ಸಹೋದರನಿಗಾಗಿ ಸಚಿವ ಸ್ಥಾನ ಬಿಡಲು ತಯಾರಿದ್ದಾರೆ ರಮೇಶ್ ಜಾರಕಿಹೊಳಿ

Recommended Video

      ಸಹೋದರನಿಗಾಗಿ ಸಚಿವ ಸ್ಥಾನ ಬಿಡಲು ತಯಾರಿದ್ದಾರೆ ರಮೇಶ್ ಜಾರಕಿಹೊಳಿ | Oneindia Kannada

      ಬೆಳಗಾವಿ, ಜೂನ್ 07: ಸಹೋದರನಿಗಾಗಿ ಸಚಿವ ಸ್ಥಾನವನ್ನು ಬಿಟ್ಟುಕೊಡಲು ರಮೇಶ ಜಾರಕಿಹೊಳಿ ತಯಾರಿದ್ದಾರಂತೆ. ಹೀಗೆಂದು ಅವರೇ ಹೇಳಿದ್ದಾರೆ.

      ಸಚಿವ ಸ್ಥಾನ ದೊರೆತ ಬಳಿಕ ಜಿಲ್ಲೆಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಬಾರಿ ಅವರಿಗೆ ಸಚಿವ ಸ್ಥಾನ ದೊರೆತಿತ್ತು ಹಿರಿಯ ಶಾಸಕನಾದರೂ ಏನೂ ಮಾತನಾಡದೆ ಸುಮ್ಮನಿದ್ದೆ ಈ ಬಾರಿ ನನಗೆ ಸಚಿವ ಸ್ಥಾನ ದೊರೆತಿದೆ ಎಂದರು.

      ಸಚಿವ ಸ್ಥಾನ ದೊರೆಯದ್ದಕ್ಕೆ ಸತೀಶ್ ಜಾರಕಿಹೊಳಿ ಅಸಮಾಧಾನ ಹೊಂದಿರುವ ಬಗ್ಗೆ ಮಾತನಾಡಿದ ಅವರು, ಗೆದ್ದಾಗ ಸಚಿವ ಸ್ಥಾನ ಬೇಕು ಎಂದುಕೊಳ್ಳುವುದು ಸಹಜ, ಯಾರಾದರೂ ಮಧ್ಯಸ್ಥಿಕೆ ವಹಿಸಿದರೆ ನನ್ನ ಸ್ಥಾನ ಬಿಟ್ಟುಕೊಡಲು ನಾನು ಸಿದ್ಧ ಎಂದರು.

      Ramesh Jarakiholi said he can leave minister post for his brother

      ಸತೀಶ್ ಅವರನ್ನು ಮನವೊಲಿಸುತ್ತೀರಾ ಎಂಬ ಪ್ರಶ್ನೆಗೆ ನೇರ ಉತ್ತರ ನೀಡಿದ ರಮೇಶ್ ಜಾರಕಿಹೊಳಿ, 'ಮನವೊಲಿಸಲು ಅವರೇನು ಹುಡುಗನಲ್ಲ, ಪ್ರಬುದ್ಧ ರಾಜಕಾರಣಿ, ಪಕ್ಷದ ವಿರುದ್ಧ ಭಿನ್ನಮತೀಯ ಚಟುವಟಿಕೆಗಳನ್ನು ಅವರು ಮಾಡುವುದಿಲ್ಲ ಎಂದರು.

      ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ, ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಅಂತಹಾ ನೂರಾರು ನಾಯಕರನ್ನು ಸೃಷ್ಠಿಸುವ ಶಕ್ತಿ ಅದಕ್ಕಿದೆ ಎಂದ ಅವರು ಇನ್ನೊಂದು ವಾರದಲ್ಲಿ ಪರಿಸ್ಥಿತಿ ತಿಳಿಯಾಗಲಿದೆ ಎಂದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+