ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದ ಶವಯಾತ್ರೆ ಮಾಡುತ್ತೇನೆಂದ ಭಂಡ ಸಂಭಾಜಿ

|
Google Oneindia Kannada News

ಬೆಳಗಾವಿ, ನ. 25 : ಗಡಿನಾಡು ಬೆಳಗಾವಿಯಲ್ಲಿ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಪುಂಡಾಟಿಕೆ ಮುಂದುವರೆದಿದೆ. " ಎಂಇಎಸ್ ನಲ್ಲಿ ನಾಲ್ಕು ಶಾಸಕರಿದ್ದರೆ, ಇಂದು ರಾಜ್ಯದ ಶವಯಾತ್ರೆ ಮಾಡುತ್ತಿದ್ದೆವು" ಎಂದು ಸಂಭಾಜಿ ಪಾಟೀಲ್ ವಿವಾದಾತ್ಮಹ ಹೇಳಿಕೆ ನೀಡಿದ್ದಾರೆ. ಕರವೇ ಅದ್ಯಕ್ಷ ನಾರಾಯಣ ಗೌಡ ಪಾಟೀಲ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಸೋಮವಾರ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಆಯೋಜಿಸಿದ್ದ ಮಹಾಮೇಳವ ಸಮ್ಮೇಳನದಲ್ಲಿ ಮಾತನಾಡಿದ ಶಾಸಕ ಸಂಭಾಜಿ ಪಾಟೀಲ್ ಕರ್ನಾಟಕ ವಿಧಾನಸಭೆಯಲ್ಲಿ ನಾಲ್ಕು ಎಂಇಎಸ್ ಶಾಸಕರಿದ್ದರೆ, ಇಂದು ಕರ್ನಾಟಕದ ಶವಯಾತ್ರೆ ಮಾಡುತ್ತಿದ್ದೆವು. ಮರಾಠರ ಶಕ್ತಿ ಏನೆಂದು ತೋರಿಸುತ್ತಿದ್ದೆವು ಎಂದು ಹೇಳಿಕೆ ನೀಡಿದ್ದಾರೆ.

Sambhaji Patil

ಮಹಾಮೇಳವದ ಕಾರ್ಯಕ್ರಮದ ವಿರುದ್ಧ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಹಾಗೂ ಸಂಭಾಜಿ ಪಾಟೀಲ್ ಕಚೇರಿಯ ಮೇಲೆ ದಾಳಿ ನಡೆಸಿದ್ದನ್ನು ಮೇಳವದಲ್ಲಿ ಖಂಡಿಸಿದ ಪಾಟೀಲ್, ವಿಧಾನಸಭೆಯಲ್ಲಿ 4 ಜನ ಎಂಇಎಸ್ ಶಾಸಕರಿದ್ದರೆ, ನಮ್ಮ ಶಕ್ತಿ ಏನೆಂದು ತೋರಿಸುತ್ತಿದ್ದೆ. ನಮ್ಮ ಕಚೇರಿಯ ಮೇಲೆ ದಾಳಿ ಮಾಡಿದ ನಾರಾಯಣ ಗೌಡರಿಗೆ ಸೂಕ್ತ ಸಮಯದಲ್ಲಿ ಉತ್ತರ ನೀಡುತ್ತೇನೆ ಎಂದು ಘೋಷಿಸಿದರು. (ಎಂಇಎಸ್, ಕರವೇ ಜಟಾಪಟಿ)

ನಾರಾಯಣ ಗೌಡ ಖಂಡನೆ : ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಶಾಸಕರಾಗಿ ಆಯ್ಕೆ ಆಗಿರುವುದು ಕರ್ನಾಟಕದ ವಿಧಾನಸಭೆಗೆ, ಮಹಾರಾಷ್ಟ್ರದ ವಿಧಾನಸಭೆಗಲ್ಲ ಎಂಬುದನ್ನು ಅರಿತು ಮಾತನಾಡಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಸಂಭಾಜಿ ಪಾಟೀಲ್ ಅವರಿಗೆ ತಿರುಗೇಟು ನೀಡಿದ್ದಾರೆ.

ಒಂದಲ್ಲ ನೂರು ಸಂಭಾಜಿ ಬಂದರೂ ಬೆಳಗಾವಿ ಕರ್ನಾಟಕಕ್ಕೆ ಸೇರುತ್ತದೆ. ಯಾರಿದಂಲೂ ಅದನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಸಂಭಾಜಿ ಇಂತಹ ಭಂಡತನದ ಹೇಳಿಕೆ ಮುಂದುವರೆಸಿದರೆ, ಅವರಿಗೆ ವಿಧಾನಸೌಧಕ್ಕೆ ಕಾಲಿಡಲು ಬಿಡುವುದಿಲ್ಲ ಎಂದು ನಾರಾಯಣ ಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇಲ್ಲಿನ ಶಾಸಕರಾಗಿದ್ದು, ನಮ್ಮ ಜನರ ಕಷ್ಟದ ಬಗ್ಗೆ ಮಾತನಾಡಿ, ಕನ್ನಡ ಮತ್ತು ಕರ್ನಾಟಕದ ವಿರುದ್ಧ ಮಾತನಾಡಿದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಅವರು ಎಚ್ಚರಿಸಿದ್ದಾರೆ. (ಮರಾಠಿಗರ ಉದ್ಧಟತನ, ಕನ್ನಡಿಗರ ದಿವ್ಯ ಮೌನ!)

ಸೋಮವಾರ ಬೆಳಗ್ಗೆಯಿಂದ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಎಂಇಎಸ್ ನಡುವೆ ಜಟಾಪಟಿ ನಡೆಯುತ್ತಿದೆ. ಎಂಇಎಸ್ ಸಮಾವೇಶಕ್ಕೆ ಹೋಗುತ್ತಿದ್ದ ವಾಹನಗಳ ಮೇಲೆ ಕರವೇ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿ, ಪೊಲೀಸರಿಂದ ಲಾಠಿ ಏಟು ತಿಂದಿದ್ದರು. ಸಂಭಾಜಿ ಕಚೇರಿಯ ಮೇಲೆ ದಾಳಿ ನಡೆಸಿ ನಾಮಫಲಕಗಳನ್ನು ಕಿತ್ತು ಹಾಕಿದ್ದರು.

English summary
Maharashtra Ekikaran Samiti MLA Sambhaji Patil controversial statement on Karnataka. On Monday, November 25 in Maha Melava Sambhaji Patil said, if we have four MLAs in Karnataka assembly we will show what Maratha is.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X