• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಾಲಹಳ್ಳಿಯಲ್ಲಿ ಆರಂಭವಾಗಲಿದೆ 100 ಹಾಸಿಗೆಗಳ ಕೋವಿಡ್ ಕೇಂದ್ರ

|

ಬೆಂಗಳೂರು, ಮೇ 4: ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಾಲಹಳ್ಳಿಯಲ್ಲಿನ ವಾಯುಪಡೆ ಕೇಂದ್ರದಲ್ಲಿ ನೂರು ಹಾಸಿಗೆಗಳ ಕೋವಿಡ್ ಚಿಕಿತ್ಸಾ ಕೇಂದ್ರವನ್ನು ಭಾರತೀಯ ವಾಯುಪಡೆ ತೆರೆಯುತ್ತಿದೆ.

ಮೇ 6ರಿಂದ, ಆಮ್ಲಜನಕ ಸಾಂದ್ರತೆಯನ್ನೊಳಗೊಂಡ 20 ಹಾಸಿಗೆ ಸೌಲಭ್ಯದ ಕೇಂದ್ರವು ಕಾರ್ಯಾಚರಣೆ ಆರಂಭಿಸಲಿದೆ. ರಾಜ್ಯ ಸರ್ಕಾರದಿಂದ ಆಮ್ಲಜನಕ ಪೂರೈಕೆ ಖಾತ್ರಿಯಾದ ನಂತರ ಇನ್ನುಳಿದ 80 ಹಾಸಿಗೆಗಳ ಸೌಲಭ್ಯವನ್ನು ಕೊರೊನಾ ರೋಗಿಗಳಿಗೆ ಮುಕ್ತವಾಗಿಸಲಾಗುವುದು. ಮೇ 20ರಿಂದ ಈ ಕೇಂದ್ರ ಕಾರ್ಯಾಚರಣೆ ಆರಂಭಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಕೋವಿಡ್; ಚಿಂತಾಜನಕ ಸ್ಥಿತಿಯಲ್ಲಿ ನೆಲಮಂಗಲ ಕೋವಿಡ್; ಚಿಂತಾಜನಕ ಸ್ಥಿತಿಯಲ್ಲಿ ನೆಲಮಂಗಲ

ನೂರು ಹಾಸಿಗೆಗಳಲ್ಲಿ ಹತ್ತು ಐಸಿಯು ಹಾಸಿಗೆಗಳಿದ್ದು, 40 ಆಮ್ಲಜನಕದ ವ್ಯವಸ್ಥೆಯ ಹಾಸಿಗೆಗಳು ಲಭ್ಯವಿವೆ. ಇನ್ನುಳಿದ ಐವತ್ತು ಹಾಸಿಗೆಗಳು ಆಮ್ಲಜನಕ ಸಾಂದ್ರತೆಯನ್ನು ಹೊಂದಿರಲಿವೆ.

ಈ ಕೇಂದ್ರವು ವಾಯುಪಡೆಯ ಕಮಾಂಡ್ ಆಸ್ಪತ್ರೆಯ ತಜ್ಞರು, ವೈದ್ಯರು, ನರ್ಸ್‌ಗಳು ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿಯನ್ನು ಒಳಗೊಳ್ಳಲಿದೆ. ಬಿಬಿಎಂಪಿ ಸಹಯೋಗದೊಂದಿಗೆ ಇಲ್ಲಿ ದಾಖಲಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿದುಬಂದಿದೆ. ಔಷಧ, ಆಮ್ಲಜನಕ ಹಾಗೂ ಭದ್ರತೆ ಸಂಬಂಧಿ ನೆರವು ನೀಡುವುದಾಗಿ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಭರವಸೆ ನೀಡಿದೆ.

ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಐಸಿಯು ಹಾಸಿಗೆಗಳು ಹಾಗೂ ಆಮ್ಲಜನಕದ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ಕೇಂದ್ರ ತೆರೆಯಲಾಗುತ್ತಿದೆ. ಕರ್ನಾಟಕದಲ್ಲಿ ಸೋಮವಾರ 44,438 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಒಂದರಲ್ಲಿಯೇ 22,112 ಕೊರೊನಾ ಪ್ರಕರಣಗಳು ದಾಖಲಾಗಿವೆ. 239 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

   ಬೆಡ್ ಬ್ಲಾಕಿಂಗ್ ಅವ್ಯವಹಾರದಲ್ಲಿ ಭಾಗಿಯಾಗಿದ್ದ ಇಬ್ಬರು ಏಜೆಂಟ್ಸ್‌ ಅರೆಸ್ಟ್‌! | Oneindia Kannada
   English summary
   Indian Air Force will set up a 100 bedded COVID-19 treatment facility at Air Force Station Jalahalli,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X