ಪೊಲೀಸ್ ಠಾಣೆಗೆ ಬೀಗ ಜಡಿಯಲು ಮುಂದಾದ ಸಾರ್ವಜನಿಕರು
ಬೆಳಗಾವಿ, ಡಿಸೆಂಬರ್ 04 : ತಮ್ಮ ಅವಹಾಲು ಸ್ವೀಕರಿಸಲು ಯಾವ ಪೊಲೀಸ್ ಅಧಿಕಾರಿಯೂ ಬಾರದ್ದಕ್ಕೆ ರೊಚ್ಚಿಗೆದ್ದ ಪ್ರತಿಭಟನಾಕಾರರು ಪೊಲೀಸ್ ಠಾಣೆಗೆ ಬೀಗ ಜಡಿಯಲು ಮುಂದಾಗಿದ್ದಾರೆ.
ಶಹಪುರದ ಅಲವಾನ್ ಗಲ್ಲಿಯಲ್ಲಿ ನಿನ್ನೆ (ಡಿಸೆಂಬರ್ 03) ರಾತ್ರಿ ಮದುವೆ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳನ್ನು ಕೂಡಲೆ ಬಂಧಿಸಬೇಕು ಎಂದು ಶಾಸಕ ಅಭಯ್ ಪಾಟೀಲ ಅವರ ನೇತೃತ್ವದಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ನಿನ್ನೆ (ಡಿಸೆಂಬರ್ 03) ರಾತ್ರಿ ಅಲವನ್ ಗಲ್ಲಿಯಲ್ಲಿ ಯುವಕರ ಗುಂಪು ಕಲ್ಲು ತೂರಾಟ ನಡೆಸಿ ಶಾಂತಿ ಭಂಗ ಮಾಡಿ ಸಾರ್ವಜನಿಕರ ಆಸ್ತಿ ಪಾಸ್ತಿಗಳನ್ನು ನಾಶ ಮಾಡಿ ಪುಂಡಾಟಿಕೆ ಪ್ರದರ್ಶಿಸಿದರೂ ಶಹಾಪೂರ ಪೋಲೀಸರು ಇನ್ನುವರೆಗೆ ಆರೋಪಿಗಳನ್ನು ಬಂಧಿಸಿಲ್ಲ ಎಂದು ಪ್ರತಿಭಟನಾ ನಿರತರು ದೂರಿದರು.
ಠಾಣೆಗೆ ಮುತ್ತಿಗೆ ಹಾಕಿ ಗಂಟೆಗಳೇ ಕಳೆದರು ಯಾವೊಬ್ಬ ಪೊಲೀಸ್ ಅಧಿಕಾರಿಯೂ ಅವಹಾಲು ಸ್ವೀಕರಿಸಲು ಬಾರದೇ ಇದ್ದಾಗ ರೊಚ್ಚಿಗೆದ್ದ ಸಾರ್ವಜನಿಕರು ಪೊಲೀಸ್ ಠಾಣೆಗೆ ಬೀಗ ಜಡಿಯಲು ಮುಂದಾದರು. ಆಗ ಸ್ಥಳೀಯ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಸುಮ್ಮನಾಗಿಸಿದರು.












Click it and Unblock the Notifications