ಮಹಾದಾಯಿಯಲ್ಲೂ ಕನ್ನಡಿಗರ ವಿರುದ್ಧ ಕತ್ತಿ ಮಸೆದ ಮರಾಠ ಮಂಚ್

ಬೆಳಗಾವಿ, ಡಿಸೆಂಬರ್ 28: ಕರ್ನಾಟಕ, ಮಹಾರಾಷ್ಟ್ರ ಗಡಿ ವಿವಾದ ದಲ್ಲಿ ಮಾತ್ರ ಈವರೆಗೆ ಮೂಗು ತೂರಿಸುತ್ತಿದ್ದ ಬೆಳಗಾವಿ ಮರಾಠ ಪರ ಸಂಘಟನೆಗಳು ಇದೀಗ ಮಹದಾಯಿ ನದಿ ನೀರಿನ ವಿಚಾರದಲ್ಲೂ ರಾಜ್ಯದ ವಿರುದ್ಧ ನಿಲುವು ತಾಳಿವೆ.

ಬೆಳಗಾವಿ ಮರಾಠ ಯುವ ಮಂಚ್ ಮರಾಠ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆದಿದ್ದು ಮಹದಾಯಿ ನದಿ ನೀರಿನ ವಿಚಾರವಾಗಿ ಯಾವುದೇ ಕಾರಣಕ್ಕೂ ಕರ್ನಾಟಕದ ಪರ ನಿಲುವು ತಾಳದಂತೆ ಮನವಿ ಮಾಡಿದ್ದಾರೆ. ಮಹಾಜನ್ ವರದಿ ಪ್ರಕಾರ ಕಳಸಾ ಬಂಡೂರಿ ನಾಲೆ ಮಹಾರಾಷ್ಟ್ರಕ್ಕೆ ಸೇರುತ್ತದೆ. ಯಾವುದೇ ಕಾರಣಕ್ಕೂ ಮಹಾದಾಯಿಗೆ ಸಮ್ಮತಿ ಸೂಚಿಸಬಾರದು.

Now Maratha Manch opposes Karnataka in Mahadayi issue too

ಮಹಾದಾಯಿ ಬಗ್ಗೆ ಕರ್ನಾಟಕಕ್ಕೆ ಮೂಗು ಹಿಡಿದು ಪಾಠ ಕಲಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಗೋವಾ, ಮಹಾರಾಷ್ಟ್ರ, ಕರ್ನಾಟಕದ ಮುಖ್ಯಮಂತ್ರಿಗಳು ಒಂದೆಡೆ ಚರ್ಚಿಸಿ ಸಮಸ್ಯೆಯನ್ನು ಬಗೆ ಹರಿಸಬೇಕು. ಹಾಗೂ ಗಡಿ ವಿವಾದ ಕುರಿತು ಇತ್ಯರ್ಥ ಮಾಡಬೇಕು. ಈ ಬಗ್ಗೆ ಕರ್ನಾಟಕದ ಮೇಲೆ ಒತ್ತಡ ಹೇರ ಬೇಕು ಎಂದು ಬೆಳಗಾವಿ ಮರಾಠ ಯುವ ಮಂಚ್ನ ಸೂರಜ್ ಕಣಬರಕರ್ ದೇವೇಂದ್ರ ಫಡ್ನವಿಸ್ ಗೆ ಪತ್ರ ಬರೆದಿದ್ದಾರೆ.

Now Maratha Manch opposes Karnataka in Mahadayi issue too

ಗುರುವಾರ ಶಿವಮೊಗ್ಗದಲ್ಲಿ ನಡೆಯಲಿರುವ ಬಿಜೆಪಿ ಪರಿವರ್ತನಾ ಮೆರವಣಿಗೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಮಹಾದಾಯಿ, ಕಳಸಾ ಬಂಡೂರಿ ವಿಚಾರವಾಗಿ ಮಾತುಕತೆ ನಡೆಯಬಹುದು ಎಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+