ಮುಂದುವರಿದ ಮಳೆ; ಚಿಕ್ಕೋಡಿ ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋದ ವ್ಯಕ್ತಿ
ಬೆಳಗಾವಿ, ಆಗಸ್ಟ್ 5: ಬೆಳಗಾವಿಯಲ್ಲಿ ಮಳೆರಾಯನ ಆರ್ಭಟ ನಿಲ್ಲುವಂತೆ ಕಾಣುತ್ತಿಲ್ಲ. ಎರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಗೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದೆ.
ಧಾರಾಕಾರ ಮಳೆಯಿಂದಾಗಿ ಖಾನಾಪುರ ತಾಲೂಕಿನ ಹಲವು ರಸ್ತೆಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ನಗರಕ್ಕೆ ಬರಲು ಗ್ರಾಮಸ್ಥರು ಪರದಾಡಬೇಕಾಗಿದೆ.
ಜೊತೆಗೆ ಗಂದಿಗವಾಡ-ತಿಗಡೋಳ್ಳಿ ವಾಯಾ ಕಿತ್ತೂರ ಗ್ರಾಮದ ಸಂಪರ್ಕ ಸೇತುವೆ ಸಂಪೂರ್ಣ ಜಲಾವೃತವಾಗಿದೆ.

ಎಮ್ಮೆ ತರಲು ತೋಟದ ಮನೆಗೆ ಹೋಗುವ ಸಮಯ ವ್ಯಕ್ತಿಯೊಬ್ಬ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಹುಲಗಬಾಳಿ ಗ್ರಾಮದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ಮಾರುತಿ ಜಾಧವ (38) ಎಂಬಾತ ಸಾವಿಗೀಡಾದ ವ್ಯಕ್ತಿ. ಕೃಷ್ಣಾ ನದಿಯ ಸೆಳವಿಗೆ ಸಿಕ್ಕು ಈತ ಸಾವನ್ನಪ್ಪಿದ್ದಾನೆ.












Click it and Unblock the Notifications