50 ರುಪಾಯಿಗಾಗಿ ಮಗು ಅಪಹರಿಸಿದ್ದ ಮಹಿಳೆ ಈಗ ಪೊಲೀಸರ ಅತಿಥಿ

ಬೆಳಗಾವಿ, ಫೆಬ್ರವರಿ 16 : ಇಲ್ಲಿನ ಅಶೋಕ ನಗರದಲ್ಲಿ ಎರಡು ವರ್ಷದ ಮಗುವನ್ನು 50 ರುಪಾಯಿಗಾಗಿ ಅಪಹರಿಸಿದ ಪ್ರಕರಣ ವರದಿಯಾಗಿದೆ. ಅಶೋಕ ನಗರದ ಜೋಪಡಪಟ್ಟಿಯ ಬಳಿ ನಿಲ್ಲಿಸಿದ ಟಾಟಾ ಏಸ್ ಗೂಡ್ಸ್ ಗಾಡಿಯಲ್ಲಿ ಆಡುತ್ತಿದ್ದ ಮಗುವನ್ನು ಈಚೆಗೆ ಅಪಹರಿಸಲಾಗಿತ್ತು. ಆ ಮಗುವನ್ನು 24 ಗಂಟೆಗಳ ಒಳಗಾಗಿ ಪತ್ತೆ ಹಚ್ಚಲಾಗಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿ ಮಾಡಿ, ಮಾತನಾಡಿದ ಸೀಮಾ ಲಾಟ್ಕರ್, ಶಿವಬಸವ ನಗರದ ಮಾಲಾ ವಿಠ್ಠಲ್ ಬಸರಗಿ ಎಂಬಾಕೆ ಬಂಧಿತೆ. ಸುವರ್ಣಾ ಸುರೇಶ್ ಲಮಾಣಿ ಎಂಬುವರ 2 ವರ್ಷದ ಮಗು ಜೋಪಡಿಪಟ್ಟಿ ಸಮೀಪ ಮನೆ ಬಳಿ ಆಟವಾಡುತ್ತಿದ್ದಾಗ ಅಪಹರಿಸಲಾಗಿತ್ತು.

ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ PSI ಚನ್ನಕೇಶವ ತಿಂಗಳೆಕರ ತಂಡವು ಆರೋಪಿ ಮಾಲಾಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಿದರು.

Woman arrested who kidnapped 2 year child for 50 rupees

ಮಗುವನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಲಾಗಿದೆ. 50 ರುಪಾಯಿ ಹಣದ ಸಲುವಾಗಿ ಮಗುವನ್ನು ಅಪಹರಣ ಮಾಡಲಾಗಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಬಾಯಿ ಬಿಟ್ಟಿದ್ದು, ಈ ಮೊದಲು ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ. ಅಲ್ಲದೆ ಅಪಹರಣಕ್ಕೆ ಒಳಗಾದ ಬಾಲಕಿಯ ಪೋಷಕರಿಗೂ ಇವರು ಸಂಬಂಧಿಗಳಾಗಿಲ್ಲ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+