ಸಂಡೇ ಲಾಕ್ ಡೌನ್: ಗಡಿನಾಡು ಬೆಳಗಾವಿ ಸಂಪೂರ್ಣ ಬಂದ್

ಬೆಳಗಾವಿ, ಜುಲೈ 12: ಕೊರೊನಾ ವೈರಸ್ ಹರುಡುವಿಕೆ ತಡೆಯಲು ರಾಜ್ಯ ಸರ್ಕಾರ ರಾಜ್ಯಾದ್ಯಂತ ಭಾನುವಾರದ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಕುಂದಾನಗರಿ ಇಂದು ಸಂಪೂರ್ಣವಾಗಿ ಸ್ತಬ್ಧಗೊಂಡಿದೆ.

ಬೆಳಗಾವಿ ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲಿ ಪೊಲೀಸರ ಖಡಕ್ ಪಹರೆ ಇದ್ದು, ನಗರದಲ್ಲಿ ಒಳಬರುವುದನ್ನು ಮತ್ತು ಹೊರಹೋಗುವುದನ್ನು ನಿಷೇಧಿಸಲಾಗಿದೆ.

ನಗರ ಪ್ರವೇಶ ಮಾಡುವ ನಾಲ್ಕೂ ದಿಕ್ಕುಗಳಲ್ಲಿ ಎಲ್ಲ ಪ್ರವೇಶ ಮಾರ್ಗಗಳಲ್ಲಿ ಪೊಲೀಸರ ಬಿಗಿ ಬಂದೋಬಸ್ತ್ ಇದೆ. ಪೊಲೀಸರು ಇಂದು ಮುಂಜಾನೆಯಿಂದಲೇ ಯಾರೊಬ್ಬರೂ ನಗರ ಪ್ರವೇಶ ಮಾಡದಂತೆ ತಡೆಯುತ್ತಿದ್ದು, ಬೈಕ್ ಸವಾರರನ್ನು ಮರಳಿ ಕಳಿಸುವ ದೃಶ್ಯಗಳು ಸಾಮಾನ್ಯವಾಗಿವೆ.

Sunday Lockdown: Good Response In Belagavi

ಬೆಳಗಾವಿ ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದರೆ, ನಗರ ವ್ಯಾಪಾರಿಗಳು ಕೊರೊನಾ ವೈರಸ್ ಕಾಟ ಸಾಕಪ್ಪೋ ಸಾಕು ಎನ್ನುವಂತಾಗಿದೆ. ಬೆಳಗಾವಿಯ ಎಲ್ಲ ಮಾರುಕಟ್ಟೆಗಳು ಬಂದ್ ಆಗಿದ್ದು, ಆಟೋಗಳು ಚಾಲಕರ ಮನೆಗಳ ಎದುರು ಪಾರ್ಕ್ ಆಗಿವೆ. ಬಸ್ ಗಳು ಕೇಂದ್ರ ಬಸ್ ನಿಲ್ದಾಣದಲ್ಲಿ ಸಾಲಾಗಿ ನಿಂತಿವೆ. ಒಟ್ಟಾರೆ ಬೆಳಗಾವಿ ನಗರದಲ್ಲಿ ಸರ್ಕಾರ ಘೋಷಣೆ ಮಾಡಿದ ಲಾಕ್ ಡೌನ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+