ಸಿ. ಆರ್. ನಸೀರ್ ಅಹಮದ್ ಸಂಕ್ಷಿಪ್ತ ಪರಿಚಯ

ಕೃಷ್ಣದೇವರಾಯ ವಿವಿಯಿಂದ ಗೌರವ ಡಾಕ್ಟರೇಟ್ ಪದವಿಗೆ ಪ್ರಾತ್ರರಾಗುತ್ತಿರುವ ಸಿ.ಆರ್.ನಸೀರ್ ಅಹಮದ್‌ ಅವರು, ಜನವರಿ 5, 1972ರಲ್ಲಿ ದಾವಣೆಗೆರೆಯ ಪ್ರತಿಷ್ಠಿತ ಉರ್ದು ಶಿಕ್ಷಕರ ಕುಟುಂಬದಲ್ಲಿ ಜನಿಸಿದರು.

ಪ್ರಸ್ತುತ ರಹಮಾನಿಯ ಅರಬಿಕ್ ಮದರಸಾ ಮತ್ತು ಅನಾಥಾಶ್ರಮ, ದಾವಣಗೆರೆ ಹಾಗೂ ಮೌಲಾನಾ ಅಜಾದ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ, ಅಂಜುಮನ್-ಎ-ತರಕ್ಕಿಯ ಉಪಾಧ್ಯಕ್ಷರಾಗಿ, ತಂಜೀಮುಲ್ ಮುಸ್ಲಿಂ ನಿಧಿ ಸಂಘದ ಆಡಳಿತ ಮಂಡಳಿಯ ಸದಸ್ಯರಾಗಿ, ಹಾಗೂ ಇನ್ನೂ ಅನೇಕ ಸಂಘಗಳ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

C.R Nazeer Ahmed

ಸಿ.ಆರ್.ನಸೀರ್ ಅಹಮದ್‌ ಅವರು, ಲೋಕೋಪಕಾರಿ ಮತ್ತು ಸಾಮಾಜಿಕ ಕೆಲಸ ಕಾರ್ಯಗಳಿಗೆ ಹೆಸರುವಾಸಿಯಾಗಿರುತ್ತಾರೆ. ಬಡತನ ರೇಖೆಗಿಂತ ಕೆಳಗಿರುವ ಜನರಿಗೆ, ಅಂಗ ವಿಕಲರಿಗೆ, ವಿಧವೆಯರಿಗೆ, ಬಡ ವಿದ್ಯಾರ್ಥಿಗಳಿಗೆ ಹಾಗೂ ಸಮಾಜದಲ್ಲಿ ತುಳಿತಕ್ಕೊಳಗಾದವರಿಗೆ ನೆರವು ನೀಡಿ ಆಧಾರವಾಗಿರುತ್ತಾರೆ.

ಸಿ.ಆರ್.ನಸೀರ್ ಅಹಮದ್‌ ಅವರ ಆಸಕ್ತಿಯನ್ನು ಗುರುತಿಸಿ ಕರ್ನಾಟಕ ಸರ್ಕಾರವು ಇವರನ್ನು ಕರ್ನಾಟಕ ರಾಜ್ಯ ಯೋಜನಾ ಮಂಡಳಿ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮಂಡಳಿ, ಕರ್ನಾಟಕ ಅಭಿವೃದ್ಧಿ ಅವಲೋಕನ ಸಮಿತಿ, ವಕ್ಫ್ ಸಲಹಾ ಸಮಿತಿ ಹಾಗೂ ಇನ್ನೂ ಹಲವು ಮಂಡಳಿಗಳಿಗೆ ನಾಮ ನಿರ್ದೇಶನ ಮಾಡಿರುತ್ತದೆ.

ಭಾರತ ಸರ್ಕಾರವು ಇವರನ್ನು ಸಿಂಡಿಕೇಟ್ ಬ್ಯಾಂಕಿನ ಅಧಿಕಾರೇತರ ನಿರ್ದೇಶಕರನ್ನಾಗಿ, ಕರಕುಶಲ ಮಂಡಳಿಯ ಸದಸ್ಯರನ್ನಾಗಿ, ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿ, ಬೆಂಗಳೂರು ಇದರ ಸದಸ್ಯರನ್ನಾಗಿ, ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡಿರುತ್ತದೆ. ಇವರ ಎಲ್ಲಾ ಸೇವೆಗಳನ್ನು ಪರಿಗಣಿಸಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+