ಸಹೋದರನಿಗೆ ಟಾಂಗ್ ಕೊಟ್ಟ ನೂತನ ಸಚಿವ ರಮೇಶ ಜಾರಕಿಹೊಳಿ
ಬೆಳಗಾವಿ, ಜೂನ್.07 : ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಗುರುವಾರ ಆಗಮಿಸಿದ ಸಮ್ಮಿಶ್ರ ಸರ್ಕಾರದ ನೂತನ ಸಚಿವ ರಮೇಶ ಜಾರಕಿಹೊಳಿ ಸಹೋದರ ಸತೀಶ ಜಾರಕಿಹೊಳಿಗೆ ಟಾಂಗ್ ನೀಡಿದ್ದಾರೆ.
ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಮುನಿಸಿಕೊಂಡಿರುವ ಸತೀಶ್ ಜಾರಕಿಹೊಳಿ ಮನವೊಲಿಸುತ್ತಿರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಒಂದು ವಾರದಲ್ಲಿ ಎಲ್ಲ ಗೊಂದಲಗಳು ಸರಿಯಾಗಲಿವೆ. ಸತೀಶ್ ಜಾರಕಿಹೊಳಿ ಮನವೊಲಿಸಲು ಸಣ್ಣ ಹುಡುಗನಲ್ಲ. ಆತ ಅನುಭವಿ ರಾಜಕಾರಣಿ ಎಂದು ಹೇಳಿದ್ದಾರೆ.
ಪಕ್ಷಕ್ಕಾಗಿ ಕೆಲವೊಮ್ಮೆ ತ್ಯಾಗ ಮಾಡಬೇಕಾಗುತ್ತದೆ. ಕಳೆದ ಭಾರೀ ನಾನು ಹಿರಿಯ ಶಾಸಕನಾಗಿದ್ದರೂ ಸತೀಶ್ ಅವರಿಗೆ ಮಂತ್ರಿ ಪದವಿ ನೀಡಲಾಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ರಮೇಶ ಜಾರಕಿಹೊಳಿ ಅಂತಹ ಹತ್ತು ಜನರನ್ನ ಸೃಷ್ಟಿಸುವ ಶಕ್ತಿ ಇದೆ.

ಪರೋಕ್ಷವಾಗಿ ಸಹೋದರ ಸತೀಶ್ ಮನವೊಲಿಸುವ ಅಗತ್ಯವಿಲ್ಲ ಎಂದ ಸಚಿವ ರಮೇಶ ಜಾರಕಿಹೊಳಿ, ಸಮ್ಮಿಶ್ರ ಸರ್ಕಾರ ಬಂದ ಮೇಲೆ ಸಿದ್ದರಾಮಯ್ಯ ಮೂಲೆ ಗುಂಪಾಗಿಲ್ಲ. ಸಿದ್ದರಾಮಯ್ಯ ಅವರಿಂದಲೇ ನಾನು ಮಂತ್ರಿಯಾಗಿದ್ದೇನೆ ಎಂದು ಹೇಳಿದರು.












Click it and Unblock the Notifications