ಆಪರೇಷನ್ ಮಾಡಿ, ಸಾಯಿಸಬೇಡಿ; ಇಂದಿರಾ ಕ್ಯಾಂಟೀನ್ ಬಗ್ಗೆ ಸಿದ್ದು ಹೇಳಿದ್ದು ಹೀಗೆ
Recommended Video
ಬೆಳಗಾವಿ, ಆಗಸ್ಟ್ 28: "ಪ್ರವಾಹದಲ್ಲಿ ಮನೆ ಕಳೆದುಕೊಂಡ ಎಲ್ಲರಿಗೂ ಸರ್ಕಾರ ಮನೆ ಕಟ್ಟಿಕೊಡಬೇಕು. ಬಾಡಿಗೆ ಮನೆಯಲ್ಲಿದ್ದವರಿಗೂ ಹತ್ತು ಸಾವಿರ ರೂಪಾಯಿ ಕೊಡಬೇಕು. ಮನೆ ಕಟ್ಟಲು 5 ಲಕ್ಷ ಕೊಡ್ತೀವಿ ಎಂದಿದ್ದಾರೆ. ಈ ಹಣವನ್ನು 10 ಲಕ್ಷಕ್ಕೆ ಏರಿಸಬೇಕು" ಎಂದು ಒತ್ತಾಯಿಸಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ.
ಗೋಕಾಕ ನಗರದ ಸಿಂದಿ ಕೂಟ ಸೇರಿ ಇತರೆ ಕಡೆಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಅವರು, ಪ್ರವಾಹದಿಂದ ಸಂತ್ರಸ್ತರಾದವರಿಗೆ ಬೆಂಬಲಿಸುವಂತೆಯೂ ತಿಳಿಸಿದರು.
"ಕೇಂದ್ರ ತಂಡ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆಗೆ ಬಂದಿತ್ತು. ಆದರೆ ಸರಿಯಾಗಿ ಪರಿಶೀಲಿಸದೇ ಹೊರಗಿನಿಂದಲೇ ನೋಡಿ ಹೋಗಿದ್ದಾರೆ" ಎಂದು ಆರೋಪಿಸಿದರು.

"ನಾನು ಸರ್ಕಾರ ಬೀಳಿಸಿಲ್ಲ. ರಾಜಕೀಯಕ್ಕಾಗಿ ನನ್ನ ಮೇಲೆ ಮಾಡಿರುವ ಆರೋಪ ಅದು. ಹಾಗಿದ್ದರೆ ಗೋಪಾಲಯ್ಯ, ವಿಶ್ವನಾಥ, ನಾರಾಯಣಗೌಡ ಅವರನ್ನು ನಾನು ಕಳುಹಿಸಿಕೊಟ್ಟಿದ್ದೀನಾ?" ಎಂದು ಪ್ರಶ್ನಿಸಿದರು.
ಇಂದಿರಾ ಕ್ಯಾಂಟಿನ್ ನಲ್ಲಿ ಅವ್ಯವಹಾರ ನಡೆದಿರುವ ಕುರಿತು ಹೇಳಿಕೆ ನೀಡಿದ್ದ ಡಿಸಿಎಂ ಅಶ್ವತ್ಥ ನಾರಾಯಣ ವಿರುದ್ಧವೂ ಇದೇ ಸಂದರ್ಭದಲ್ಲಿ ಮಾತನಾಡಿದರು.
"ಅವ್ಯವಹಾರ ಆಗಿದ್ರೆ ತನಿಖೆ ಮಾಡಿಸಲಿ. ಅದನ್ನು ಬಿಟ್ಟು ಇಂದಿರಾ ಕ್ಯಾಂಟಿನ್ ಬಂದ್ ಮಾಡ್ತಿನಿ ಅಂದ್ರೆ ಹೇಗೆ? ಏನಾದ್ರು ಆಗಿದ್ರೆ ಆಪರೇಷನ್ ಮಾಡಬೇಕೇ ಹೊರತು, ಸಾಯಿಸೇಬಿಟ್ಟರೆ ಹೇಗೆ" ಎಂದು ಪ್ರಶ್ನಿಸಿದರು.
ಪ್ರವಾಹ ಪರಿಶೀಲನೆಗೆ ಬಂದಿದ್ದ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ಸತೀಶ ಜಾರಕಿಹೊಳಿ ಸಾಥ್ ನೀಡಿದರು.












Click it and Unblock the Notifications