'ಮಹಾ' ಸಚಿವರು ಬರ್ತಾರೆ ಅಂತಾ ಕನ್ನಡವನ್ನೆ ಮರೆತ ರಾಜ್ಯದ ಸಚಿವ
ಬೆಳಗಾವಿ, ಆಗಸ್ಟ್ 04: ಮಹಾರಾಷ್ಟ್ರದ ಸಚಿವರು ಬರುತ್ತಾರೆ ಎಂದು ರಾಜ್ಯದ ಸಚಿವರೊಬ್ಬರು ಕನ್ನಡವನ್ನೆ ಮರೆತಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನಲ್ಲಿ ನಡೆದಿದೆ.
Recommended Video
ರಾಜ್ಯದ ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ್ ಅವರು ಕರ್ನಾಟಕದ ಸಚಿವರಾದರೂ, ಕನ್ನಡ ಭಾಷೆಯನ್ನೆ ಮರೆತಂತಿದೆ. ಅಲ್ಲದೇ ರಾಜ್ಯ ಮತ್ತು ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಇದ್ದರೂ ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರವೂ ಇಲ್ಲದೆ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ.

ಅಥಣಿ ತಾಲೂಕಿನ ಬಾಳೆಗೇರಿ ಗ್ರಾಮದಲ್ಲಿ ಬಸವೇಶ್ವರ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಕೃಷಿ ಸಚಿವ ವಿಶ್ವಜೀತ ಕದಂ, ಎಂಎಲ್ಸಿ ಮೋಹನರಾವ್ ಕದಂ ಭಾಗಿಯಾಗಿದ್ದರು. ರಾಜ್ಯ ಸರ್ಕಾರದ ಸಚಿವರೊಬ್ಬರು ಭಾಗಿಯಾದ, ಕರ್ನಾಟಕದಲ್ಲಿಯೇ ಈ ಕಾರ್ಯಕ್ರಮ ಆಯೋಜನೆಯಾದರೂ ಸಹ ಕನ್ನಡ ಬ್ಯಾನರ್ ಇರಲಿಲ್ಲ ಎಂಬುದು ಕನ್ನಡದ ಶೋಚನೀಯ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.












Click it and Unblock the Notifications