ಅರವಳಿಕೆ ನೀಡುವಾಗ ವೈದ್ಯನ ಯಡವಟ್ಟು; ಬೈಲಹೊಂಗಲದ ಗೃಹಿಣಿ ಸಾವು
ಬೆಳಗಾವಿ, ಸೆಪ್ಟೆಂಬರ್ 24: ವೈದ್ಯರ ಎಡವಟ್ಟಿನಿಂದಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ.
ರಾಜಶ್ರೀ ಹದ್ದನ್ನವರ (26) ಮೃತ ಗೃಹಿಣಿ. ಬೈಲಹೊಂಗಲ ತಾಲೂಕಿನ ತುರಮುರಿ ಗ್ರಾಮದವರಾದ ರಾಜಶ್ರೀ ಮೂಗಿನಲ್ಲಿ ಮಾಂಸ ಬೆಳೆದಿದ್ದರಿಂದ ಶಸ್ತ್ರ ಚಿಕಿತ್ಸೆಗಾಗಿ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರ ಚಿಕಿತ್ಸೆ ಮಾಡುವಾಗ ಅರವಳಿಕೆ ಮದ್ದು ನೀಡುವಲ್ಲಿ ವೈದ್ಯರು ಯಡವಟ್ಟು ಮಾಡಿದ್ದಾರೆ. ಹೀಗಾಗಿ ಚಿಕಿತ್ಸೆ ಮಧ್ಯದಲ್ಲಿಯೇ ರಾಜಶ್ರೀ ಸಾವನ್ನಪ್ಪಿದ್ದಾರೆ.

ಗೃಹಿಣಿ ಸಾವನ್ನಪ್ಪಿರುವುದು ತಿಳಿಯುತ್ತಿದ್ದಂತೆ ಬೈಲಹೊಂಗಲ ಸರ್ಕಾರಿ ಆಸ್ಪತ್ರೆ ವೈದ್ಯರು ಕಾಲ್ಕಿತ್ತಿದ್ದಾರೆ. ಆಸ್ಪತ್ರೆ ಮುಂದೆ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಬೈಲಹೊಂಗಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications