ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ಕಾರಿ ಹುದ್ದೆ ಪಡೆದ ತೃತೀಯ ಲಿಂಗಿ

ಬೆಳಗಾವಿ, ಡಿಸೆಂಬರ್ 06: ಡಿ ಗ್ರೂಪ್ ಖಾಯಂ ನೌಕರರಾಗಿ ತೃತೀಯ ಲಿಂಗದ ಮೋನಿಷಾ ಎಂಬುವವರಿಗೆ ವಿಧಾನ ಪರಿಷತ್ ಸಚಿವಾಲಯದಲ್ಲಿ ನೇಮಕ ಮಾಡಲಾಗಿದ್ದು, ಮೋನಿಷಾ ಕರ್ನಾಟಕದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಖಾಯಂ ಸರಕಾರಿ ಹುದ್ದೆ ಪಡೆದ ತೃತಿಯ ಲಿಂಗಿಯಾಗಿದ್ದಾರೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಬುಧವಾರ (ಡಿ.05) ನಡೆದ ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಈ ಹೇಳಿಕೆ ನೀಡಿದರು.

2016 ರಂದು ವಿಧಾನ ಸೌಧದಲ್ಲಿ ಖಾಲಿ ಇದ್ದ ಗ್ರೂಪ್ 'ಡಿ' ಹುದ್ದೆಗೆ ತೃತೀಯ ಲಿಂಗದ ಮೋನಿಷಾ ಅರ್ಜಿ ಹಾಕಿದ್ದರು. ಸರಕಾರದಿಂದ ತೃತೀಯ ಲಿಂಗದವರಿಗೆ ಯಾವುದೇ ಹುದ್ದೆಯಿಲ್ಲದ ಕಾರಣ ಮೋನಿಷಾ ಅರ್ಜಿಯನ್ನು ನಿರಾಕರಿಸಲಾಗಿತ್ತು.

ಆ ನಂತರ ಮೋನಿಷಾ ನ್ಯಾಯಾಲಯಕ್ಕೆ ಹೋಗಿದ್ದರಿಂದ, ನ್ಯಾಯಾಲಯದ ಸೂಚನೆ ಮೇರೆಗೆ ಸಭಾಪತಿ, ಮುಖ್ಯಮಂತ್ರಿಗಳು ವಿಶೇಷ ಆಸಕ್ತಿ ವಹಿಸಿ ಖಾಯಂ ನೇಮಕ ಮಾಡಿಕೊಂಡಿದ್ದಾರೆ.

Transgender Monisha appointed to permanent government post

ತೃತೀಯ ಲಿಂಗದವರು ಇತ್ತೀಚಿನ ದಿನಗಳಲ್ಲಿ ರಾಜಕೀಯ, ಸಾಹಿತ್ಯ, ಸಿನಿಮಾ, ಮಾಡೆಲಿಂಗ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕಾಣಿಸಿಕೊಂಡು ಸಾಧನೆ ಮಾಡುತ್ತಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+