ಸಿಎಂ ಖುರ್ಚಿಯನ್ನೇ ಆವರಿಸಿದ್ದ ಶಾಸಕಿ ನಯನಾ ಮೋಟಮ್ಮ-ಮುಂದಾಗಿದ್ದೇನು ಗೊತ್ತಾ?
ಬೆಳಗಾವಿ, ಡಿಸೆಂಬರ್, 08: ಸಾಮಾನ್ಯವಾಸಿ ಮುಖ್ಯಮಂತ್ರಿಗಳ ಸೀಟ್‌ನಲ್ಲಿ ಕೂರಲು ಅವರಿಗೆ ಬಿಟ್ಟರೆ ಮತ್ತ್ಯಾರಿಗೂ ಅವಕಾಶ ಇರುವುದಿಲ್ಲ. ಆದರೆ ಇದೀಗ ಶಾಸಕಿಯೊಬ್ಬರು ಸಿಎಂ ಖುರ್ಚಿಯಲ್ಲೇ ಕೂರುವ ಪ್ರಯತ್ನ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹಾಗಾದರೆ ಮುಂದೆ ಆಗಿದ್ದಾದರೂ ಏನು ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ತೆಲಂಗಾಣ ಸಿಎಂ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಮುಗಿಸಿ ವಿಧಾನಸಭೆ ಕಲಾಪಕ್ಕೆ ಆಗಮಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಅಭಿನಂದಿಸಲು ಬಂದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರು ಮುಖ್ಯಮಂತ್ರಿ ಖುರ್ಚಿಯಲ್ಲಿ ಕುಳಿತಿದ್ದಾರೆ. ನಂತರ ಇದನ್ನು ಗಮನಿಸಿದ ಡಿ.ಕೆ.ಶಿವಕುಮಾರ್ ಅವರು ನಯನಾ ಅವರ ಕೈ ಹಿಡಿದು ಈ ಸೀಟ್‌ನಿಂದ ಮೇಲೆಳಿವಂತೆ ಸೂಚನೆ ನೀಡಿದ್ದಾರೆ.

ಹಾಗೆಯೇ ಇಂದು ಮುಖ್ಯಮಂತ್ರಿ ಖರ್ಚಿಯಮ್ಮ. ಹಾಗೆಲ್ಲ ಇಲ್ಲಿ ಕುಳಿತುಕೊಳ್ಳಬಾರದು ಎಂದು ಶಿವಕುಮಾರ್ ಅವರು ನಯನಾ ಮೋಟಮ್ಮ ಅವರಿಗೆ ಬುದ್ಧಿವಾದ ಹೇಳಿದ್ದಾರೆ. ಆದರೆ ವಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರು ಈ ಘಟನೆಯನ್ನು ಗಮನಿಸಿಯೂ ಗಮನಿಸದಂತೆ ಸುಮ್ಮನಿದ್ದರು ಎಂದು ತಿಳಿದುಬಂದಿದೆ.
ಹಾಗೆಯೇ ಬೆಂಗಳೂರಿನಲ್ಲಿ ಆಂಬುಲೆನ್‌ಗೆ ಚಾಲನೆ ನೀಡುವ ಸಂದರ್ಭದಲ್ಲಿ ಹೀಗೆ ಡಿಕೆಶಿ ಅವರು ಸಿಎಂ ಖುರ್ಚಿ ಮೇಲೆ ಕೂರಲು ಹೋಗಿದ್ದರು. ಈ ವೇಳೆ ಮುಖ್ಯಮಂತ್ರಿ ಅದು ನನ್ನ ಕುರ್ಚಿ ಕಣಯ್ಯ ಎಂದಿದ್ದರು. ಆಗ ಶಿವಕುಮಾರ್ ನಗುತ್ತಲೇ ಪಕ್ಕದ ಖುರ್ಚಿಗೆ ತೆರಳಿದ ಘಟನೆ ನಡೆದಿತ್ತು. ಆಗಾಗ ಇಂತಗ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ.
ಆರ್.ಅಶೋಕ್ ಆಕ್ರೋಶ
ರಾಜ್ಯ ಸರ್ಕಾರದ ಬಳಿ ರೈತರಿಗೆ ಕೊಡೋಕೆ ಹಣ ಇಲ್ಲ, ಆದರೆ ಅಲ್ಪಸಂಖ್ಯಾತರಿಗೆ ಮಾತ್ರ ಕೋಟಿ ಕೋಟಿ ಹಣ ಕೊಡುತ್ತೇವೆ ಅಂತಾ ಹೇಳುತ್ತಾರೆ. ಇದೇನಾ ನ್ಯಾಯ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಖಾಸಗಿ ಹೊಟೆಲ್‌ನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲವಿದೆ, ಆದರೆ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ. ಒಣಮೇವು, ಹಸಿ ಮೇವಿನ ಅಭಾವ ಉಂಟಾಗಿದ್ದು, ರೈತರು ಆತಂಕದಲ್ಲಿ ಇದ್ದಾರೆ. ರಾಜ್ಯದ ಯಾವ ಭಾಗದಲ್ಲಿಯೂ ಗೋಶಾಲೆ ತೆರೆದಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಕಾಂಗ್ರೆಸ್ ಸರ್ಕಾರ ಎಡಬಿಡಂಗಿ ಸರ್ಕಾರ ಆಗಿದೆ ಎಂದ ಅವರು, ಮೌಲ್ವಿಗಳಿಗೆ ದುಡ್ಡು ಕೊಡೋಕೆ ಜೇಬಿನಲ್ಲಿ ಹತ್ತು ಸಾವಿರ ಕೋಟಿ ಇಟ್ಟುಕೊಂಡು ಅಡ್ಡಾಡುತ್ತಾರೆ.ಇದ್ಯಾವ ನ್ಯಾಯ ಎಂದು ಅವರು ಪ್ರಶ್ನೆ ಮಾಡಿದರು. ಇನ್ನು ಕಾಂಗ್ರೆಸ್ ಸರ್ಕಾರ ಒಡೆದಾಳುವ ನೀತಿ ಅನುಸರಿಸುತ್ತಿದೆ. ರಾಜ್ಯದಲ್ಲಿ ದಲಿತರ ಹಣ ದುರ್ಬಳಕೆ ಆಗಬಾರದು ಎಂದು ಸರ್ಕಾರದ ವಿರುದ್ಧ ಗುಡುಗಿದರು.
ಸರ್ಕಾರ ರಾಜ್ಯದ ಜನತೆ ಮೇಲೆ ತೆರಿಗೆ ಹಾಕುತ್ತಿದ್ದೀರಿ. ರಾಜ್ಯದಲ್ಲಿ ಬರಗಾಲ ಉಂಟಾಗಿದೆ. ಇದರ ಬಗ್ಗೆ ಗಮನಹರಿಸಲಿ. ಕಾಂಗ್ರೆಸ್ ಸರ್ಕಾರದ ಬಳಿ ಹಣವಿಲ್ಲದೇ ಪಾಪರ್ ಆಗಿದ್ದಾರೆ. ಜನರ ಮೇಲೆ ವಿಪರಿತ ತೆರಿಗೆ ಹಾಕಿ ಹಣ ವಸೂಲಿ ಮಾಡೋಕೆ ಹೋಗುತ್ತಿದ್ದಾರೆ. ಚುನಾವಣೆಗೂ ಮುಂಚೆ ಗ್ಯಾರಂಟಿಗಳನ್ನು ಕೊಟ್ಟರು. ಈಗ ಏನಾಯಿತು ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications