ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡ್19 ರೋಗಿಗಳಿಗೆ ಬೆಡ್ ಮೀಸಲು

|
Google Oneindia Kannada News

ಬೆಂಗಳೂರು, ಜೂನ್ 30: ಕೊರೊನಾವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳ ನೆರವು ಪಡೆಯಲು ಸರ್ಕಾರ ಮುಂದಾಗಿದೆ. ನಗರದ ಒಟ್ಟು 11 ಖಾಸಗಿ ಮತ್ತು 3 ಸರ್ಕಾರಿ ಮೆಡಿಕಲ್ ಕಾಲೇಜ್ ಗಳನ್ನು ಕೋವಿಡ್ ಚಿಕಿತ್ಸೆಗಾಗಿ ಈ ವಾರದಲ್ಲಿ ಬಳಸಿಕೊಳ್ಳಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹೇಳಿದರು.

ನಗರದಲ್ಲಿರುವ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಕೋವಿಡ್ 19 ರೋಗಿಗಳಿಗಾಗಿ ಆರು ಸಾವಿರ ಹಾಸಿಗೆಗಳನ್ನು ಮೀಸಲಿಡಲು ಖಾಸಗಿ ಆಸ್ಪತ್ರೆಗಳು ಸಮ್ಮತಿಸಿವೆ ಎಂದರು.

ಬೆಂಗಳೂರಿನಲ್ಲಿ 495 ಕೋವಿಡ್ 19 ಸೋಂಕಿತ ವಲಯಗಳಿವೆ!ಬೆಂಗಳೂರಿನಲ್ಲಿ 495 ಕೋವಿಡ್ 19 ಸೋಂಕಿತ ವಲಯಗಳಿವೆ!

ಖಾಸಗಿ ಆಸ್ಪತ್ರೆಗಳಿಂದ ಎರಡು ಸಾವಿರ ಹಾಸಿಗೆಗಳು ತಕ್ಷಣಕ್ಕೆ ಸಿಗಲಿವೆ. ಇನ್ನೊಂದು ವಾರದಲ್ಲಿ ಇನ್ನು ನಾಲ್ಕೂವರೆ ಸಾವಿರ ಬೆಡ್ ಗಳು ಸಿಗಲಿವೆ ಎಂದು ಆಡಳಿತ ಮಂಡಳಿ ಪ್ರತಿನಿಧಿಗಳು ಭರವಸೆ ನೀಡಿದ್ದಾರೆ.

11 Private And 3 Medical Colleges Reserved For Covid 19 Patients: Minister Dr.k.sudhakar

ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ನೇತೃತ್ವದಲ್ಲಿ ನಡೆದ ಪ್ರತ್ಯೇಕ ಸಭೆಗಳಲ್ಲಿ ಆಡಳಿತ ಮಂಡಳಿಗಳು ಸರ್ಕಾರದ ನಿರ್ಧಾರಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವುದಾಗಿ ಭರವಸೆ ನೀಡಿವೆ ಎಂದು ತಿಳಿಸಿದರು.

ಹೋಂ ಕ್ವಾರಂಟೈನ್‌ನಲ್ಲಿ ನನ್ನನ್ನು ಕಟ್ಟಿಹಾಕಿದಂತೆ ಆಗಿತ್ತು: ಡಾ. ಸುಧಾಕರ್ಹೋಂ ಕ್ವಾರಂಟೈನ್‌ನಲ್ಲಿ ನನ್ನನ್ನು ಕಟ್ಟಿಹಾಕಿದಂತೆ ಆಗಿತ್ತು: ಡಾ. ಸುಧಾಕರ್

11 Private And 3 Medical Colleges Reserved For Covid 19 Patients: Minister Dr.k.sudhakar

ಚಿಕಿತ್ಸಾ ವಿಧಾನದ ವಿಧಿ - ವಿಧಾನಗಳ ಮಾರ್ಗಸೂಚಿ:
ಕೊರೋನಾ ಸೋಂಕು ತಗುಲಿದವರ ಪೈಕಿ ರೋಗ ಲಕ್ಷಣಗಳು ಇದ್ದವರು, 60 ಕ್ಕೂ ಹೆಚ್ಚು ವಯಸ್ಸಿನ ಮತ್ತು ಡಯಾಬಿಟಿಸ್, ಬ್ಲಡ್ ಪ್ರೆಷರ್, ಕಿಡ್ನಿ, ಶ್ವಾಸಕೋಶ ಸೋಂಕು ಮುಂತಾದ ಗಂಭೀರ ಕಾಯಿಲೆ ಇದ್ದವರನ್ನು ಮಾತ್ರ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ರೋಗಲಕ್ಷಣ ಇಲ್ಲದ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಇಟ್ಟು ನಿಗಾವಹಿಸಲಾಗುವುದು. ಈ ಎಲ್ಲಾ ಮಾಹಿತಿ ಇರುವ ಚಿಕಿತ್ಸಾ ವಿಧಾನದ ವಿಧಿ - ವಿಧಾನಗಳ ಮಾರ್ಗಸೂಚಿ ಯನ್ನು ನಾಳೆ ಬಿಡುಗಡೆ ಮಾಡಲಾಗುವುದು ಎಂದರು.

English summary
6500 beds will be reserved for Covid patients in city's 11 private and 3 medical colleges. The representatives from college administration have promised said Medical Minister Dr.K.Sudhakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X