ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಸೇರಿ ಪ್ರಮುಖ ನಗರಗಳಲ್ಲಿ 1 2, 3 BHK ಮನೆ ಬಾಡಿಗೆ ದರಗಳು
House Rent: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮನೆ ಬಾಡಿಗೆ ದರಗಳು ಏರಿಕೆಯಾಗತ್ತಲಿವೆ. ಈ ನಡುವೆಯೂ ಎಚ್‌ಎಸ್‌ಆರ್ ಸೇರಿ ಪ್ರಮುಖ ಪ್ರದೇಶಗಳ ಮನೆ ಬಡಿಗೆ ದರಗಳು ಮಾಹಿತಿ ಭಾರೀ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಾಗಾದ್ರೆ ಎಲ್ಲೆಲ್ಲಿ ಯಾವುದಕ್ಕೆ ಎಷ್ಟಿದೆ ಎನ್ನವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಂಗಳೂರಿಗೆ ಪ್ರತಿನಿತ್ಯ ಸಾವಿರಾರು ಮಂದಿ ಎಂಟ್ರಿಕೊಡುತ್ತಲಿರುತ್ತಾರೆ. ಇವರಲ್ಲಿ ಬಹುತೇಕ ಮಂದಿ ಉದ್ಯೋಗ ಹುಡುಕಿಕೊಂಡು ಬರುವವರೇ ಆಗಿರುತ್ತಾರೆ. ಇಂತಹವರು ಉಳಿದುಕೊಳ್ಳಲು ಮನೆ, ಪಿಜಿಗಳನ್ನು ಹುಡುಕುತ್ತಿರುತ್ತಾರೆ. ಇನ್ನೂ ಕೆಲವರು ನಗರದಲ್ಲೇ ಇದ್ದುಕೊಂಡು ಉತ್ತಮ ಪ್ರದೇಶಗಳಲ್ಲಿ ಬಾಡಿಗೆ ಮನೆಗಳ ಹುಡುಕಾಟದಲ್ಲಿರುತ್ತಾರೆ. ಹಾಗಾದ್ರೆ, ಮತ್ತೇಕೆ ತಡ 1BHK ಯಿಂದ ಹಿಡಿದು 3BHK ವರೆಗೂ ಮನೆ ಬಾಡಿಗೆ ದರ ಹಾಗೂ ಪ್ರದೇಶಗಳ ಸಂಪೂರ್ಣ ವಿವರವನ್ನು ಕೆಳಗೆ ನೀಡಲಾಗಿದೆ ತಿಳಿಯಿರಿ.

ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಒಂದಾದ HSR ಲೇಔಟ್‌ನಲ್ಲಿ 2 BHK ಮನೆ ಬಾಡಿಗೆಗೆ ₹16,000 ರಿಂದ ₹35,000 ವರೆಗೆ ಇದ್ದರೆ, 3 BHK ಮನೆ ಬಾಡಿಗೆಗೆ ₹22,500 ರಿಂದ ₹50,000 ವರೆಗೆ ಇದೆ. ಅದರಲ್ಲೂ ಮನೆ ಬಾಡಿಗೆ ಸ್ಥಳಗಳನ್ನು ಆಧರಿಸಿ ನಿರ್ಧಾರ ಆಗಲಿವೆ.
ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಬಾಡಿಗೆ ದರ
* 2 BHK - ₹16,000-₹35,000
* 3 BHK - ₹22,500 ರಿಂದ ₹50,000
ಇನ್ನು ಬೊಮ್ಮನಹಳ್ಳಿ ಭಾಗದಲ್ಲಿ 3 BHK ಡ್ಯೂಪ್ಲೆಕ್ಸ್ ಮನೆ ಬಾಡಿಗೆ ದರ ₹42,000 ರೂಪಾಯಿ ಇದೆ. ಕೋರಮಂಗಲದಲ್ಲಿ 3 BHK ಡ್ಯೂಪ್ಲೆಕ್ಸ್ ಮನೆ ಬಾಡಿಗೆ ದರ ₹50,000 ರೂಪಾಯಿವರೆಗೂ ಇದೆ. ಮೂಲಗಳ ಪ್ರಕಾರ, ಬೆಂಗಳೂರಿನಲ್ಲಿ ಬಾಡಿಗೆಗೆ ಸ್ವತಂತ್ರ ಮನೆಗಳನ್ನು ₹5,859 ರಿಂದ ₹3.6 ಲಕ್ಷ ವ್ಯಾಪ್ತಿಯಲ್ಲಿ ಕಾಣಬಹುದು. ಈ ಭಾಗಗಳಲ್ಲಿ ಪಿಜಿ ವಸತಿ ಗೃಹಗಳು ಲಭ್ಯ ಇದ್ದು, ಬಾಡಿಗೆ ₹6,000 ರಿಂದ ₹16,000 ವರೆಗೆ ಇದೆ.
ಬೆಂಗಳೂರಿನಲ್ಲಿ ಪ್ರಮುಖ ಪ್ರದೇಶಗಳ ಸಾಲಿನಲ್ಲಿ ಎಚ್‌ಎಸ್‌ಆರ್ ಲೇಔಟ್, ವೈಟ್‌ಫೀಲ್ಡ್, ಜಯನಗರ, ಇಂದಿರಾನಗರ ಮತ್ತು ಕೋರಮಂಗಲ ಇದ್ದು, ಇಲ್ಲಿ ಸಾಮಾನ್ಯವಾಗಿ ಮನೆ ಬಾಡಿಗೆ ದರಗಳು ಹೆಚ್ಚಾಗಿಯೇ ಇರುತ್ತವೆ. ಈ ಭಾಗಗಳಲ್ಲಿ 1 2, 3 BHK ದರಗಳು ಹೇಗಿರಲಿದೆ ಎಂದು ಈ ಕೆಳಗೆ ನೀಡಲಾಗಿದೆ ತಿಳಿಯಿರಿ.
ಸಂಪೂರ್ಣವಾಗಿ ಸುಸಜ್ಜಿತ ಮನೆಗಳಿಗೆ ಬಾಡಿಗೆ ಸಾಮಾನ್ಯವಾಗಿ ಹೆಚ್ಚಾಗಿಯೇ ಇರುತ್ತದೆ. ಪಾರ್ಕಿಂಗ್ ಸೇರಿದಂತೆ ಅಗತ್ಯ ಸೌಲಭ್ಯಗಳ ಹತ್ತಿರ ಇರುವ ಮನೆಗಳ ಬಾಡಿಗೆ ಅಂತೂ ಕೇಳುವುದೇ ಬೇಡ ಗಗನಕ್ಕೇರಿರುತ್ತದೆ. ಇನ್ನು ಹಳೆಯ ಆಸ್ತಿಗಳಿಗೆ ಹೋಲಿಕೆ ಮಾಡಿದರೆ, ಉತ್ತಮವಾಗಿ ನಿರ್ವಹಿಸಲ್ಪಟ್ಟ ಮತ್ತು ಹೊಸ ಮನೆಗಳ ಬಾಡಿಗೆ ದರ ಎಲ್ಲದಕ್ಕಿಂತಲೂ ಹೆಚ್ಚಾಗಿರುತ್ತದೆ.
ಬಾಡಿಗೆ ದರಪಟ್ಟಿ ಇಲ್ಲಿದೆ
1. BHK - ₹7,000-₹18,000
2. BHK - ₹16,000-₹35,000
3. BHK - ₹22,500-₹50,000
4. PG - ₹6,000-₹16,000
ಬಾಡಿಗೆ ಮನೆ ಹುಡುಕಲು ಆನ್‌ಲೈನ್ ಪೋರ್ಟಲ್‌ಗಳು
* NoBroker
* MagicBricks
* OLX
* FindMyRoom
* 99acresನಂತಹ ವೆಬ್‌ಸೈಟ್‌ಗಳು ಮಾಲೀಕರು ಅಥವಾ ಏಜೆಂಟ್‌ಗಳೊಂದಿಗೆ ಸಂಪರ್ಕಿಸಲು ಸಹಾಯ ಮಾಡಬಹುದು.












Click it and Unblock the Notifications