ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗೆ ಸೋಲು

ಬೆಳಗಾವಿ, ಡಿಸೆಂಬರ್ 31; ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದುಕೊಂಡೇ ಗ್ರಾಮ ಪಂಚಾಯಿತಿ ಚುನಾವಣೆ ಅಖಾಡಕ್ಕೆ ಇಳದಿದ್ದ ಅಭ್ಯರ್ಥಿಗೆ ಸೋಲಾಗಿದೆ. 'ಆಟೋ' ಚಿಹ್ನೆಯಡಿ ಕಣಕ್ಕಿಳಿಸಿದ್ದ ಅಭ್ಯರ್ಥಿ 430 ಮತಗಳನ್ನು ಪಡೆದಿದ್ದು, 156 ಮತಗಳಿಂದ ಸೋತಿದ್ದಾರೆ.

ಪರುಶರಾಮ ಪಾಕರೆ ಎಂಬುವವರು ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದ 1ನೇ ವಾರ್ಡ್‌ನಿಂದ ಪಂಚಾಯಿತಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. 37 ವರ್ಷದ ಪರುಶರಾಮ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದಾರೆ.

ರಾಜು ಸೋಮನಾಥ ವರತೆ 586 ಮತಗಳನ್ನು ಪಡೆದು ಪರುಶರಾಮ ಪಾಕರೆಯನ್ನು ಸೋಲಿಸಿದ್ದಾರೆ. ಮುಚ್ಚಂಡಿ ಗ್ರಾಮದ ಮಹೇಶ ಅವ್ವಾನೆ ಎಂಬಾತನ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಪರುಶರಾಮ ಪಾಕರೆ ಜೈಲು ಸೇರಿದ್ದಾರೆ.

Murder Accused Who Contest For Gram Panchayat Election From Jail Lost

ಎರಡು ತಿಂಗಳ ಹಿಂದೆ ಜೈಲು ಪಾಲಾಗಿದ್ದ ಪರುಶರಾಮ ಸ್ನೇಹಿತರ ಒತ್ತಾಯದ ಮೇರೆಗೆ ಚುನಾವಣಾ ಕಣಕ್ಕಿಳಿಸಿದ್ದರು. ಕೊಲೆ ಪ್ರಕರಣದಲ್ಲಿ 4ನೇ ಆರೋಪಿಯಾಗಿರುವ ಪರುಶರಾಮ ಪರವಾಗಿ ಸ್ನೇಹಿತರೇ ಗ್ರಾಮದಲ್ಲಿ ಪ್ರಚಾರವನ್ನು ಮಾಡಿದ್ದರು.

ಜೈಲಿನಲ್ಲಿದ್ದ ಪರುಶರಾಮ ಅಲ್ಲಿಂದಲೇ ನಾಮಪತ್ರಗಳಿಗೆ ಸಹಿ ಮಾಡಿ ಕಳಿಸಿದ್ದರು. ಪರುಶರಾಮ ಪರವಾಗಿ ಸ್ನೇಹಿತರೇ ನಾಮಪತ್ರವನ್ನು ಸಲ್ಲಿಸಿದ್ದರು. 430 ಮತಗಳನ್ನು ಪಡೆದರೂ ಪರುಶರಾಮ ಪಾಕರೆ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+