• search
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಾಸಕ ಸೇಠ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಬೆನಕೆ

By ಬೆಳಗಾವಿ ಪ್ರತಿನಿಧಿ
|

ಬೆಳಗಾವಿ, ಫೆಬ್ರವರಿ22 : ಚುನಾಯಿತ ಪ್ರತಿನಿಧಿಗಳು ಲಾಭದಾಯಕ ಹುದ್ದೆಯಲ್ಲಿ ಇರಬಾರದು ಎಂಬ ಕಾನೂನು ಇದ್ದರೂ ಕಾನೂನು ಉಲ್ಲಂಘಿಸಿ ಶಾಸಕ ಫಿರೋಜ್ ಸೇಠ್ ಬುಡಾ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದು ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುದು ಎಂದು ಬಿಜೆಪಿ ಮುಖಂಡ ಅನಿಲ ಬೆನಕೆ ತಿಳಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅನೀಲ ಬೆನಕೆ ದೆಹಲಿಯ ಶಾಸಕರು ಲಾಭದಾಯಕ ಹುದ್ದೆ ಅಲಂಕರಿಸಿದ ಹಿನ್ನಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಅವರ ವಿರುದ್ಧ ಕ್ರಮ ಕೈಗೊಂಡ ಉದಾಹರಣೆ ನಮ್ಮ ಮುಂದಿದೆ.

ರಾಜ್ಯ ಸರ್ಕಾರ ಕಾನೂನನ್ನು ಗಾಳಿಗೆ ತೂರಿ ಶಾಸಕ ಸೇಠ ಅವರಿಗೆ ಬುಡಾ ಅಧ್ಯಕ್ಷ ಸ್ಥಾನ ನೀಡಿದ್ದು ಸರ್ಕಾರದ ಕ್ರಮವನ್ನು ವಿರೋಧಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ಶುಕ್ರವಾರ ಲಿಖಿತ ದೂರು ಸಲ್ಲಿಸುತ್ತೇವೆ ಅಲ್ಲಿಯೂ ನ್ಯಾಯ ಸಿಗದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಅನೀಲ ಬೆನಕೆ ತಿಳಿಸಿದರು

ಬೆಳಗಾವಿಯ ಸರ್ದಾರ ಮೈದಾನವನ್ನು ಒಂದು ಕೋಟಿ ರೂ ಖರ್ಚು ಮಾಡಿ ಅಭಿವೃದ್ಧಿ ಮಾಡಿದ್ದೇವೆ ಎಂದು ಶಾಸಕ ಸೇಠ ಮೈದಾನದ ಎದುರು ದೊಡ್ಡ ಬೋರ್ಡ್ ಹಾಕಿಕೊಂಡಿದ್ದಾರೆ. ಆದರೆ ಅಲ್ಲಿ ನಿರ್ಮಿಸಲಾಗಿರುವ ಗ್ಯಾಲರಿ ಕಟ್ಟಡ ನೋಡಿದ್ರೆ 25 ಲಕ್ಷ ರೂ ಕೂಡಾ ಖರ್ಚಾಗಿಲ್ಲ ಎಂದು ಪ್ರತಿಯೊಬ್ಬರಿಗೂ ತಿಳಿಯುತ್ತದೆ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಮಾಡಬಾರದು ಎಂಬ ಉದ್ದೇಶದಿಂದ ಇಷ್ಟು ದಿನ ಸುಮ್ಮನಾಗಿದ್ದೇವು ಬೆಳಗಾವಿಯ ಜನ ಮೂರ್ಖರಲ್ಲ ಸೇಠ ಯಾವ ರೀತಿಯ ಅಭಿವೃದ್ಧಿ ಮಾಡುತ್ತಿದ್ದಾರೆ ಎನ್ನುವದು ಗೊತ್ತಾಗುತ್ತಿದೆ ಎಂದು ಅನಿಲ ಬೆನಕೆ ಶಾಸಕ ಸೇಠ ವಿರುದ್ಧ ವಾಗ್ದಾಳಿ ನಡೆಸಿದರು

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ದೊಡ್ಡ ಮನಸ್ಸು ಮಾಡಿ ಬೆಳಗಾವಿ ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳಿಗೆ ಪ್ರತಿ ವರ್ಷ ನೂರು ಕೋಟಿ ರೂ ಅನುದಾನ ನೀಡುವ ನಗರೋತ್ಥಾನ ಯೋಜನೆ ಜಾರಿಗೆ ತಂದರು ಅಂದಿನಿಂದ ಇಂದಿನವರೆಗೆ ಪ್ರತಿ ವರ್ಷ ಬೆಳಗಾವಿಗೆ ನೂರು ಕೋಟಿ ರೂ ಅನುದಾನ ಬರುತ್ತಿದೆ ಈ ಅನುದಾನದಲ್ಲಿಯೇ ಬೆಳಗಾವಿ ನಗರದ ಅಭಿವೃದ್ಧಿ ಆಗುತ್ತಿದ್ದು ಅದರ ಶ್ರೇಯಸ್ಸು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಸಲ್ಲಬೇಕು ಎಂದು ಅನಿಲ ಬೆನಕೆ ಹೇಳಿದರು

ಸರ್ಕಾರ ಬೆಳಗಾವಿ ಮಹಾನಗರ ಪಾಲಿಕೆಗೆ ನೂರು ಕೋಟಿ ಅನುದಾನ ಕೊಡುತ್ತದೆ ಈ ಅನುದಾನ ನಗರದ ಎಲ್ಲ ವಾರ್ಡಗಳಿಗೆ ಸಮನಾಗಿ ಹಂಚಿಕೆಯಾಗಿ ನಗರಸೇವಕರು ಸೂಚಿಸಿದ ಕಾಮಗಾರಿಗಳನ್ನು ನಡೆಸುವ ಬದಲು ಶಾಸಕ ಸೇಠ. ನಗರ ಸೇವಕರನ್ನು ಸಂಪೂರ್ಣವಾಗಿ ಕಡೆಗಣಿಸಿ ತಾವೇ ಎಲ್ಲ ಕಾಮಗಾರಿಗಳಿಗೆ ಪೂಜೆ ನೆರವೇರಿಸುತ್ತಿರುವದು ಖಂಡನೀಯವಾಗಿದೆ ಎಂದು ಅನೀಲ ಬೆನಕೆ ಟೀಕಿಸಿದರು

ಸರ್ದಾರ ಮೈದಾನ ಇರುವದು ಕ್ರಿಕೆಟ್ ಆಡುವದಕ್ಕೆ ಆದರೆ ಇಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಸಲು ಅನುಮತಿ ಕೊಡದ ಜಿಲ್ಲಾಡಳಿತ ಬೇರೆ ಬೇರೆ ಕಾರ್ಯಕ್ರಮಗಳಿಗೆ ಅನುಮತಿ ನೀಡುತ್ತಿದೆ ಅಭಿವೃದ್ಧಿಯ ಹೆಸರಿನಲ್ಲಿ ಶಾಸಕ ಸೇಠ ಉದ್ಯಾನಗಳ ನಡುವೆ ಗ್ಲಾಸ್ ಹೌಸ್ ನಿರ್ಮಿಸಿ ಗಾರ್ಡನ್ ಗಳನ್ನು ಕಾಂಕ್ರೀಟೀಕರಣ ಮಾಡಿ ಗಾರ್ಡನ್ ಗಳ ಪ್ರಕೃತಿ ಸೌಂದರ್ಯ ಹಾಳು ಮಾಡಿದ್ದಾರೆ ಎಂದು ಅನೀಲ ಬೆನಕೆ ಆರೋಪಿಸಿದರು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP leader Anil Benake said the party will file complaint against congress MLA of Belgaum Firoz Sait, who was also nominated as chairman of Belgaum urban Development authority which would attract office of profit case under people's representative act.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more