ಕರ್ನಾಟಕಕ್ಕೆ ಮತ್ತೊಬ್ಬ ಹಾವಾಡಗಿತ್ತಿ ಪ್ರಾಪ್ತಿ

nirzara-anant-chitti-a-woman-snake-rescuer-in-belgaum
ಬೆಳಗಾವಿ, ನ.12: ಭಾರತ ಹಾವಾಡಿಗರ ದೇಶ ಎಂಬುದು ಇಡೀ ಜಗತ್ತಿಗೇ ತಿಳಿದ ವಿಷಯ. ಆದರೆ ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲಿ ಹಾವುಗಳ ಮುಂದೆ ಪುರುಷಪುಂಗವರದ್ದೇ ಪುಂಗಿ ನಾದ ಕೇಳಿಬರುತ್ತಿದೆ. ಒಬ್ಬೇ ಒಬ್ಬ ಮಹಿಳೆ ಹಾವನ್ನು ಹಿಡಿದ ಉದಾಹರಣೆ ನಮಗೆ ಕಾಣಬರುವುದಿಲ್ಲ.

ಬೆಳಗಾವಿಯ ನಾಗಿಣಿ ಬುಟ್ಟಿಯಲ್ಲಿ 14 ಹಾವು:
ಆದರೆ ಬೆಳಗಾವಿಯಲ್ಲೊಬ್ಬ ಮಹಿಳೆ ಇದ್ದಾರೆ. ಅವರು ಪುರುಷರಷ್ಟೇ ಧೈರ್ಯವಾಗಿ ಹಾವುಗಳನ್ನು ಹಿಡಿಯಬಲ್ಲರು. ಪುರುಷರಿಗಿಂತ ಒಂದು ಕೈ ಮೇಲು ಅನ್ನಿಸುವಷ್ಟು ಕರಾರುವಕ್ಕಾಗಿ ಹಾವನ್ನು ಹಿಡಿದು/ ರಕ್ಷಿಸಬಲ್ಲರು. ಅವರ ಹೆಸರು ನೀರಜರಾ ಅನಂತ್ ಚಿಟ್ಟಿ.

ವಿಶ್ವದಲ್ಲಿ ಅತ್ಯಂತ ವಿಷಕಾರಿ ಹಾವು ಎನಿಸಿರುವ ಮಂಡಲದ ಹಾವನ್ನು (Russell's Viper) ನೀರಜರಾ ಅನಂತ್ ಚಿಟ್ಟಿ ಇತ್ತೀಚೆಗೆ ಹೆಡೆಮುರಿಗೆ ಕಟ್ಟಿದ್ದರು. ತನ್ಮೂಲಕ ೊಂದೇ ವಾರದಲ್ಲಿ 14 ಹಾವುಗಳನ್ನು ತಮ್ಮ ''ಬುಟ್ಟಿಗೆ ಹಾಕಿಕೊಂಡಿದ್ದಾರೆ''.

ಹಾವುಗಳು ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ಸಂತಾನಾಭಿವೃದ್ಧಿಯಲ್ಲಿ ತೊಡಗುತ್ತವೆ. ಹಾಗಾಗಿ ಸಂಗಾತಿಯನ್ನು ಅರಸಿ ಎಲ್ಲೆಂದರಲ್ಲಿ ಹರಿದಾಡುತ್ತಿರುತ್ತವೆ. ಕಾಂಕ್ರೀಟ್ ಕಾಡುಗಳಿಗೂ ನುಗ್ಗುತ್ತವೆ. ಆದ್ದರಿಂದ ಜನ ಎಚ್ಚರಿಕೆಯಿಂದ ಇರಬೇಕು.

2007ರಲ್ಲಿ ಅನಂತ್ ಚಿಟ್ಟಿ ಜತೆ ವಿವಾಹವಾದ ನಂತರ ಕಳೆದೈದು ವರ್ಷಗಳಿಂದ ನೀರಜರಾ ಅವರು ವೃತ್ತಿಪರ ಹಾವು ಸಂರಕ್ಷಕಿಯಾಗಿದ್ದಾರೆ. ಅಂದಹಾಗೆ ಅನಂತ್ ಚಿಟ್ಟಿ ಸಹ ಹಾವಾಡಿಗರೇ! ಇದರಿಂದ ನಿಸ್ಸಂಶಯವಾಗಿ ಪತಿಯ ಪ್ರಭಾವ ನೀರಜರಾ ಮೇಲೆ ಗಾಢವಾಗಿಯೇ ಬಿದ್ದಿದೆ ಎನ್ನಬಹುದು.

ಮದುವೆ ಹೊಸದರಲ್ಲಿ 'ಹಾವನ್ನು ಹಿಡಿಯಿರಿ. ಹಾವಿನಿಂದ ನಮ್ಮನ್ನು ರಕ್ಷಿಸಿ' ಎಂದು ಪತಿ ಚಿಟ್ಟಿಗೆ ಚಿಟ್ಟು ಹಿಡಿಸುವಷ್ಟು ದೂರವಾಣಿ ಕರೆಗಳು ಬರುತ್ತಿದ್ದವಂತೆ. ಅದರಿಂದ ಪತಿಗೆ ನೆರವಾಗಲು ಸ್ವತಃ ನೀರಜರಾ ಅವರೇ ಹಾವು ಹಿಡಿಯುವ ಸಾಹಸಕ್ಕೆ ಕೈಹಾಕಿದರು. ಕಾಲಾಂತರದಲ್ಲಿ ಅವರೀಗ ಉರಗ ತಜ್ಞೆಯಾಗಿದ್ದಾರೆ! (ಚಿತ್ರ ಸುದ್ದಿ)

ಬಳ್ಳಾರಿಯಲ್ಲೂ ಉರಗ ಸ್ನೇಹಿ ಮಹಿಳೆ:
ಅಂದಹಾಗೆ, ಬಳ್ಳಾರಿಯಲ್ಲೂ ಉರಗ ಸ್ನೇಹಿ ಮಹಿಳೆಯಿದ್ದಾರೆ! ಹೆಸರು ಶಶಿಕಲಾ. ನಗರದ ವಿಮ್ಸ್ ಆಸ್ಪತ್ರೆಯ ನೌಕರರಾದ ಕೆಎನ್ ನೆಗಳೂರ ಮಠ ಅವರ ಪತ್ನಿ. ಶಶಿಕಲಾ ಮೂಲತಃ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಸಾಸರವಾಡ ಗ್ರಾಮದವರು. ಹಾವೇರಿ ತಾಲೂಕಿನ ಗುತ್ತಲ ಗ್ರಾಮದಲ್ಲಿ ಪಿಯುಸಿವರೆಗೆ ಶಿಕ್ಷಣ ಪೂರೈಸಿದ್ದಾರೆ. ಗಮನಾರ್ಹವೆಂದರೆ ಶಶಿಕಲಾ ಪತಿ ನೆಗಳೂರಮಠ ಅವರು ಸಹ ಉರಗ ಸ್ನೇಹಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+