ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

10 ದಿನದೊಳಗೆ ಬೆಳ್ಳಂದೂರು ಕೆರೆ ಉಳಿಸುವ ಪ್ಲ್ಯಾನ್ ನೀಡಲು ಸೂಚನೆ

By Sachhidananda Acharya
|
Google Oneindia Kannada News

ನವದೆಹಲಿ, ಆಗಸ್ಟ್ 23: ಬೆಳ್ಳಂದೂರು ಕೆರೆ ಪುನರುಜ್ಜೀವನಕ್ಕೆ ನಿರಾಸಕ್ತಿ ತೋರಿಸುತ್ತಿರುವ ಕರ್ನಾಟಕ ಸರಕಾರದ ಬಗ್ಗೆ ಆಕ್ರೋಶಗೊಂಡಿರುವ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಮುಂದಿನ ಹತ್ತು ದಿನಗಳ ಒಳಗೆ ಕೆರೆ ಪುನರುಜ್ಜೀವನದ ಸಂಪೂರ್ಣ ಯೋಜನೆಯ ವಿವರ ಸಲ್ಲಿಸುವಂತೆ ಖಡಕ್ ಸೂಚನೆ ನೀಡಿದೆ.

ಬೆಳ್ಳಂದೂರು ಕೆರೆಗೆ ಬೆಳ್ಳಂದೂರು ಕೆರೆಗೆ "ಕಾಂಗ್ರೆಸ್ ಕೆರೆ" ಎಂದು ಮರು ನಾಮಕರಣ

ಮಂಗಳವಾರ ವಿಚಾರಣೆ ನಡೆಸುದ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್'ಜಿಟಿ) ಈ ಆದೇಶ ನೀಡಿದೆ. ಕೆರೆ ಉಳಿಸುವ ಸಂಬಂಧ ಸರಕಾರದ ಯೋಜನೆಗಳ ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆ ಸೂಚಿಸಿ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 10ಕ್ಕೆ ಮುಂದೂಡಿದೆ.

10 days deadline to govt to submit complete action plan on reviving Bellandur lake

ಇನ್ನು ವಿಚಾರಣೆ ವೇಳೆ ಹಾಜರಾದ ಕರ್ನಾಟಕ ಸರಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆದಿತ್ಯ ಸೋಧಿ, ಕೆರೆ ಸುತ್ತಮುತ್ತಲಿನ ಕಸವನ್ನು ಸರಕಾರ ತೆರವು ಮಾಡಿದೆ. ಆದರೆ ಕೆರೆಗೆ ಬಂದು ಸೇರುತ್ತಿರುವ 480 ಮಿಲಿಯನ್ ಲೀಟರ್ಸ್ ಪರ್ ಡೇ (ಎಂಎಲ್ ಡಿ) ಕೊಳಚೆ ನೀರಲ್ಲಿ ಕೇವಲ 308 ಎಂಎಲ್ ಡಿ ನೀರನ್ನು ಮಾತ್ರ ಶುದ್ಧೀಕರಿಸಲು ಸಾಧ್ಯವಾಗಿದೆ. ಹೀಗಾಗಿ ಕೆರೆ ಶುದ್ಧೀಕರಣ ಸಾಧ್ಯವಾಗಿಲ್ಲ ಎಂಬ ಮಾಹಿತಿ ನೀಡಿದರು.

English summary
The National Green Tribunal (NGT) has given the Karnataka government 10 days to provide a concrete action plan to save the lake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X