ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಕ್ರಾಂತಿ ನಂತರ ಮತ್ತೆ ಬಳ್ಳಾರಿಯಲ್ಲಿ ಗಾಲಿ ರೆಡ್ಡಿ ಪ್ರತ್ಯಕ್ಷ!

ಸಂಕ್ರಾಂತಿ ನಂತರ ಮತ್ತೊಮ್ಮೆ ಬಳ್ಳಾರಿಯಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಪ್ರತ್ಯಕ್ಷವಾಗಿದ್ದಾರೆ. ಸುಪ್ರೀಂಕೋರ್ಟಿನಿಂದ ಅನುಮತಿ ಪಡೆದು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

By Mahesh
|
Google Oneindia Kannada News

ಬಳ್ಳಾರಿ, ಜೂನ್ 01: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಮತ್ತೊಮ್ಮೆ ಬಳ್ಳಾರಿ ಪ್ರವೇಶಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ.

ಗಣಿ ಉದ್ಯಮಿ ಗಾಲಿ ರೆಡ್ಡಿ ಅವರು ಮಗಳು-ಅಳಿಯನೊಂದಿಗೆ ಜನವರಿ ತಿಂಗಳಿನಲ್ಲಿ ಮಕರ ಸಂಕ್ರಾಂತಿ ಸಂಭ್ರಮ ಆಚರಿಸಲು ತಮ್ಮ ಊರಿಗೆ ಬಂದಿದ್ದರು. ಈಗ ತಮ್ಮ ಮದುವೆ ವಾರ್ಷಿಕೋತ್ಸವ ಆಚರಣೆಗೆ ಬಂದಿದ್ದಾರೆ.[ರೆಡ್ಡಿಗಳ ಮೆಚ್ಚಿನ ದೈವ ಕನಕ ದುರ್ಗಿ]

ಹುಟ್ಟೂರು ಬಳ್ಳಾರಿಗೆ ಬರಲು ಹಾತೊರೆಯುತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ, ಮದುವೆ ವಾರ್ಷಿಕೋತ್ಸವವನ್ನು ಗೆಳೆಯರು ಹಾಗೂ ಬಂಧು-ಬಳಗದವರೊಂದಿಗೆ ಆಚರಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.

ತಮ್ಮ ಮದುವೆಯ 25ನೇ ವಾರ್ಷಿಕೋತ್ಸವವನ್ನು ಬಳ್ಳಾರಿಯಲ್ಲಿ ಆಚರಣೆ ಮಾಡಿಕೊಳ್ಳಲು ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಮೇ 31 ರ ಮಧ್ಯರಾತ್ರಿ ನಂತರ ನಗರಕ್ಕೆ ಆಗಮಿಸಿದ್ದಾರೆ. ಪತ್ನಿ ಲಕ್ಷ್ಮಿ ಅರುಣಾ ಜತೆಗೂಡಿ ವಿವಿಧ ದೇಗುಲಗಳಿಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದೆ.

ನಾಲ್ಕು ದಿನಗಳ ಆವಕಾಶ

ನಾಲ್ಕು ದಿನಗಳ ಆವಕಾಶ

ಗಾಲಿ ರೆಡ್ಡಿಯ ಮನವಿ ಪುರಸ್ಕರಿಸಿರುವ ನ್ಯಾಯಾಲಯ, ಜೂನ್ 1ರಿಂದ ನಾಲ್ಕು ದಿನಗಳ ಕಾಲ ಬಳ್ಳಾರಿಯಲ್ಲಿರಲು ಅವಕಾಶ ನೀಡಿದೆ. ರೆಡ್ಡಿ ಆಗಮನ ವಿಚಾರವನ್ನು ಸಹೋದರ ಹಾಗೂ ಕೆಎಂಎಫ್ ಮಾಜಿ ಅಧ್ಯಕ್ಷ ಜಿ. ಸೋಮಶೇಖರ ರೆಡ್ಡಿ ಖಚಿತ ಪಡಿಸಿದ್ದಾರೆ. ಮೇ 31 ರ ಮಧ್ಯರಾತ್ರಿ ರೆಡ್ಡಿ ನಗರಕ್ಕೆ ಬರುವ ಸಾಧ್ಯತೆ ಇದೆ.

ರೈತರ ಜತೆ ಭೇಟಿ

ರೈತರ ಜತೆ ಭೇಟಿ

ತುಂಗಭದ್ರಾ ಜಲಾಶಯದಲ್ಲಿ ಹೂಳೆತ್ತುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರೈತರನ್ನು ಭೇಟಿ ಮಾಡಿ, ಅವರ ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ. ಈಗಾಗಲೇ ಗಾಲಿರೆಡ್ಡಿ ಆಪ್ತ ಬಿ. ಶ್ರೀರಾಮುಲು ಅವರು ಒಂದು ಸುತ್ತು ಕೆರೆಗಳ ಪನರುಜ್ಜೀವನ ಕಾರ್ಯವನ್ನು ಪರಿಶೀಲಿಸಿದ್ದಾರೆ. ಜಲಾಶಯ ಸಂರಕ್ಷಣೆಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.

ದೇವರ ಆಶೀರ್ವಾದ ಬೇಡಿದ ರೆಡ್ಡಿ

ದೇವರ ಆಶೀರ್ವಾದ ಬೇಡಿದ ರೆಡ್ಡಿ

ಬಳ್ಳಾರಿಯಲ್ಲಿ ವರಲಕ್ಷ್ಮಿ ಪೂಜೆಯ ಸಂಭ್ರಮವನ್ನು ಪರಿಚಯಿಸಿದ ಗಾಲಿ ರೆಡ್ಡಿ ಸೋದರರು, ಗುಂತಕಲ್ ಸಮೀಪದ ಕಸ್ವಾಪುರ ನೆಟ್ಟಿಗಂಟಿ ಆಂಜನೇಯ ಸ್ವಾಮಿ ಅಲ್ಲದೆ ಬಳ್ಳಾರಿಯ ಕನಕ ದುರ್ಗಮ್ಮ ದೇಗುಲಕ್ಕೆ ತುಂಬಾ ನಡೆದುಕೊಳ್ಳುತ್ತಾರೆ.

ಮತ್ತೆ ಬಳ್ಳಾರಿ ತೊರೆಯಬೇಕಾಗಿದೆ

ಮತ್ತೆ ಬಳ್ಳಾರಿ ತೊರೆಯಬೇಕಾಗಿದೆ

ಮಗಳು ಬ್ರಹ್ಮಿಣಿ ಹಾಗೂ ರಾಜೀವ್ ರೆಡ್ಡಿ ಅವರ ವಿವಾಹದ ಅಂಗವಾಗಿ ಬಳ್ಳಾರಿಯಲ್ಲಿ 21 ದಿನ ಇರಲು ಅನುಮತಿ ಪಡೆದಿದ್ದರು. ನಂತರ ಸಂಕ್ರಾಂತಿ ಸಂಭ್ರಮಾಚರಣೆಗೆ ಜನವರಿಯಲ್ಲಿ ಐದು ದಿನ ಅವಕಾಶ ಸಿಕ್ಕಿತ್ತು ಈಗ ಬಳ್ಳಾರಿಯ
ವೀರನಗೌಡ ಕಾಲೋನಿಯ ಅವರ ನಿವಾಸಕ್ಕೆ ಬಂದು 25ನೇ ವಿವಾಹ ವಾರ್ಷಿಕೋತ್ಸವದಲ್ಲಿ ತೊಡಗಿರುವ ಗಾಲಿ ರೆಡ್ಡಿ ಅವರು ನಾಲ್ಕು ದಿನಗಳ ಬಳಿಕ ಮತ್ತೆ ಬಳ್ಳಾರಿ ತೊರೆಯಬೇಕಾಗಿದೆ.

English summary
The Supreme Court on Thursday(June 01) allowed former minister Gali Janardhana Reddy to visit Ballari and celebrate wedding anniversary silver jubilee with his wife Aruna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X