಪೊಲೀಸರು ಹೇಳುವ ಪ್ರಕಾರ ಹಾಸ್ಟೆಲ್ ರೂಮಿನಲ್ಲಿ ಅಹಿತಕರ ಘಟನೆಗಳು ಏನೂ ಕೂಡ ನಡೆದಿಲ್ಲ, ಎಲ್ಲಾ ವಸ್ತುಗಳು ಇದ್ದಲ್ಲಿಯೇ ಇದೆ, ಅದರಲ್ಲಿಯೂ ಆಕೆಯ ಮೈಮೇಲೆ ಯಾವುದೇ ಗಾಯದ ಗುರುತುಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶಾಲೆಯ ಒಟ್ಟು 10ಮಂದಿ ವಿದ್ಯಾರ್ಥಿಗಳಲ್ಲಿ ವೈಶಾಲಿ ಕೂಡ ಉಚಿತ ಶಿಕ್ಷಣಕ್ಕೆ ಆಯ್ಕೆಯಾಗಿದ್ದಳು, ವೈಶಾಲಿ ತಾಯಿ ಮಡಿವಾಳದಲ್ಲಿ ಹೂವು ಮಾರಿಕೊಂಡು ಜೀವನ ನಡೆಸುತ್ತಿದ್ದಾರೆ. 2010ರಲ್ಲಿ ಮಗಳನ್ನು ಇಂಟರ್‌ನ್ಯಾಷನಲ್ ಶಾಲೆಗೆ ಸೇರಿದ್ದರು.
ಅವಳ ತಂದೆ ದಿನಗೂಲಿ ನೌಕರರಾಗಿದ್ದರು. ಹಾಗಾಗಿ ವೈಶಾಲಿಯನ್ನು ಖಾಸಗಿ ಶಾಲೆಗೆ ದಾಖಲು ಮಾಡಲು ಅವರ ಬಳಿ ಹಣವಿರಲಿಲ್ಲ ಆದರೆ ವೈಶಾಲಿ ಓದಿನಲ್ಲಿ ತುಂಬ ಚುರುಕಾಗಿದ್ದ ಕಾರಣ ಉಚಿತ ಸೀಟನ್ನು ಗಿಟ್ಟಿಸಿಕೊಂಡಿದ್ದಳು.
ಪೊಲೀಸರು ಹೇಳುವ ಆಕೆ ಮಲಗುವ ಬಂಕರ್ ಮೇಲೆಯೇ ಸಾವನ್ನಪ್ಪಿದ್ದಾಳೆ, ಆಕೆಗೆ ಕೆಲ ದಿನಗಳಿಂದ ಆರೋಗ್ಯ ಸರಿಯಿರಲಿಲ್ಲ ಎಂದು ಶಾಲಾ ಆಡಳಿತ ಮಂಡಳಿಯು ಹೇಳಿದೆ.ಅವಳ ತುಟಿ ಹಾಗೂ ಕೆನ್ನೆಯಲ್ಲಿ ರಕ್ತ ಗುರುತುಗಳಿವೆ ಆಕೆ ರಕ್ತದ ವಾಂತಿ ಮಾಡಿಕೊಂಡಿರಬಹುದು ಎಂದು ಊಹಿಸಲಾಗಿದೆ, ವರದಿ ಬಂದ ಮೇಲೆ ಆಕೆ ಸಾವಿಗೆ ಕಾರಣವೇನನು ಎಂದು ತಿಳಿದು ಬರಲಿದೆ.












Click it and Unblock the Notifications