ಬೆಳಗಾವಿ: ಏಕಾಂಗಿಯಾಗಿ 250 ಕಿ.ಮೀ. ನಡೆದು ಪಂಡರಾಪುರದಿಂದ ಮರಳಿ ಮನೆ ಸೇರಿದ ಶ್ವಾನಕ್ಕೆ ಭರ್ಜರಿ ಮೆರವಣಿಗೆ.!
ಬೆಳಗಾವಿ, ಆಗಸ್ಟ್, 01: ಸಾಮಾನ್ಯವಾಗಿ ಮನುಷ್ಯರು ತಾವೇ ಬಹಳ ಬುದ್ಧಿವಂತ ಅಂತಾ ಅಂದುಕೊಂಡಿದ್ದಾರೆ. ಆದರೆ ಮನುಷ್ಯ ಮಾಡಲಾಗದ ಹರಸಾಹರದಂತಹ ಕೆಲಸವನ್ನು ಪ್ರಾಣಿಗಳು ಸಹ ಮಾಡುತ್ತವೆ ಎನ್ನುವುದಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ನಡೆದ ಈ ಶ್ವಾನದ ಸಾಹಸವೇ ಪ್ರಮುಖ ಸಾಕ್ಷಿಯಾಗಿದೆ. ಮಾಹಿತಿ ಇಲ್ಲಿದೆ ತಿಳಿಯಿರಿ.
ಪ್ರಾಣಿಗಳಿಗೆ ಮಾತನಾಡಲು, ಸಾಂದರ್ಭಿಕವಾಗಿ ತತಕ್ಷಣ ಪ್ರತಿಕ್ರಿಯಿಸಲು ಇಲ್ಲವೆ, ಆಹಾರ ವಸತಿ ಉದ್ದೇಶ ಹೊರತುಪಡಿಸಿ ಜೀವನದ ಇತರ ಆಸೆ, ಆಕಾಂಕ್ಷೆ, ಭಾವನೆ ವ್ಯಕ್ತಪಡಿಸಲು ಅವುಗಳಿಗೆ ಆಗದೇ ಇರಬಹುದು. ಆದರೆ ಸೂಕ್ಷ್ಮ-ಸಂಹ್ನೆ, ಸಂವೇದನೆಯಲ್ಲಿ, ಪ್ರಕೃತಿಯ ಆಗುಹೋಗುಗಳನ್ನು ಮುಂಚಿತವಾಗಿ ಅರಿಯುವಲ್ಲಿ ಮನುಷ್ಯನಿಗಿಂತಲೂ ಮುಂದೆ ಇವೆ ಎಂದು ಹೇಳಿದರೆ ತಪ್ಪಾಗಲಾರದು.

ದಿಂಡಿ ದೈವ ಯಾತ್ರಿಕರೊಂದಿಗೆ ಯಾತ್ರೆ ಹೊರಟ ಸಾಕು ನಾಯಿಯೊಂದು, ಹಿಂಬರುವಾಗ ಮಾಲೀಕರಿಂದ ಬೇರ್ಪಟ್ಟು 250 ಕಿಲೋ ಮೀಟರ್ ಏಕಾಂಗಿಯಾಗಿ ನಡೆದು ಸಾಗಿ ಮರಳಿ ಮನೆ ಸೇರಿದ ಕಥೆ ಇಲ್ಲಿದೆ ನೋಡಿ. ಆಷಾಢ ಏಕಾದಶಿ ನಿಮಿತ್ತ ಕರುಣಾಮಯಿ ಫಂಡರಪುರ ವಿಠ್ಠಲನ ಸನ್ನಿಧಿಗೆ ದಿಂಡಿ ಪಾದಯಾತ್ರೆ ಹೋಗಿದ್ದ ನಿಪ್ಪಾಣಿ ತಾಲೂಕಿನ ಯಮಗರ್ಣಿಯ ತನ್ನ ಮಾಲೀಕರೊಂದಿಗೆ ಈ ಶ್ವಾನ ತೆರಳಿತ್ತು.
ಯಮಗರ್ಣಿಯ ಜ್ಞಾನದೇವ ಕುಂಬಾರ ಎಂಬುವವರು ಸಹ ಯಾತ್ರಿಕರೊಂದಿಗೆ ಫಂಡರಪುರಕ್ಕೆ ಕಾಲ್ನಡಿಗೆ ಯಾತ್ರೆ ಕೈಗೊಂಡಿದ್ದರು. ಅವರೊಂದಿಗೆ ಈ ಸಾಕು ನಾಯಿ ಜುಲೈ 18ರವರೆಗೆ ಹಿಂಬಾಲಿಸಿತ್ತು. ಏಕಾದಶಿ ನಂತರ ವಾರಕರಿಗಳು ಫಂಡರಪುರದಿಂದ ಯಮಗರ್ಣಿಗೆ ಹಿಂದಿರುಗಲು ಹೊರಟರು. ನಾಯಿಯನ್ನು ವಾಹನದಲ್ಲಿ ತರುವ ಯತ್ನ ನಡೆಸಿದ್ದಾಗ ಕೊನೆ ಕ್ಷಣದಲ್ಲಿ ನಾಯಿ ಕಳೆದು ಹೋಗಿದೆ. ಬಳಿಕ ಹುಡುಕಿ ಹುಡುಕಿ ಬೇಸತ್ತ ವಾರಕರಿಗಳು ಸ್ವಗ್ರಾಮಕ್ಕೆ ನಿರಾಸೆಯಿಂದ ಹಿಂದಿರುಗಿದರು.
ಇನ್ನು ಫಂಡರಪುರದಲ್ಲಿ ಕಳೆದುಹೋಗಿದ್ದ ಅವರ ನಾಯಿ ಎರಡ್ಮೂರು ದಿನ 250 ಕಿಲೋ ಮೀಟರ್ ನಡೆದು -ನಡೆದು ಕ್ಷೇಮವಾಗಿ ಮನೆ ಸೇರಿ ಭಕ್ತರಿಗೆ ಆಶ್ಚರ್ಯವನ್ನುಂಟು ಮಾಡಿತ್ತು. ಬಳಿಕ ಗ್ರಾಮಸ್ಥರು ಆ ಶ್ವನವನ್ನು ವಾದ್ಯ-ಮೇಳದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಿ ಪ್ರೀತಿ ಗೌರವ ನೀಡಿ ಮನೆಗೆ ಸೇರಿಸಿಕೊಂಡು ಧನ್ಯತೆ ಮೆರೆದಿದ್ದಾರೆ.
ಬಿನ್ ಲಾಡೆನ್ ಸಂಹಾರಕ್ಕೆ ಬಳಸಿದ್ದ ಶ್ವಾನದ ತಳಿ:ಆಗಿನ ಕಾಲದಲ್ಲಿ ಭಯೋತ್ಪಾದನಾ ಚಟುವಟಿಕೆ ಮೂಲಕ ವಿಶ್ವವನ್ನೇ ನಡುಗಿಸಿದ್ದ ಉಗ್ರ ಒಸಾಮಾ ಬಿನ್ ಲಾಡೆನ್‌ನ ಪತ್ತೆಗೆ ಅಮೆರಿಕಾ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಆದರೆ ಕೊನೆಗೆ ಈತನ ಪತ್ತೆಗೆ ಸಹಕಾರಿಯಾಗಿದ್ದೇ ಈ ಚಾಣಕ್ಷ ಶ್ವಾನ. ಈ ಶ್ವಾನ ಇದೀಗ ಬೆಣ್ಣೆನಗರಿ ದಾವಣಗೆರೆಯಲ್ಲಿದೆ. ಇದರ ಕಾರ್ಯಚಟುವಟಿಗೆ ಹೇಗಿತ್ತು ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಅಮೆರಿಕಾ ದೇಶವು ಈತನ ಸಂಹಾರಕ್ಕೆ ಮಾಡಿದ ಪ್ರಯತ್ನಗಳು ಅಷ್ಟಿಷ್ಟಲ್ಲ. ಆಲ್ ಖೈದಾ ಎಂಬ ಉಗ್ರ ಸಂಘಟನೆಯ ಪ್ರಮುಖ ರೂವಾರಿಯಾದ ಲಾಡೆನ್ ಬಿಲ ಹುಡುಕಲು ಅಮೆರಿಕಾ ಸತತ ಪರಿಶ್ರಮ ಹಾಕಿತ್ತು. ಬಳಿಕ ಆತನನ್ನು ಹತ್ಯೆ ಮಾಡಲಾಗಿತ್ತು. ಈ ವಿಚಾರ ಈಗ ಯಾಕೆ ಅಂತೀರಾ. ವಿಶ್ವದ ಅಪಾಯಕಾರಿ ಉಗ್ರನ ಪತ್ತೆಗೆ ಚಾಣಾಕ್ಷ ಶ್ವಾನ ಬಳಕೆಯಾಗಿತ್ತು. ಆ ಶ್ವಾನ ಈಗ ದಾವಣಗೆರೆಯಲ್ಲಿ ಅಪರಾಧ ಚಟುವಟಿಕೆ ನಡೆಸುವವರ ಎದೆ ನಡುಗುವಂತೆ ಮಾಡಿದೆ.
ಒಸಾಮಾ ಬಿನ್ ಲಾಡೆನ್ ಹತ್ಯೆ ಮಾಡಲು ಅಮೆರಿಕಾ ನಡೆಸಿದ ತಂತ್ರಗಳು ಒಂದೆರಡಲ್ಲ. ಬಳಿಕ ಆತ ಅಡಗಿಕೊಂಡಿದ್ದ ಬಿಲ ಹುಡುಕಲು ಅಮೆರಿಕಾ ಈ ಶ್ವಾನ ಬಳಕೆ ಮಾಡಿತ್ತು. ಕೇವಲ ಅಮೆರಿಕಾ ಮಾತ್ರವಲ್ಲ, ಬೇರೆ ಬೇರೆ ರಾಷ್ಟ್ರಗಳಲ್ಲಿಯೂ ಜಗದ್ವಿಖ್ಯಾತಿ ಹೊಂದಿದೆ ಈ ಡಿಟೆಕ್ಟಿವ್ ಶ್ವಾನ. ದಾವಣಗೆರೆಗೆ ಬಂದಿರುವ ಈ ತಳಿಯ ಶ್ವಾನ ಶುರುವಿನಿಂದಲೇ ಕ್ರಿಮಿನಲ್‌ಗಳ ಹೆಡೆಮುರಿ ಕಟ್ಟಲು ಪೊಲೀಸರಿಗೆ ಸೇತುವೆಯಾಗಿ ನಿಂತಿದೆ.
2001ರ ಸೆಪ್ಟಂಬರ್ 11ರಂದು ನ್ಯೂಯಾರ್ಕ್‌ನ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರದ ಮೇಲೆ ವಿಮಾನ ದಾಳಿ ನಡೆದಾಗ ವಿಶ್ವವೇ ಬೆಚ್ಚಿಬಿದ್ದಿತ್ತು. ಆ ಬಳಿಕ ಅಮೆರಿಕಾ ಉಗ್ರನ ಸಂಹಾರಕ್ಕೆ ಮಾಸ್ಟರ್ ಪ್ಲಾನ್ ಮಾಡಿತ್ತು. ಈ ಪ್ಲಾನ್‌ನಲ್ಲಿ ಶ್ವಾನವೊಂದು ಬಳಕೆಯಾಗಿತ್ತು. ಪಾಕಿಸ್ತಾನದ ಅಬೋಟಾಬಾದ್‌ನಲ್ಲಿನ ಕಾಂಪೌಂಡ್‌ನಲ್ಲಿ ಬಿನ್ ಲಾಡೆನ್ ಹತ್ಯೆಗೀಡಾಗಿದ್ದ. ಆದರೆ ಈತನ ಪತ್ತೆ ಕಾರ್ಯದಲ್ಲಿ ಈ ಶ್ವಾನದ ಪರಿಶ್ರಮ ತಳ್ಳಿ ಹಾಕುವಂತಿಲ್ಲ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications