ಬೆಂಗಳೂರಿನ ಬಾಲಮಂದಿರದಲ್ಲಿ ಬಿಸಿಯೂಟ ಸೇವಿಸಿ 105 ಮಕ್ಕಳು ಅಸ್ವಸ್ಥ
ಬೆಂಗಳೂರು, ಡಿಸೆಂಬರ್ 31: ಬೆಂಗಳೂರಿನ ಬಾಲಮಂದಿರವೊಂದರಲ್ಲಿ ಬಿಸಿ ಊಟ ಸೇವಿಸಿದ ಸುಮಾರು 105 ಮಕ್ಕಳು ಅಸ್ವಸ್ಥರಾದ ಘಟನೆ ನಡದಿದೆ.
ಅಸ್ವಸ್ಥ ಮಕ್ಕಳಿಗೆ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೂವರು ಮಕ್ಕಳು ಚಿಂತಾಜನ ಸ್ಥಿತಿಯಲ್ಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಬಾಲಮಂದಿರದಲ್ಲಿ ಆಹಾರಕ್ಕೆ ವಿಷಕಾರಿ ಪದಾರ್ಥ ಅಥವಾ ಹಲ್ಲಿ ಬಿದ್ದಿರಬಹುದು ಎಂದು ಶಂಕಿಸಲಾಗಿದ್ದು, ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಇತ್ತೀಚೆಗಷ್ಟೇ ಚಾಮರಾಜನಗರದ ಸುಳವಾಡಿಯ ಕಿಚ್ಚುಗತ್ತಿ ದೇವಸ್ಥಾನದಲ್ಲಿ ವಿಷಪ್ರಸಾದ ಸೇವಿಸಿ 15 ಕ್ಕೂ ಹೆಚ್ಚು ಜನ ಮೃತರಾದ ದುರಂತ ಘಟನೆ ನಡೆದಿತ್ತು.












Click it and Unblock the Notifications