• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಳಗಾವಿ: ಅಪಘಾತದಲ್ಲಿ ಕರ್ತವ್ಯ ನಿರತ ಎಎಸ್ಐ ಸಾವು

By ಬೆಳಗಾವಿ ಪ್ರತಿನಿಧಿ
|

ಬೆಳಗಾವಿ, ಮೇ 10: ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಹೊರವಲಯದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಎಎಸ್ಐ ಯಲ್ಲಪ್ಪ ರಾಮಪ್ಪ ತಳವಾರ (58) ಮೃತರಾಗಿದ್ದಾರೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಬೆಳಗಾವಿ ರಸ್ತೆಯ ಜಿ.ಜಿ ಚೋಪ್ರಾ ಕಾಲೇಜಿನ ಹತ್ತಿರ, ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿ ಅವರು ಸಾವಿಗೀಡಾಗಿದ್ದಾರೆ. ಆದರೆ ಅಪಘಾತ ಮಾಡಿದ ವಾಹನ ಯಾವುದು ಎನ್ನುವುದು ಇನ್ನೂ ಗೊತ್ತಾಗಿಲ್ಲ.

ಹಿರಿಯೂರಿನಲ್ಲಿ ಲಾರಿ ಡಿಕ್ಕಿ; ಕುರಿಗಾಹಿ, 25 ಕುರಿಗಳು ಸಾವು

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಶನಿವಾರ ರಾತ್ರಿ ತಮ್ಮ ದ್ವಿಚಕ್ರ ವಾಹನದಲ್ಲಿ ಅಸುಂಡಿ ಗ್ರಾಮಕ್ಕೆ ತೆರಳುತ್ತಿದ್ದರು. ಇನ್ನು 2 ತಿಂಗಳಲ್ಲಿ ಅವರು ಪೊಲೀಸ್ ಸೇವೆಯಿಂದ ನಿವೃತ್ತರಾಗಲಿದ್ದರು.

ಸಿಪಿಐ ಮಂಜುನಾಥ ನಡುವಿನಮನಿ, ಪಿಎಸ್ಐ ನಾಗನಗೌಡ ಕಟ್ಟಿಮನಿಗೌಡ ಸ್ಥಳಕ್ಕೆ ಧಾವಿಸಿದ್ದಾರೆ. ತನಿಖೆಯ ನಂತರ ಅಪಘಾತಕ್ಕೆ ನಿಜವಾದ ಕಾರಣ ತಿಳಿಯಬೇಕಿದೆ.

English summary
ASI Yallappa Ramappa (58) died on Saturday night in an accident on the outskirts of Savadatti town in Belagavi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X