ಮಗಳ ಸಣ್ಣ ಸಂಶಯ ತಂದೆ ಕೊಲೆ ರಹಸ್ಯ ಬಯಲಾಯ್ತಾ, ಶವ ತೆಗೆದು ಮುಂದೇನು ?
ಕರ್ನಾಟಕದ ಬೆಳಗಾವಿಯಲ್ಲಿ ಭಯಾನಕ ಕೊಲೆಯೊಂದು ಆಗಿರುವ ಶಂಕೆ ವ್ಯಕ್ತವಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕೋಟ್ಯಾಧಿಪತಿ ಸಂತೋಷ ಪದ್ಮನ್ನವರ ಸಾವು ಸಹಜವಲ್ಲ ಅದೊಂದು ಕೊಲೆ ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಪೊಲೀಸರು ತನಿಖೆಗೆ ಇಳಿದಿದ್ದಾರೆ. ಬೆಳಗಾವಿಯ ಆಂಜನೇಯ ನಗರದಲ್ಲಿರುವ ಸಂತೋಷ ಪದ್ಮನ್ನವರ ನಿವಾಸಕ್ಕೆ ಭೇಟಿ ನೀಡಿರುವ ಪೊಲೀಸರು ಸಾವಿನ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಏನಿದು ಪ್ರಕರಣ ಎನ್ನುವ ವಿವರ ಇಲ್ಲಿದೆ.
ಬೆಳಗಾವಿಯ ನಿವಾಸಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ ಪದ್ಮನ್ನವರ ಅವರು ಅಕ್ಟೋಬರ್ 9ರಂದು ಮೃತಪಟ್ಟಿದ್ದರು. ಆದರೆ, ಅವರ ಸಾವು ಸಹವಲ್ಲ. ಅವರನ್ನು ಕೊಲೆ ಮಾಡಲಾಗಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಈ ಸಂಬಂಧ ಅವರ ಮಗಳೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಳಗಾವಿಯಲ್ಲಿ ಈಚೆಗೆ ಸಂತೋಷ ಎನ್ನುವವರು ಮೃತಪಟ್ಟಿದ್ದರು. ಮೊದಲು ಎಲ್ಲರೂ ಸಹಜ ಸಾವು ಎಂದೇ ಭಾವಿಸಿದ್ದರು. ಅವರ ಅಂತ್ಯಕ್ರಿಯೆಯನ್ನೂ ಕುಟುಂಬದವರು ಮಾಡಿದ್ದರು. ಆದರೆ, ಅವರ ಮಗಳು ಮೊದಲಿನಿಂದಲೂ ಅವರ ತಂದೆ ಸಂತೋಷ ಅವರ ಸಾವಿನ ಬಗ್ಗೆ ಅನುಮಾನ ಹೊಂದಿದ್ದರು. ಇದೀಗ ಅವರ ಅನುಮಾನಕ್ಕೆ ಇನ್ನಷ್ಟು ವಿಷಯಗಳು ಸಿಕ್ಕಿದ್ದು, ತಡ ಮಾಡದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಂತೋಷ ಅವರ ಸಾವು ಸಹಜವಾಗಿ ಇರಲಿಲ್ಲ ಎನ್ನುವುದಕ್ಕೆ ಹಲವು ಕಾರಣಗಳಿವೆ ಎಂದು ಅವರ ಮಗಳು ಸಂಜನಾ ಆರೋಪಿಸಿದ್ದಾರೆ. ಸಂತೋಷ ಪದ್ಮನ್ನವರ ಅವರದ್ದು, ಸಹಜ ಸಾವಲ್ಲ ಕೊಲೆಯಾಗಿದೆ ಎನ್ನಲಾಗಿದೆ. ಸಂತೋಷ ತನ್ನ ಪತ್ನಿ ಉಮಾ ಎನ್ನುವವರಿಗೆ ನಿರಂತರ ಕಿರುಕುಳ ಕೊಡ್ತಿದ್ದ ಸಂಶಯಪಡುತ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಕುಡಿಯುವ ನೀರಿನಲ್ಲಿ ನಿದ್ರೆ ಮಾತ್ರೆ ಬೆರೆಸಿ ಸಂತೋಷಗೆ ಕುಡಿಸಲಾಗಿದೆ. ಇದಾದ ನಂತರ ಫೇಸ್‌ಬುಲ್ ಗೆಳೆಯ ಹಾಗೂ ಮನೆ ಕೆಲಸದವರು ಸೇರಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಸಂತೋಷ ಸಾವನ್ನಪ್ಪುತ್ತಿದ್ದಂತೆಯೇ ಅವರ ಪತ್ನಿ ಉಮಾ ಅವರು ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ. ಇವರ ಮಾತನ್ನು ನಂಬಿದ ಕುಟುಂಬದವರು ಹಾಗೂ ಸಂಬಂಧಿಕರು ಅಂತ್ಯಕ್ರಿಯೆ ನಡೆಸಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ: ತಂದೆಯ ಸಾವಿನ ಸುದ್ದಿ ತಿಳಿದು ಅವರ ಮಗಳು ಸಂಜನಾ ಅವರು, ಬೆಂಗಳೂರಿನಿಂದ ಬೆಳಗಾವಿಗೆ ಬಂದಿದ್ದಾರೆ. ಅಂತ್ಯಕ್ರಿಯೆ ಬಳಿಕ ಸಿಸಿಟಿವಿ ಕ್ಯಾಮೆರಾ ದೃಶ್ಯ ತೋರಿಸುವಂತೆ ಅವರ ತಾಯಿ ಉಮಾ ಎನ್ನುವವರ ಬಳಿ ಕೇಳಿದ್ದಾರೆ. ಆಗ ಅವರ ತಾಯಿ ಈಗಷ್ಟೆ ಅಂತ್ಯಕ್ರಿಯೆ ಮುಗಿದಿದೆ. ಸ್ನಾನ ಮಾಡಿಕೊಂಡು ಬಾ ಎಂದು ಮಗಳಿಗೆ ಹೇಳಿದ್ದಾರೆ. ಸಂಜನಾ ಸ್ನಾನಕ್ಕೆ ಹೋದಾಗ ಪುತ್ರನಿಗೆ ಹೇಳಿ ಕೊಲೆಗೆ ಸಂಬಂಧಿಸಿದ ಒಂದು ಗಂಟೆ ಅವಧಿಯ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಡಿಲೀಟ್ ಮಾಡಿಸಿದ್ದಾರೆ ಎನ್ನಲಾಗಿದೆ.
ಕೊಲೆ ನಡೆದ ಒಂದು ಗಂಟೆ ಅವಧಿಯ ದೃಶ್ಯಗಳನ್ನು ನೋಡಿ ಸಂಜನಾ ಅವರು ಒಂದು ಗಂಟೆಯ ಪುಟೇಜ್ ಎಲ್ಲಿ ಎಂದು ಸಹೋದರರನ್ನು ಪ್ರಶ್ನಿಸಿದ್ದಾಳೆ. ತಾಯಿ ಹೇಳಿದಕ್ಕೆ ಪುಟೇಜ್ ಡಿಲೇಟ್ ಮಾಡಿದ್ದೇವೆ ಎಂದಿದ್ದಾನೆ ಎಂದು ಹೇಳಿದ್ದಾನೆ ಎನ್ನಲಾಗಿದೆ. ಆಗ ಸಂಜನಾ ತಂದೆಯ ಸಾವು ಸಹಜವಲ್ಲ, ಕೊಲೆ ಇರಬಹುದೆಂದು ಮಾಳಮಾರುತಿ ಠಾಣೆಯಲ್ಲಿ ತಾಯಿ ಉಮಾ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ.
ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಸಂತೋಷ ಅವರ ಮುಂದಿನ ಮನೆಯ ಸಿಸಿಟಿವಿ ಕ್ಯಾಮೆರಾ ಪುಟೇಜ್ ಚೆಕ್ ಮಾಡಿದ್ದಾರೆ. ಆಗ ರಾತ್ರಿ ಸಮಯದಲ್ಲಿ ಸಂತೋಷ ಮನೆಯಿಂದ ಇಬ್ಬರು ಹೋಗುವ ದೃಶ್ಯ ಸೆರೆಯಾಗಿದೆ. ಹೀಗಾಗಿ, ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ಮೃತದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆ: ಸಂತೋಷ ಅವರ ಕೊಲೆ ಅಕ್ಟೋಬರ್ 9ರಂದೇ ನಡೆದಿದೆ ಎನ್ನಲಾಗಿದೆ. ಬುಧವಾರ ಸ್ಮಶಾನದಲ್ಲಿ ಹೂಳಲಾಗಿದ್ದ ಸಂತೋಷ ಮೃತದೇಹ ಹೊರತೆಗೆಯಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಎಂದು ಸಾಬೀತಾದರೆ ಆರೋಪಿಗಳನ್ನು ವಶಕ್ಕೆ ಪಡೆಯಲಿದ್ದಾರೆ. ಜೊತೆಗೆ ಉಮಾ ಅವರ ಫೇಸ್‌ಬುಕ್ ಗೆಳೆಯ ಮಂಗಳೂರು ಮೂಲದವ ಎಂದು ಹೇಳಲಾಗಿದ್ದು, ಅವನ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ.












Click it and Unblock the Notifications