ಖ್ಯಾತ ಕಾದಂಬರಿಕಾರ ಚಂದ್ರಕಾಂತ ಕುಸನೂರ ವಿಧಿವಶ
ಬೆಳಗಾವಿ, ಏಪ್ರಿಲ್ 19: ನಾಡಿನ ಖ್ಯಾತ ಕಾದಂಬರಿಕಾರ ಹಾಗೂ ಹಿರಿಯ ಸಾಹಿತಿ ಚಂದ್ರಕಾಂತ ಕುಸನೂರ (90) ಶನಿವಾರ ರಾತ್ರಿ ಬೆಳಗಾವಿಯಲ್ಲಿ ವಿಧಿವಶರಾಗಿದ್ದಾರೆ.
ಕಾದಂಬರಿಕಾರ ಚಂದ್ರಕಾಂತ ಕುಸನೂರ ಅವರು ಪತ್ನಿ, ನಾಲ್ವರು ಗಂಡುಮಕ್ಕಳು ಹಾಗೂ ಒಬ್ಬ ಮಗಳನ್ನು ಅಗಲಿದ್ದಾರೆ. ಕಲಬುರಗಿ ಮೂಲದವರಾಗಿದ್ದ ಚಂದ್ರಕಾಂತ ಕುಸನೂರ ಅವರು ಕೆಲವು ದಶಕಗಳಿಂದ ಬೆಳಗಾವಿಯಲ್ಲಿ ವಾಸವಾಗಿದ್ದರು.
ಬೆಳಗಾವಿಯ ರಾಣಿ ಚೆನ್ನಮ್ಮ ನಗರದಲ್ಲಿರುವ ತಮ್ಮ ಸ್ವಗೃಹದಲ್ಲಿ ಶನಿವಾರ ರಾತ್ರಿ 10.15ಕ್ಕೆ ನಿಧನರಾಗಿರುವ ಕನ್ನಡದ ಹಿರಿಯ ಸಾಹಿತಿ ಚಂದ್ರಕಾಂತ ಕುಸನೂರ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ರವಿವಾರ ಬೆಳಗಿನ ಜಾವ 2 ಗಂಟೆಗೆ ನೆರವೇರಿತು.

ಶಾಹಪುರ ಸ್ಮಶಾನ ಭೂಮಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಗ್ನಿಸ್ಪರ್ಶ ಮಾಡಲಾಯಿತು. ಕಿರಿಯ ಮಗ ಗುರುರಾಜ ಕುಸನೂರು ಅಗ್ನಿಸ್ಪರ್ಶ ಮಾಡಿದರು.












Click it and Unblock the Notifications