ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೇಕೇ ಬೇಕು ಬಾರ್ ಬೇಕು, ಮದ್ಯದಂಗಡಿಗಾಗಿ ಪ್ರತಿಭಟನೆ

By Manjunatha
|
Google Oneindia Kannada News

ಬೆಳಗಾವಿ, ಫೆಬ್ರವರಿ 06: ಮದ್ಯದಂಗಡಿ ತೆರವುಗೊಳಿಸಲು ಪ್ರತಿಭಟನೆ ಮಾಡಿದ್ದನ್ನು ಕೇಳಿದ್ದೇವೆ, ಆದರೆ ಬೆಳಗಾವಿ ಜಿಲ್ಲೆಯ ಈ ಹಳ್ಳಿಯಲ್ಲಿ ಬಾರ್ ತೆರೆಯಬೇಕೆಂದು ಒತ್ತಾಯ ಮಾಡಿದ್ದಾರೆ ಇದಕ್ಕೆ ಮಹಿಳೆಯರೂ ಸಾಥ್ ನೀಡಿದ್ದಾರೆ..!

ಹೌದು ಬೆಳಗಾವಿ ಜಿಲ್ಲೆಯ ಕಾಗವಾಡ ಗ್ರಾಮದ ಗ್ರಾಮಸ್ಥರಿಂದ ಹೀಗೊಂದು ಪ್ರತಿಭಟನೆ ನಡೆದಿದೆ. ಗ್ರಾಮದಲ್ಲಿ MSIL ಮದ್ಯದಂಗಡಿ ಸ್ಥಾಪಿಸಬೇಕೆಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಮಹಿಳೆಯರೂ ಭಾಗವಹಿಸಿದ್ದಾರೆ.

ಕಾಗವಾಡದಲ್ಲಿ ಬಾರ್ ಹೊಂದಿರುವ ಬಿಜೆಪಿಯ ಜಿಲ್ಲಾ ಪಂಚಾಯತ್ ಸದಸ್ಯ ಅಜೀತ್ ಬರಮೊ ಅವರು ಯಾವುದೊ ಯೋಜನೆಗೆ ಎಂದು ಹೇಳಿ ಜನರಿಂದ ಮೋಸದಿಂದ MSIL ಬೇಡ ಎಂದು ಬರೆದಿದ್ದ ಮನವಿ ಪತ್ರಕ್ಕೆ ಸಹಿ ಹಾಕಿಸಿಕೊಂಡು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

Villagers demand for MSIL liquor shop in village

ಕಡಿಮೆ ದರದಲ್ಲಿ ಮದ್ಯ ಮಾರಲಾಗುವ MSIL ಗ್ರಾಮಕ್ಕೆ ಬಂದರೆ ಮೂರು ಬಾರ್ ಹೊಂದಿರುವ ಅಜಿತ್‌ಗೆ ವ್ಯಾಪಾರ ಕಡಿಮೆ ಆಗುತ್ತದೆಂಬ ಕಾರಣಕ್ಕೆ ಹೀಗೆ ಮಾಡಿದ್ದಾನೆ. ಹಾಗಾಗಿ ಶೀಘ್ರದಲ್ಲಿಯೇ ಗ್ರಾಮದಲ್ಲಿ MSIL ಬಾರ್ ತೆರೆಯಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

English summary
In Belagavi district Kagawada villagers demand for MSIL liquor shop in village. Women also supporting the demand. Villagers alleged that some private bar owner deliberately stopping MSIL liquor shop opening in village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X