SSLC Result 2024: ಶಿಕ್ಷಣ ಇಲಾಖೆಯಿಂದ 11 ಶಾಲೆಗಳಿಗೆ ನೋಟಿಸ್-ಕಾರಣ ಏನು?
ಬೆಳಗಾವಿ, ಮೇ, 13: ಇತ್ತೀಚೆಗಷ್ಟೇ ಅಂದರೆ ಮೇ 09ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದ್ದು, ಈ ವೇಳೆ ಇಡೀ ರಾಜ್ಯಕ್ಕೆ ಬಾಗಲಕೋಟೆ ಜಿಲ್ಲೆಯ ವಿದ್ಯಾರ್ಥಿನಿ 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನದಲ್ಲಿದ್ದರೆ, ಇನ್ನು 7 ವಿದ್ಯಾರ್ಥಿಗಳು 624 ಅಂಕಗಳನ್ನು ಪಡೆಯುವ ಮೂಲಕ ದ್ವತೀಯ ಸ್ಥಾನದಲ್ಲಿದ್ದರು. ಆದರೆ ಈ ಜಿಲ್ಲೆ ಮಾತ್ರ ರ‍್ಯಾಂಕಿಂಗ್‌ನಲ್ಲಿ ತೀವ್ರ ಕುಸಿತ ಕಂಡಿದೆ. ಹಾಗಾದರೆ ಶಿಕ್ಷಣ ಇಲಾಖೆ ಕೈಗೊಂಡ ಕ್ರಮಗಳೇನು. ಇಲ್ಲಿದ ನೋಡಿ ಮಾಹಿತಿ.
ಇತ್ತೀಚೆಗಷ್ಟೇ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಚಿಕ್ಕೋಡಿ ಮತ್ತು ಬೆಳಗಾವಿ ಶೈಕ್ಷಣಿಕ ಜಿಲ್ಲೆಗಳು ರಾಜ್ಯ ರ‍್ಯಾಂಕಿಂಗ್‌ನಲ್ಲಿ ತೀವ್ರ ಕುಸಿತ ಕಂಡಿದ್ದು, ಈ ಬಗ್ಗೆ ಬೆಳಗಾವಿಯ ಅಧಿಕಾರಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಆತಂಕಕಾರಿ ಸಂಗತಿಯೆಂದರೆ, ರಾಜ್ಯದಲ್ಲಿಯೇ ಬೆಳಗಾವಿ ಜಿಲ್ಲೆಯಲ್ಲಿ 0% ಫಲಿತಾಂಶ ದಾಖಲಿಸಿದ ಪ್ರೌಢಶಾಲೆಗಳು ಅತಿ ಹೆಚ್ಚು.

0% ಫಲಿತಾಂಶ ದಾಖಲಿಸಿರುವ ರಾಜ್ಯದ 78 ಶಾಲೆಗಳ ಪೈಕಿ, ಆರು ಬೆಳಗಾವಿ ಮತ್ತು ಐದು ಚಿಕ್ಕೋಡಿಯಲ್ಲಿದ್ದು, ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 11 ಶಾಲೆಗಳು ಫಲಿತಾಂಶದಲ್ಲಿ ತೀವ್ರ ಕುಸಿತ ಕಂಡಿವೆ. ಇದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಸ್ಪಷ್ಟನೆ ಕೋರಿ 11 ಶಾಲೆಗಳಿಗೆ ನೋಟಿಸ್ ಜಾರಿ ಮಾಡಲು ನಿರ್ಧರಿಸಿದೆ.
ಸೋಮವಾರ ಎಲ್ಲಾ 11 ಶಾಲೆಗಳಿಗೆ ನೋಟಿಸ್ ಜಾರಿ ಮಾಡಲಿದ್ದೇವೆ ಎಂದು ಎರಡೂ ಶೈಕ್ಷಣಿಕ ಜಿಲ್ಲೆಗಳ ಉಸ್ತುವಾರಿ ಡಿಡಿಪಿಐ ಮೋಹನ್ ಕುಮಾರ್ ಹಂಚಾಟೆ ತಿಳಿಸಿದ್ದಾರೆ. "0% ಫಲಿತಾಂಶ ದಾಖಲಿಸಿದ ಹೆಚ್ಚಿನ ಶಾಲೆಗಳು ಶಿಕ್ಷಕರ ಕೊರತೆಯನ್ನು ಹೊಂದಿವೆ ಎನ್ನಲಾಗುತ್ತಿದೆ. ಹಲವು ಶಾಲೆಗಳಲ್ಲಿ ಐದಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದು, ಒಬ್ಬರೇ ಶಿಕ್ಷಕರಿದ್ದಾರೆ. ಇನ್ನು ನಿರ್ಲಕ್ಷ್ಯ ತೋರುವ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದ್ದೇವೆ," ಎಂದು ತಿಳಿಸಿದ್ದಾರೆ.
ಇನ್ನು ಕೆಲವು ಶಾಲೆಗಳ ಫಲಿತಾಂಶವನ್ನು ಸುಧಾರಿಸಲು ಮತ್ತು 0% ಫಲಿತಾಂಶಗಳನ್ನು ದಾಖಲಿಸಿರುವ ಶಾಲೆಗಳನ್ನು ತೆಗೆದುಹಾಕಲು, ಡಿಡಿಪಿಐ ಮತ್ತು ಅವರ ತಂಡವು ಈ ವರ್ಷ ವಿಭಿನ್ನ ಯೋಜನೆಯಗಳನ್ನು ಹಾಕಿಕೊಂಡಿದೆ. ಕೆಲವು ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಷಯ ತಜ್ಞರ ಮೂಲಕ ನೆರವು ನೀಡಲು ನಿರ್ಧರಿಸಿದ್ದಾರೆ. ಈ ವಿದ್ಯಾರ್ಥಿಗಳು ತಮ್ಮ ಫೇಲ್ ಆಗಿರುವ ವಿಷಯಗಳಲ್ಲಿ ತೇರ್ಗಡೆಯಾಗಲು ಮೂರು ಅವಕಾಶಗಳನ್ನು ಹೊಂದಿರುತ್ತಾರೆ. ಮತ್ತು ಒಂದೇ ಪ್ರಯತ್ನದಲ್ಲಿ ಎಲ್ಲಾ ವಿಷಯಗಳನ್ನು ಪಾಸ್ ಮಾಡಿಕೊಂಡ ವಿದ್ಯಾರ್ಥಿಗಳು ಮಾರ್ಕ್ಸ್ ಕಾರ್ಡ್‌ಗಳನ್ನು ಸ್ವೀಕರಿಸಲಿದ್ದಾರೆ.












Click it and Unblock the Notifications