• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅದ್ಧೂರಿಯಾಗಿ ನೆರವೇರಿದ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಮದುವೆ

By ಬೆಳಗಾವಿ ಪ್ರತಿನಿಧಿ
|

ಬೆಳಗಾವಿ, ನವೆಂಬರ್ 27: ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹಾಗೂ ಬಿ.ಕೆ.ಶಿವಕುಮಾರ್ ಪುತ್ರಿ ಡಾ.ಹಿತಾ ಅವರ ಮದುವೆ ಗೋವಾದಲ್ಲಿ ಅದ್ಧೂರಿಯಾಗಿ ನೆರವೇರಿತು.

ಗೋವಾದ ಲೀಲಾ ಪ್ಯಾಲೇಸ್ ರೆಸಾರ್ಟ್‌ನಲ್ಲಿ ವಿವಾಹ ಸಮಾರಂಭ ಆಯೋಜನೆ ಮಾಡಲಾಗಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಜೊತೆ ಡಾ.ಹಿತಾ ವಿವಾಹ ಸಮಾರಂಭಕ್ಕೆ ಅನೇಕ ರಾಜಕೀಯ ಗಣ್ಯರು ಆಗಮಿಸಿ, ನೂತನ ವಧು-ವರರಿಗೆ ಶುಭ ಕೋರಿದರು.

ನ.27 ರಂದು ಗೋವಾದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಅದ್ಧೂರಿ ವಿವಾಹ

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್, ಭದ್ರಾವತಿ ಶಾಸಕ ಬಿ‌.ಕೆ.ಸಂಗಮೇಶ್ವರ ಅವರ ಸಹೋದರ ಬಿ.ಕೆ.ಶಿವಕುಮಾರ್ ಪುತ್ರಿ ಡಾ.ಹಿತಾ ಅವರೊಂದಿಗೆ ವಿವಾಹವಾಯಿತು. ಕಳೆದ ಆಗಸ್ಟ್ ನಲ್ಲಿ ನಿಶ್ಚಿತಾರ್ಥವಾಗಿತ್ತು.

ಗೋವಾದಲ್ಲಿ ನಡೆದ ಮದುವೆ ಸಮಾರಂಭಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವ ಯು.ಟಿ‌.ಖಾದರ್, ಶಾಸಕ ಅಜಯ್ ಸಿಂಗ್, ಮಾಜಿ ಶಾಸಕ ಅಶೋಕ್ ಪಟ್ಟಣ್, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.

ಬುಧವಾರ ರಾತ್ರಿ ಮೆಹಂದಿ ಕಾರ್ಯಕ್ರಮ, ಗುರುವಾರದಂದು ಹಳದಿ ಕಾರ್ಯಕ್ರಮ ನೆರವೇರಿತ್ತು. ಇಂದು ಶುಕ್ರವಾರ ಮೃಣಾಲ್ ಹಾಗೂ ಡಾ.ಹಿತಾ ಅವರು ನವ ದಾಂಪತ್ಯಕ್ಕೆ ಕಾಲಿಟ್ಟರು. ಈ ವಿವಾಹ ಸಮಾರಂಭಕ್ಕೆ ಆಪ್ತರು, ಗಣ್ಯರು ಹಾಗೂ ರಾಜಕೀಯ ಮುಖಂಡರಿಗಷ್ಟೇ ಆಹ್ವಾನ ನೀಡಲಾಗಿತ್ತು.

English summary
Belagavi Rural MLA Lakshmi Hebbalkar's Son Mrinal And Dr Hita Marriage was held in Goa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X