ಬೆಂಗಳೂರಿಗೆ ಕರಾಳ ಶನಿವಾರ, 11 ಜನರ ಆತ್ಮಹತ್ಯೆ

ಬೆಂಗಳೂರು, ಜೂ.14 : ಶನಿವಾರ ಜೂ.14 ಬೆಂಗಳೂರಿನ ಪಾಲಿಗೆ ಕರಾಳ ದಿನ. ವಿವಿಧ ಕಾರಣಗಳಿಗಾಗಿ ನಗರದಲ್ಲಿ ಇಂದು ಬೆಳಗ್ಗೆಯಿಂದ 11 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶ್ರೀರಾಂಪುರದಲ್ಲಿ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶನಿವಾರ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 11 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಶ್ರೀರಾಂಪುರದಲ್ಲಿ ಕೌಟುಂಬಿಕ ಕಲಹದಿಂದ ಹಾಗೂ ಹೊಟ್ಟೆ ನೋವು ತಡೆಯಲಾರದೆ ವಿಜಯಲಕ್ಷ್ಮಿ (35), ರತ್ನಮ್ಮ (44), ಆನಂದಿ (45), ಕೋಕಿಲ (21) ಎಂಬುವರು ನೇಣಿಗೆ ಶರಣಾಗಿದ್ದರೆ. [ಪಿಟಿಐ ಚಿತ್ರ]

rest of peace

ಇನ್ನು ಶ್ರೀರಾಂಪುರದಲ್ಲಿಯೇ ಅನಾರೋಗ್ಯದಿಂದ ಬೇಸತ್ತು ಮಾಣಿಕ್ಯ (75) ಎಂಬುವವರು ಸಾವಿಗೆ ಶರಣಾಗಿದ್ದಾರೆ. ನಗರದ ಹೊರವಲಯದ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯ ಶಾಂತಿಪುರದಲ್ಲಿ ಹೊಟ್ಟೆ ನೋವು ತಾಳಲಾರದೆ 9ನೇ ತರಗತಿಯ ವಿದ್ಯಾರ್ಥಿನಿ ರೇವತಿ (15) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪತ್ನಿ ಕಿರುಕುಳದಿಂದ ಬೇಸತ್ತು ಕಲಾಸಿಪಾಳ್ಯದ ನಿವಾಸಿ ಸಂಪಂಗಿ (30) ಮನೆಯಲ್ಲೇ ನೇಣಿಗೆ ಶರಣಾದರೆ, ಪತಿ ಕಿರುಕುಳದಿಂದ ಬೇಸತ್ತು ಬೈಯಪ್ಪನಹಳ್ಳಿಯ ನಿವಾಸಿ ಸುನಂದಾ (27) ಎಂಬುವರು ಮನೆಯಲ್ಲಿಯೇ ಸಾವಿಗೆ ಶರಣಾಗಿದ್ದಾರೆ.

ಶಿವಾಜಿನಗರದ ನಿವಾಸಿಯಾದ ರಾಜು (27) ತಂಗಿ ತಾನು ಪ್ರೀತಿಸಿದ ಹುಡುಗನ ಜೊತೆ ಮದುವೆಯಾಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅನಾರೋಗ್ಯದ ಹಿನ್ನೆಲೆಯಲ್ಲಿ ಕೆ.ಆರ್.ಪುರಂನಲ್ಲಿ ರೇಷ್ಮಾ (15) ಎಂಬ ಬಾಲಕಿ ವಿಷ ಸೇವಿಸಿ ಸಾವನ್ನಪ್ಪಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+