Viral Video: ಬೆಂಗಳೂರಿನಲ್ಲಿ ಬಿಹಾರದ 10 ವರ್ಷದ ಬಾಲಕಿಯ ಕನ್ನಡಕ್ಕೆ ಮನಸೋತ ನೆಟ್ಟಿಗರು
ಬೆಂಗಳೂರು: ಈ ನಾಡಿನಲ್ಲಿ ಕನ್ನಡ ಬಳಸಿ, ಉಳಿಸಿ ಬೆಳೆಸಬೇಕು. ಕನ್ನಡಕ್ಕೆ ಅವಮಾನ, ಹಿಂದಿ ಹೇರಿಕೆ ಮತ್ತು ಕನ್ನಡ ಕಲಿಕೆಯ ಅವಕಾಶಗಳು ಈ ನೆಲದಲ್ಲಿಲ್ಲ ಎಂಬೆಲ್ಲ ಮಾತುಗಳು ಕೇಳಿ ಬರುತ್ತಲೇ ಇವೆ. ಇದರ ಮಧ್ಯ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಬಿಹಾರ ಪೋಷಕರ ಮಗಳ ಶಾಲೆಯಲ್ಲಿ ಕನ್ನಡದಲ್ಲಿ ಟಾಪರ್ ವಿದ್ಯಾರ್ಥಿನಿಯಾಗಿದ್ದಾಳೆ. ಈ ಬಾಲಕಿ ಸ್ವಚ್ಛ ಕನ್ನಡ ಮಾತನಾಡುವ, ಸ್ಪಷ್ಟವಾಗಿ ಕನ್ನಡ ಉಚ್ಛರಿಸುವ ವಿಡಿಯೋ ಅವರ ತಂದೆ ಹಂಚಿಕೊಂಡಿದ್ದು, ಭಾರೀ ವೈರಲ್ ಆಗಿದೆ. ನೆಟ್ಟಿಗರು ಬಾಲಕಿಯನ್ನು ಕನ್ನಡ ಪ್ರೇಮ ಮೆಚ್ಚಿ ಪ್ರಶಂಸಿಸಿದ್ದಾರೆ.
ಬಾಲಕಿಯ ತಂದೆ ಬಿಹಾರ ರಾಜ್ಯದವರಾಗಿದ್ದು, ಬೆಂಗಳೂರಿನಲ್ಲಿದ್ದಾರೆ. 10 ವರ್ಷದ ಅವರ ಮಗಳು ಬೆಂಗಳೂರಿನಲ್ಲಿ ಹುಟ್ಟಿದ್ದಾರೆ. ಈಕೆ ಆತ್ಮವಿಶ್ವಾಸದಿಂದ ಕನ್ನಡ ಮಾತನಾಡುತ್ತಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಾಲಕಿಯ ತಂದೆ ಅಭಿಷೇಕ್ ದುಬೆ ಅವರು ಮಗಳ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ತಂದೆ ಕೇಳುವ ಪ್ರಶ್ನೆಗಳಿಗೆ ಕನ್ನಡದಲ್ಲಿ ನಿರರ್ಗಳವಾಗಿ ಬಾಲಕಿ ಪ್ರತಿಕ್ರಿಯಿಸಿದ್ದಾರೆ. ಬಾಲಕಿಯ ಕನ್ನಡಕ್ಕೆ ನೆಟ್ಟಿಗರು ಮನಸೋತಿದ್ದಾರೆ.

ವಿಡಿಯೋದಲ್ಲಿ ಅಭಿಷೇಕ್ ದುಬೆ ಅವರು ಮಗಳೊಂದಿಗೆ ಸಂಭಾಷಣೆ ನಡೆಸುತ್ತಾರೆ. 'ಈ ಹುಡುಗಿಯನ್ನು ನೋಡಿ, ಅವಳು ಶಾಲೆಯಲ್ಲಿ ಕನ್ನಡದಲ್ಲಿ ಟಾಪರ್. ನಾನು ಅವಳನ್ನು ಕನ್ನಡದಲ್ಲಿ ಏನಾದರೂ ಹೇಳು ಎಂದರೆ ಹೇಳುತ್ತಾಳೆ. ಕನ್ನಡದಲ್ಲಿ ಮಾತನಾಡು ಎಂದು ಆಂಗ್ಲ ಭಾಷೆಯಲ್ಲಿ ತಂದೆ ಕೇಳುತ್ತಾರೆ. ಅದಕ್ಕೆ ಆ ಬಾಲಕಿ ಕನ್ನಡದಲ್ಲಿ ಉತ್ತರಿಸುತ್ತಾಳೆ. ತಂದೆಗೆ ನೀವು ತುಂಬಾ ಕರುಣಾಮಯಿ' ಎಂದು ಅನುವಾದ ಮಾಡಿ ಹೇಳುತ್ತಾಳೆ. ಈ ಇಬ್ಬರ ನಡುವಿನ ವಿಡಿಯೋ ವೈರಲ್ ಆಗಿದೆ.
ನನ್ನ ದಿನ ಸುಂದರಗೊಳಿಸಿದ ವಿಡಿಯೋ: ನೆಟ್ಟಿಗರು
ವಿಡಿಯೋಗೆ ಅನೇಕ ಕಾಮೆಂಟುಗಳ ಬಂದಿವೆ. ಈ ಬಾಲಕಿಯ ಆತ್ಮವಿಶ್ವಾಸ ಮತ್ತು ಭಾಷಾ ಸಾಮರ್ಥ್ಯಕ್ಕಾಗಿ ಪ್ರಶಂಸನೀಯ ಎಂದು ಒಬ್ಬರು ಕಾಮೆಂಟ್ ಹಾಕಿದ್ದಾರೆ. ಚೆನ್ನಾಗಿ ಮಾಡಿದ್ದೀಯ ಕಂದ, ನಿಮ್ಮ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಈ ಮಗುವಿನ ಕನ್ನಡ ಉಚ್ಛಾರಣೆಗೆ ನೋಡಿ ತುಂಬಾ ಖುಷಿ ಆಯಿತು ಎಂದು ಇನ್ನೊಬ್ಬರು ಹೇಳಿದ್ದಾರೆ. ಮತ್ತೊಬ್ಬರಂತೂ "ಈ ವೀಡಿಯೊ ನನ್ನ ದಿನವನ್ನು ಸುಂದರಗೊಳಿಸಿತು' ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲೇ ಮಗಳ ವಿದ್ಯಾಭ್ಯಾಸ: ದುಬೆ
ಬಾಲಕಿಯ ತಂದೆ ಅಭಿಷೇಕ್ ದುಬೆ ಅವರು ಮಗಳ ಕುರಿತು ಹಿಂದೂಸ್ತಾನ್ ಟೈಮ್ಸ್ ಜೊತೆಗೆ ಮಾತನಾಡಿದ್ದು, ಮಗಳು ಹೆಸರು ಮೃಗಾಂಕ ಅಭಿಷೇಕ್. ಅವಳನ್ನು ಮಾಹಿ ಅಂತಲೂ ಕರೆಯುತ್ತೇವೆ. 10 ವರ್ಷದ ಅವಳು 5 ನೇ ತರಗತಿಯಲ್ಲಿ ಓದುತ್ತಿದ್ದಾರೆ. ಶಾಲೆಯಲ್ಲಿ ಕನ್ನಡ ವಿಷಯದಲ್ಲಿ ಟಾಪರ್. ಅದಕ್ಕಾಗಿ ಯಾವುದೇ ಹೆಚ್ಚುವರಿ ಬೋಧನಾ ತರಗತಿಗಳಿಲ್ಲದೆ ಅವಳು ಯಾವಾಗಲೂ ಉನ್ನತ ಅಂಕಗಳನ್ನು ಪಡೆಯುತ್ತಲೇ ಬಂದಿದ್ದಾಳೆ ಎಂದು ಮಗಳ ಕನ್ನಡ ಪ್ರೇಮ, ಕಲಿಕೆ ಬಗ್ಗೆ ವಿವರಿಸಿದರು.
ಕನ್ನಡವನ್ನು ಮಗಳು ಓದುತ್ತಾಳೆ ಮತ್ತು ಬರೆಯುತ್ತಾರೆ. ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡುತ್ತಾಳೆ. ನಾನು ಕಳೆದ 16 ವರ್ಷಗಳಿಂದ ಬೆಂಗಳೂರಿನಲ್ಲಿದ್ದೇನೆ. ನನ್ನ ಮಗಳು 2015 ರಲ್ಲಿ ಬೆಂಗಳೂರಿನಲ್ಲಿ ಜನಿಸಿದಳು ಮತ್ತು ಇಲ್ಲಿಯವರೆಗೆ ಅವಳ ಎಲ್ಲಾ ಶಿಕ್ಷಣ ಬೆಂಗಳೂರಿನಲ್ಲಿ ನಡೆದಿದೆ ಎಂದು ತಮ್ಮ ಹಿನ್ನೆಯನ್ನು ಬಿಚ್ಚಿಟ್ಟರು.
-
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ












Click it and Unblock the Notifications