ಬೆಳಗಾವಿಗೂ ಬರಲಿದೆ ಪಬ್ಲಿಕ್ ಬೈಕ್ ಶೇರಿಂಗ್ ಸೇವೆ

ಬೆಳಗಾವಿ, ಫೆಬ್ರವರಿ 11: ಬೆಳಗಾವಿ ನಗರದಲ್ಲಿಯೂ ಪಬ್ಲಿಕ್ ಬೈಕ್ ಶೇರಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ. ಸ್ಮಾರ್ಟ್‌ ಸಿಟಿ ಲಿಮಿಟೆಡ್ ಈ ಯೋಜನೆಯನ್ನು ಜಾರಿಗೊಳಿಸಲು ಟೆಂಡರ್ ಆಹ್ವಾನಿಸಿದೆ.

ಪ್ರಸ್ತುತ ಮೈಸೂರು ನಗರದಲ್ಲಿ 'ಟ್ರಣ್ ಟ್ರಿಣ್' ಹೆಸರಿನಲ್ಲಿ ಪಬ್ಲಿಕ್ ಬೈಕ್ ಶೇರಿಂಗ್ (ಪಿಬಿಎಸ್) ವ್ಯವಸ್ಥೆ ಜಾರಿಯಲ್ಲಿದೆ. ಬೆಳಗಾವಿ ಸ್ಮಾರ್ಟ್‌ ಸಿಟಿ ಲಿಮಿಟೆಡ್ ನಗರದಲ್ಲಿಯೂ ಇದನ್ನು ಜಾರಿಗೊಳಿಸು ಉದ್ದೇಶಿಸಿದ್ದು, ಟೆಂಡರ್ ಕರೆದಿದೆ. ಮಾರ್ಚ್‌ನಲ್ಲಿ ಟೆಂಡರ್ ತೆರೆಯಲಾಗುತ್ತದೆ.

6 ತಿಂಗಳಿನಲ್ಲಿ ಯೋಜನೆಯನ್ನು ಅಭಿವೃದ್ಧಿಪಡಿಸಿ 36 ತಿಂಗಳ ಕಾಲ ನಿರ್ವಹಣೆ ಮಾಡಲು ಟೆಂಡರ್‌ ಸಲ್ಲಿಸಬಹುದು. ಬೈಸಿಕಲ್ 100, ವಿದ್ಯುತ್ ಚಾಲಿತ ಬೈಸಿಕಲ್ 100, ಇ-ಬೈಕ್ 100 ಮತ್ತು 20 ನಿಲ್ದಾಣಗಳನ್ನು ನಿರ್ಮಿಸಬೇಕು ಎಂದು ಟೆಂಡರ್‌ನಲ್ಲಿ ಸೂಚಿಸಲಾಗಿದೆ.

Public Bike Sharing Service In Belagavi City Soon

0-30 ನಿಮಿಷಗಳ ತನಕ ಬೈಸಿಕಲ್‌ಗಳಿಗೆ 5, ವಿದ್ಯುತ್ ಚಾಲಿತ ಬೈಕ್‌ಗೆ 15 ಮತ್ತು ಇ-ಬೈಕ್‌ಗೆ 20 ರೂ. ಬಾಡಿಗೆ ದರ ನಿಗದಿ ಮಾಡಲಾಗಿದೆ.

30-2 ಗಂಟೆಯ ತನಕ ಬೈಸಿಕಲ್‌ಗಳಿಗೆ 10, ವಿದ್ಯುತ್ ಚಾಲಿತ ಬೈಕ್‌ಗೆ 40 ಮತ್ತು ಇ-ಬೈಕ್‌ಗೆ 50 ರೂ. ಬಾಡಿಗೆ ಇರಲಿದೆ. 2 ರಿಂದ 4 ಗಂಟೆಯ ತನಕ ಬೈಸಿಕಲ್‌ 20, ವಿದ್ಯುತ್ ಚಾಲಿತ ಬೈಕ್‌ಗೆ 100 ಮತ್ತು ಇ-ಬೈಕ್‌ಗೆ 120 ರೂ. ಬಾಡಿಗೆ ನಿಗದಿ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+